ಮಡಿಕೇರಿ, ಆ. ೩೧: ಮಡಿಕೇರಿ ವ್ಯಾಪ್ತಿಯ ಕೆ. ನಿಡುಗಣೆ ಗ್ರಾಮದಲ್ಲಿ ೨೦೧೮-೧೯ರ ಅವಧಿಯಲ್ಲಿ ೮೦೮ ಮರಗಳನ್ನು ಬಾಣೆ ಜಾಗದಲ್ಲಿ ಮರ ಕಡಿಯಲು ಅಂದಿನ ಡಿಸಿಎಫ್ ಎಂ.ಎಲ್. ಮಂಜುನಾಥ್ ಅವರು ಅನಧಿಕೃತವಾಗಿ ಅನುಮತಿ ನೀಡಿರುವ ಪ್ರಕರಣ ಸಂಬAಧ ಅವರ ನಿವೃತ್ತಿ ಪಿಂಚಣಿ ಹಣದಲ್ಲಿ ಕಡಿತಗೊಳಿಸಿ ಆದೇಶಿಸಿದೆ. ಇದೀಗ ಅವರು ನಿವೃತ್ತಿ ಹೊಂದಿದ್ದು ಸರಕಾರ ಸಂಪೂರ್ಣ ತನಿಖೆ ನಡೆಸಿ ಆಗಸ್ಟ್ ೨೦ರಂದು ಅವರ ಮೇಲೆ ಇದ್ದ ಆರೋಪ ಗಳೆಲ್ಲವೂ ಸಾಬೀತಾದ್ದ ರಿಂದ, ಮರ ಕಡಿಯಲು ಅನುಮತಿ ನೀಡುವಾಗ ಕಾನೂನು ನಿಯಮಗಳನ್ನು ಪಾಲಿಸದರಿಂದ ಅವರ ನಿವೃತ್ತಿ ಹಣದಲ್ಲಿ ಎರಡು ವರ್ಷಗಳ ತನಕ ಶೇಕಡ ಐದರಷ್ಟು ಕಡಿತಗೊಳಿಸುವ ಆದೇಶ ಹೊರಡಿಸಿದೆ.

ಕರ್ನಾಟಕ ಹೌಸಿಂಗ್ ಬೋರ್ಡ್ ಕಾರ್ಪೊರೇಷನ್ ಗುಂಪು ಮನೆ ಕಟ್ಟಲು

(ಮೊದಲ ಪುಟದಿಂದ) ಜಾಗ ಖರೀದಿಸಿ ಅಲ್ಲಿ ೮೦೮ ಮರಗಳನ್ನು ಕಡಿಯಲು ಅನುಮತಿ ೨೦೧೮ ರಲ್ಲಿ ಕೋರಲಾಗಿತ್ತು. ಅಂದು ಕರ್ತವ್ಯದಲ್ಲಿದ್ದ ಡಿಸಿಎಫ್ ರವರು ನಿಯಮ ಪಾಲಿಸದೆ, ಜಂಟಿ ಸರ್ವೆ ನಡೆಸದೆ ಏಕಾಏಕಿ ನೇರವಾಗಿ ಮರ ಕಡಿಯಲು ಅನುಮತಿ ನೀಡಿದ್ದರು. ಈ ಬಗ್ಗೆ ‘ಶಕ್ತಿ’ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು.

ಈ ಹಿನ್ನೆಲೆಯಲಿ ಸರ್ಕಾರ ಡಿಸಿಎಫ್ ಅವರನ್ನು ಅಮಾನತು ಗೊಳಿಸಿ ತನಿಖೆಗೆ ಒಳಪಡಿಸಿತ್ತು. ಅರಣ್ಯ ಇಲಾಖೆ ಅಂದು ಕಡಿದು ಹಾಕಲಾಗಿದ್ದ ೭೩೮ ಮರಗಳನ್ನು ಡಿಪೋಗೆ ಸಾಗಿಸಿ ಸರ್ಕಾರ ಮರವನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಮಂಜುನಾಥ್ ಅವರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಅಂದು ಶೋಕಾಸ್ ನೋಟಿಸ್ ನೀಡಿದ್ದರೂ, ಮಂಜುನಾಥ್ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆ ಹಿನ್ನೆಲೆಯಲ್ಲಿ

ಅವರ ವಿರುದ್ಧ ಇಲಾಖೆ ೨೦೨೧ರಲ್ಲಿ ಇಲಾಖಾ ವಿಚಾರಣೆ ಆರಂಭಿಸಿತ್ತು. ೨೦೨೩ರಲ್ಲಿ ವಿಚಾರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಆರೋಪ ಹೊರಿಸಲಾಗಿತ್ತು. ೭೩೮ ಮರಗಳನ್ನು ಕಡಿದ ಜಾಗ ಬಾಣೆ ಜಾಗವಾಗಿದ್ದು, ಅಲ್ಲಿ ಮರ ಕಡಿಯಬೇಕಾದರೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದ್ದರೂ, ಅದನ್ನು ಮೀರಿ ವೈಯಕ್ತಿಕ ಆಸಕ್ತಿಯಿಂದ ಮಂಜುನಾಥ್ ಅವರು ಅನುಮತಿ ನೀಡಿದ್ದರು ಎಂದು ವರದಿ ಉಲ್ಲೇಖಿಸಿತ್ತು. ಅಲ್ಲದೆ ಈ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಲು ಅಧಿಕಾರಿ ಯಾವುದೇ ತಕರಾರು ಸಲ್ಲಿಸಿಲ್ಲವೆಂದು ತನಿಖಾಧಿಕಾರಿಗಳು ಪ್ರಸ್ತಾಪಿಸಿದ್ದರು. ಜಂಟಿ ಸರ್ವೆ ಮಾಡಿಸದೆ ಕಾನೂನಾತ್ಮಕವಾಗಿ ಮರ ಕಡಿಯಲು ಅನುಮತಿ ನೀಡದೆ ಕೇವಲ ಲೆಟರ್‌ಹೆಡ್‌ನಲ್ಲಿ ಆದೇಶ ನೀಡಿದು ದನ್ನು ಹಿರಿಯ ಅಧಿಕಾರಿಗಳು ವರದಿಯಲ್ಲಿ ಪ್ರಸ್ತಾಪಿಸಿದ್ದರು.

ವಿಚಾರಣಾ ಸಂದರ್ಭ ಮಂಜುನಾಥ್ ಅವರು ತಮ್ಮ ಕ್ರಮದ ಬಗ್ಗೆ ವಿವರಣೆ ನೀಡದೆ, ಈ ಜಾಗವು ಖಾಸಗಿ ಜಾಗ ಎಂದು ವಾದಿಸಿದ್ದನ್ನು ಸರಕಾರ ಒಪ್ಪಿಕೊಂಡಿರಲಿಲ್ಲ. ಇದೀಗ ಅವರಿಗೆ ದಂಡ ವಿಧಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿದೆ.