ಗೋಣಿಕೊಪ್ಪಲು, ಸೆ.೨: ಕಾಡಾನೆಗಳ ಹಿಂಡು ರೈತರ ತೋಟದಲ್ಲಿದ್ದ ಸುಮಾರು ೭೦ ವರ್ಷ ಹಳೆಯದಾದ ಕಾಫಿ ಗಿಡಗಳನ್ನು ಬುಡ ಸಹಿತ ಕಿತ್ತು ಹಾಕಿದ ಘಟನೆ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೊಕ್ಯಾ ಗ್ರಾಮದಲ್ಲಿ ನಡೆದಿದೆ.

ಕಾಡಾನೆಗಳ ದಾಂಧಲೆಗೆ ೪೦ ಕ್ಕೂ ಹೆಚ್ಚಿನ ಫಸಲು ಬಿಟ್ಟಿದ್ದ ಕಾಫಿ ಗಿಡಗಳು ನೆಲೆಕಚ್ಚಿವೆ. ಚೆಪ್ಪುಡೀರ ಕಾರ್ಯಪ್ಪ ಎಂಬವರ ಕಾಫಿ ತೋಟದಲ್ಲಿ ಈ ಘಟನೆ ನಡೆದಿದೆ. ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ತಿತಿಮತಿ ಅರಣ್ಯ ಇಲಾಖೆಯ ಕಚೇರಿಗೆ ಭೇಟಿ ನೀಡುವ ಮೂಲಕ ಅಧಿಕಾರಿಗಳಿಂದ ಈ ಬಗ್ಗೆ ಅಗತ್ಯ ಮಾಹಿತಿ ಕಲೆ ಹಾಕಿದರು.

ನಂತರ ಚೆಪ್ಪುಡೀರ ಕಾರ್ಯಪ್ಪ ಅವರ ಮನೆಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ತೆರಳಿ ಅವರಿಗೆ ಪರಿಹಾರ ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು.

ತಿತಿಮತಿ ವಲಯ ಅರಣ್ಯ ಅಧಿಕಾರಿಗಳಾದ ಗೋಪಾಲ್ ಅವರಿಗೆ ನಿರ್ದೇಶನ ನೀಡಿದರು. ರೈತರಿಂದ ನಂತರ ಚೆಪ್ಪುಡೀರ ಕಾರ್ಯಪ್ಪ ಅವರ ಮನೆಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ತೆರಳಿ ಅವರಿಗೆ ಪರಿಹಾರ ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು.

ತಿತಿಮತಿ ವಲಯ ಅರಣ್ಯ ಅಧಿಕಾರಿಗಳಾದ ಗೋಪಾಲ್ ಅವರಿಗೆ ನಿರ್ದೇಶನ ನೀಡಿದರು. ರೈತರಿಂದ ಮನವಿ ಪತ್ರ ಸ್ವೀಕರಿಸಿದರು. ಬಳಿಕ ರೈತರ ಮನೆಯ ಆವರಣದಲ್ಲಿಯೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರೈತ ಸಂಘದ ಪ್ರಮುಖರೊಂದಿಗೆ ಸಭೆ ನಡೆಸಿದರು.

ಈ ವೇಳೆ ಎಸಿಎಫ್ ಗೋಪಾಲ್ ಪ್ರತಿಕ್ರಿಯಿಸಿ, ಕಾಡಾನೆಗಳು ಕಾಫಿ ತೋಟದಲ್ಲಿ ಈ ರೀತಿ ಬುಡ ಸಹಿತ ಗಿಡಗಳನ್ನು ಕಿತ್ತು ಹಾಕಿರುವುದು ಗಂಭೀರ ವಿಷಯವಾಗಿದೆ. ಕಾಡಾನೆಗಳ ಗುಂಪಿಗೆ ಯಾರಾದರೂ ತೊಂದರೆ ನೀಡಿರ ಬಹುದಾದ ಸಂಶಯವಿದ್ದು, ಇದರಿಂದ ಅಕ್ರೋಶಗೊಂಡ

(ಮೊದಲ ಪುಟದಿಂದ) ಕಾಡಾನೆಗಳು ತಮ್ಮ ಸಿಟ್ಟನ್ನು ಈ ರೀತಿ ತೋರಿಸಿರಬಹುದು. ಎಂದು ಅಭಿಪ್ರಾಯಿಸಿದರು.

ಈ ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕೆಲಸ ನೆನೆಗುದಿಗೆ ಬಿದ್ದ ಹಿನ್ನೆಲೆಯಲ್ಲಿ ಕಾಡಾನೆಗಳ ಸಂಚಾರ ನಡೆಯುತ್ತಿದೆ. ದೇವರ ಕಾಡಿನಲ್ಲಿ ಕಾಡಾನೆಗಳು ನೆಲೆ ನಿಲ್ಲುತ್ತಿವೆ. ಇದರಿಂದಾಗಿ ಸಮೀಪದ ಕಾಫಿ ತೋಟಕ್ಕೆ ತೆರಳಲು ಕಾರ್ಮಿಕರಿಗೆ ಸಾಧ್ಯವಾಗುತ್ತಿಲ್ಲ, ಈ ಬಗ್ಗೆ ಅರ್ಧದಲ್ಲಿ ನಿಂತು ಹೋಗಿರುವ ಕಾಮಗಾರಿ ಯನ್ನು ಬೇಗನೆ ಕೈಗೆತ್ತಿಕೊಳ್ಳಬೇಕೆಂದು ಸಂಕೇತ್ ಪೂವಯ್ಯ ಅವರಿಗೆ ಮನವಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಕೇತ್ ಪೂವಯ್ಯ ಅಧಿಕಾರಿಗಳ ಮಾಹಿತಿ ಪಡೆದು, ಶಾಸಕ ಪೊನ್ನಣ್ಣ ಅವರ ಗಮನಕ್ಕೆ ತರಲಾಗುವುದು ಹಾಗೂ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುವುದಾಗಿ ಭರವಸೆ ನೀಡಿದರು. ಸಭೆಯಲ್ಲಿದ್ದ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮಾತನಾಡಿ, ಕಾಡಾನೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಹುಡುಕಲೇ ಬೇಕಾಗಿದೆ. ಅನೇಕ ಬಾರಿ ಹೋರಾಟ ಮಾಡಿದ್ದರೂ ಶಾಶ್ವತ ಪರಿಹಾರ ಇನ್ನೂ ಲಭಿಸಿಲ್ಲ.

ಹೀಗಾಗಿ ಶಾಸಕ ಪೊನ್ನಣ್ಣ ಅವರ ಮುಂದಾಳತ್ವದಲ್ಲಿ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರೊಂದಿಗೆ ಸಭೆ ನಡೆಸುವ ಮೂಲಕ ಕೊಡಗಿನಲ್ಲಿ ಆಗುತ್ತಿರುವ ಕಾಡಾನೆಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವಂತೆ ಮನವಿ ಮಾಡಿದರು.

ಶಾಸಕ ಪೊನ್ನಣ್ಣ ಅವರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆಯೇ ಈ ಬಗ್ಗೆ ಮಾಹಿತಿ ನೀಡುವ ಮೂಲಕ ಉನ್ನತ ಮಟ್ಟದ ಸಭೆಯನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಿಸಲು ಪ್ರಯತ್ನ ಮಾಡುವುದಾಗಿ ಸಂಕೇತ್ ಭರವಸೆ ನೀಡಿದರು. ಸಭೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಎಸಿಎಫ್ ಗೋಪಾಲ್, ಆರ್‌ಎಫ್‌ಡಿಆರ್ ಎಫ್‌ಒ ಪ್ರಶಾಂತ್ ಹಾಗೂ ಲೋಕೇಶ್ ಆರ್.ಆರ್. ಟಿ.ಸಿಬ್ಬಂದಿ ಸೇರಿದಂತೆ ರೈತ ಸಂಘದ ಮುಖಂಡರಾದ ನಾಯಕಂಡ ರಮೇಶ್, ರಾಜೇಶ್, ಕರುಣಾಕರ, ಟಿ.ಜಿ.ಸುಬ್ರಹ್ಮಣಿ ಉಪಸ್ಥಿತರಿದ್ದರು.

- ಹೆಚ್.ಕೆ.ಜಗದೀಶ್