ಸೋಮವಾರಪೇಟೆ, ಆ. ೩೧: ಕೊಡಗಿನ ಪಶ್ಚಿಮಘಟ್ಟ ವ್ಯಾಪ್ತಿಯ ಜನರ ನಿದ್ದೆಗೆಡುವಂತೆ ಮಾಡಿರುವ ಕಸ್ತೂರಿ ರಂಗನ್ ವರದಿ ಜಾರಿ ವಿಚಾರ ಹಾಗೂ ಸಿ ಮತ್ತು ಡಿ ಜಾಗ ವನ್ನು ಅರಣ್ಯಕ್ಕೆ ಸೇರ್ಪಡೆಗೊಳಿಸುವ ವಿಷಯಗಳು ಸೇರಿದಂತೆ ಇನ್ನಿತರ ಆದೇಶಗಳ ವಿರುದ್ಧ ಭಾರತೀಯ ಜನತಾ ಪಾರ್ಟಿ ಕಾನೂನು ಹೋರಾಟ ಕೈಗೊಳ್ಳಲು ಮುಂದಾಗಿದೆ.

ಇಲ್ಲಿನ ಕೊಡವ ಸಮಾಜದಲ್ಲಿ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಕಾನೂನು ಪ್ರಕೋಷ್ಠದ ವಿಶೇಷ ಸಭೆ ನಡೆದಿದ್ದು, ಇದರಲ್ಲಿ ಜಿಲ್ಲೆಯ ಜನತೆಯ ಪರವಾಗಿ ನ್ಯಾಯಾಲಯ ದಲ್ಲಿ ಹೋರಾಟ ರೂಪಿಸಲು ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನತೆಗೆ ಒಂದಿಲ್ಲೊAದು ಸಮಸ್ಯೆ ತಂದೊಡ್ಡುತ್ತಲೇ ಬಂದಿದೆ. ಈಗಿನ ಕೆಲ ಆದೇಶಗಳಂತೂ ಜನತೆ ಯನ್ನು ಒಕ್ಕಲೆಬ್ಬಿಸಿ ನಿರ್ಗತಿಕರನ್ನಾಗಿ ಮಾಡುವಂತಿದೆ. ಜನಪರವಾಗಿ ಆಡಳಿತ ನಡೆಸುವ ಬದಲಿಗೆ, ನಕಲಿ ಪರಿಸರವಾದಿಗಳ ಕೈಗೊಂಬೆಯAತಾಗಿ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದರು.

ಬಿಜೆಪಿ ಸರ್ಕಾರವಿದ್ದ ಸಂದರ್ಭ ಜನರಿಗೆ ತೊಂದರೆಯಾಗದAತೆ ಆಡಳಿತ ನಡೆಸಲಾಗಿದೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದಲೂ ಒಂದಿಲ್ಲೊAದು ಸಮಸ್ಯೆಗಳನ್ನು ಜನರಿಗೆ ಹೇರುತ್ತಲೇ ಬಂದಿದೆ. ಪ್ರಬಲ ವಿರೋಧ ಪಕ್ಷವಾಗಿ ಬಿಜೆಪಿ ಜನತೆಯ ಪರವಾಗಿ ನಿಲ್ಲಬೇಕಿದೆ. ಎಲ್ಲಾ ರೀತಿಯ ಹೋರಾಟಗಳಿಗೆ ಶಕ್ತಿ ತುಂಬಬೇಕಿದೆ. ರೈತರನ್ನು ಒಕ್ಕಲೆಬ್ಬಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಅಭಿಪ್ರಾಯಿಸಿದರು.

ಈ ನಿಟ್ಟಿನಲ್ಲಿ ಬಿಜೆಪಿಯಿಂದಲೇ ನ್ಯಾಯಾಲಯದ ಮೂಲಕ ಹೋರಾಟ ಆರಂಭಿಸಬೇಕಿದೆ. ಪಕ್ಷದಿಂದಲೇ ಹಿರಿಯ ವಕೀಲರನ್ನು ನೇಮಿಸಿ, ಸರ್ಕಾರದ ಆದೇಶಗಳನ್ನು ಪ್ರಶ್ನಿಸಬೇಕಿದೆ. ವಾಸ್ತವಾಂಶದ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ಜನಾಂದೋಲನವೂ ಅಗತ್ಯವಾಗಿದೆ. ಪ್ರಕೋಷ್ಠದ ಸದಸ್ಯರುಗಳು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ತಕ್ಷಣದಿಂದ ಆಗಬೇಕಿದೆ.

ತಕ್ಷಣಕ್ಕೆ ಕಸ್ತೂರಿ ರಂಗನ್ ವರದಿ ಜಾರಿಗೆ ತಕರಾರು ಅರ್ಜಿ ಸಲ್ಲಿಸಬೇಕು. ಸಿ. ಮತ್ತು ಡಿ. ಜಾಗ ಮರಳಿ ಅರಣ್ಯಕ್ಕೆ ಪಡೆಯುವ ಸಂಬAಧ ಈಗಾಗಲೇ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಅದೇಶ ಗಳನ್ನು ಹೊರಡಿಸುತ್ತಿದ್ದು, ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಪಕ್ಷದ ವತಿಯಿಂದಲೇ ವಕೀಲರನ್ನು ನೇಮಿಸಬೇಕು ಎಂದ ರಂಜನ್, ಪಶ್ಚಿಮಘಟ್ಟ ಉಳಿಸಲು ಯಾವುದೇ ಅಭ್ಯಂತರವಿಲ್ಲ. ಆದರೆ ಸರ್ಕಾರಿ ಜಾಗದಲ್ಲಿ ಬದುಕು ಕಟ್ಟಿಕೊಂಡಿರುವ ಮಂದಿಯನ್ನು ಒಕ್ಕಲೆಬ್ಬಿಸಲು ಬಿಡಬಾರದು. ಇರುವ ಅರಣ್ಯವನ್ನು ಉಳಿಸಿಕೊಳ್ಳಲು ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಬೇಕಿದ್ದರೆ ಸರ್ಕಾರ ಕೈಗೊಳ್ಳಲಿ ಎಂದರು.

ಸಿ ಮತ್ತು ಡಿ ಜಾಗವನ್ನು ಅರಣ್ಯವೆಂದು ಘೋಷಿಸಿ, ತೆರವು ಕಾರ್ಯ ನಡೆಸಿದರೆ ಈ ಭಾಗದ ನಾಗರೀಕತೆಯೇ ಅಳಿಯುವ ಸಂಭವವಿದೆ. ಅನೇಕ ದಶಕಗಳಿಂದ ನೆಲೆಸಿರುವ ಮಂದಿ ಬೀದಿಪಾಲಾಗಬೇಕಾಗುತ್ತದೆ ಎಂದು ವಕೀಲರಾದ ಹೊಸಬೀಡು ಪವನ್ ಹೇಳಿದರು.

ತಾನು ಶಾಸಕನಾಗಿದ್ದ ಸಂದರ್ಭ ಸಿ ಮತ್ತು ಡಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಸುಮಾರು ೨ ಸಾವಿರ ಮಂದಿಗೆ ಹಕ್ಕುಪತ್ರ ನೀಡಲಾಗಿದೆ. ಆರಂಭದಲ್ಲಿ ಕೃಷಿ ಪ್ರದೇಶಗಳಿಗೂ ಫಾರಂ ೫೦, ೫೩, ೫೭ ರಡಿಯಲ್ಲಿ ದಾಖಲೆ ನೀಡಲಾಗಿದೆ. ಸಿ ಮತ್ತು ಡಿ. ಜಾಗಕ್ಕೆ ಸಂಬAಧಿಸಿದ ಯಾವ ಅರ್ಜಿಯನ್ನೂ ತಿರಸ್ಕರಿಸಿಲ್ಲ. ಒಂದು ವೇಳೆ ಅರ್ಜಿ ತಿರಸ್ಕರಿಸಿದಿದ್ದರೆ ಇನ್ನಷ್ಟು ಸಮಸ್ಯೆಯಾಗುತ್ತಿತ್ತು ಎಂದರು.

ಇದೀಗ ಅರಣ್ಯ ವ್ಯವಸ್ಥಾಪನಾ ಧಿಕಾರಿಗಳು ಆದೇಶಗಳನ್ನು ಹೊರಡಿಸುತ್ತಿದ್ದು, ತಕರಾರು ಇದ್ದರೆ ಸಲ್ಲಿಸುವಂತೆ ಸೂಚಿಸಿದ್ದಾರೆ. ತಕ್ಷಣ ಸಿ ಮತ್ತು ಡಿ ಜಾಗದಲ್ಲಿ ಕೃಷಿ ಮೂಲಕ ಬದುಕು ಕಟ್ಟಿಕೊಂಡಿರುವವರು ತಮ್ಮ ತೋಟದಲ್ಲಿ ಮಾಡಿರುವ ಕೃಷಿಯ ಭಾವಚಿತ್ರ ಸಹಿತ, ಕಂದಾಯ ಇಲಾಖೆಗೆ ಹಕ್ಕುಪತ್ರಕ್ಕಾಗಿ ಸಲ್ಲಿಸಿರುವ ಅರ್ಜಿಯ ನಕಲು ಪ್ರತಿ, ವೈಯುಕ್ತಿಕ ಅರ್ಜಿ ಸೇರಿದಂತೆ ಇನ್ನಿತರ ಪೂರಕ ದಾಖಲಾತಿಗಳನ್ನು ಸಲ್ಲಿಸಬೇಕು ಎಂದರು.

ಕಾನೂನು ಪ್ರಕೋಷ್ಠದ ಸದಸ್ಯರುಗಳು ಪ್ರತಿ ಗ್ರಾಮಗಳಿಗೆ ತೆರಳಿ ಸ್ಥಳೀಯರೊಂದಿಗೆ ಈ ಬಗ್ಗೆ ಚರ್ಚಿಸಿ, ತಿಳುವಳಿಕೆ ನೀಡಬೇಕು. ಅರ್ಜಿ ಸಹಿತ ದಾಖಲಾತಿಗಳು ಸಲ್ಲಿಕೆಯಾಗುವಂತೆ ನೋಡಿಕೊಳ್ಳ ಬೇಕು. ಮತ್ತೊಂದು ಭಾಗದಲ್ಲಿ ಕಾನೂನು ಹೋರಾಟವನ್ನು ಬಿಜೆಪಿ ಮಾಡಲಿದೆ ಎಂದರು. ಮುಂದಿನ ಸೆಪ್ಟೆಂಬರ್ ೫ರಂದು ಮತ್ತೊಮ್ಮೆ ಸಭೆ ನಡೆಸಿ, ಹೋರಾಟದ ರೂಪುರೇ ಷೆಗಳನ್ನು ಸಿದ್ಧಪಡಿಸಲಾ ಗುವುದು ಎಂದು ರಂಜನ್ ತಿಳಿಸಿದರು.

ಕೊಡಗಿನಲ್ಲಿ ೨೮ಕ್ಕೂ ಅಧಿಕ ಟೆನ್ಯೂರ್‌ಗಳಿದ್ದು, ಹೈಕೋರ್ಟ್ನಲ್ಲಿ ಸಮರ್ಥ ವಕೀಲರನ್ನು ನೇಮಿಸಿ ವಾದ ಮಂಡಿಸಬೇಕೆAದು ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಮನ್ಯುಕುಮಾರ್ ಸಲಹೆ ನೀಡಿದರು.

ಸಿ ಮತ್ತು ಡಿ ಜಾಗದ ಸಮಸ್ಯೆ ಯೊಂದಿಗೆ ಕಸ್ತೂರಿ ರಂಗನ್ ವರದಿ ಜಾರಿ, ವನ್ಯ ಪ್ರಾಣಿಗಳ ಕೊಂಬು ಸೇರಿದಂತೆ ಇನ್ನಿತರ ಪಳೆಯುಳಿಕೆಯನ್ನು ಅರಣ್ಯ ಇಲಾಖೆ ವಾಪಸ್ ಕೇಳುತ್ತಿರುವ ಆದೇಶ, ಖಾಸಗಿ ತೋಟಗಳಲ್ಲಿ ಬೆಳೆಸಿರುವ ಮರಗಳನ್ನು ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆಯಲು ಯತ್ನಿಸುತ್ತಿರುವ ಕ್ರಮದ ವಿರುದ್ಧವೂ ಕಾನೂನು ಭಾಗದಲ್ಲಿ ಹೋರಾಟ ಮುಂದುವರೆಸ ಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಹೇಳಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಗ್ರಾಮ ಸಭೆಗಳನ್ನು ಕರೆದು ಅರಣ್ಯ ಇಲಾಖೆ ಸೇರಿದಂತೆ ಸರ್ಕಾರದ ಇಂತಹ ಆದೇಶದ ವಿರುದ್ಧ ನಿರ್ಣಯ ಅಂಗೀಕರಿಸಿ ಸಲ್ಲಿಸಬೇಕು. ಈ ಕಾರ್ಯ ತುರ್ತು ಆಗುವಂತೆ ನೋಡಿಕೊಳ್ಳಬೇಕೆಂದು ಮೇದಪ್ಪ ಅವರು ಸಲಹೆ ನೀಡಿದರು.

ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್ ಅವರು ಸಿ ಮತ್ತು ಡಿ ಜಾಗಕ್ಕೆ ಸಂಬAಧಿಸಿದAತೆ ಸರ್ಕಾರದ ಆದೇಶಗಳ ಬಗ್ಗೆ ವಿಸ್ತೃತ ವರದಿ ಮಂಡಿಸಿದರು. ಸಭೆಯಲ್ಲಿ ಹಿರಿಯ ವಕೀಲರಾದ ಗಣಪತಿ, ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾನೂನು ಹೋರಾಟದ ಬಗ್ಗೆ ಸಭೆಯಲ್ಲಿದ್ದ ವಕೀಲರುಗಳಿಂದ ಸಲಹೆಗಳನ್ನು ಸ್ವೀಕರಿಸಲಾಯಿತು. ಸೆ. ೫ರಂದು ಮತ್ತೆ ಸಭೆ ನಡೆಸಲು ನಿರ್ಧರಿಸಲಾಯಿತು.