ಮಡಿಕೇರಿ, ಸೆ. ೧: ಭಾರತದಲ್ಲಿ ಅತೀ ವಿಶಿಷ್ಟ ಸಂಸ್ಕೃತಿ, ಪದ್ಧತಿ, ಪರಂಪರೆ ಹೊಂದಿರುವ ಆದಿಮ ಸಂಜಾತ ಕೊಡವ ಜನಾಂಗದ ಉಳಿವಿಗೆ ಕೊಡವ ಲ್ಯಾಂಡ್ ಸ್ವಾಯತತ್ತೆ ಮತ್ತು ಬುಡಕಟ್ಟು ಸ್ಥಾನಮಾನ ಅತ್ಯವಶ್ಯಕ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅಭಿಮತ ವ್ಯಕ್ತಪಡಿಸಿದರು.

ನಗರದ ಹೊರವಲಯದ ಕ್ಯಾಪಿಟಲ್ ವಿಲೇಜ್ ಸಭಾಂಗಣದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಆಯೋಜಿಸಿದ್ದ ೨೯ನೇ ವರ್ಷದ ಸಾಮೂಹಿಕ ಕೈಲ್‌ಪೊಳ್ದ್ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೊಡವರು ಜಾಗೃತಿಯಾಗ ದಿದ್ದಲ್ಲಿ ಜನಾಂಗದ ಪದ್ಧತಿ, ಪರಂಪರೆ ನಾಶವಾಗುತ್ತದೆ. ಪ್ರಪಂಚದಲ್ಲಿ ಕಡಿಮೆ ಜನಸಂಖ್ಯೆ ಇರುವ ಕೊಡವ ಜನಾಂಗವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರು ಕೈಜೋಡಿಸಬೇಕು. ನಾನು ಹಾಗೂ ಸುಬ್ರಮಣ್ಯ ಸ್ವಾಮಿ ಸೈದ್ಧಾಂತಿಕ ವಿರೋಧಿಗಳು. ಆದರೆ, ಕೊಡವರ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ಒಂದಾಗಿದ್ದೇವೆ. ಕೊಡಗಿನ ಸಂಸ್ಕೃತಿ, ಸಂಸ್ಕಾರ, ಸಾಹಿತ್ಯ ಪ್ರಪಂಚಕ್ಕೆ ಮಾದರಿಯಾಗಿದೆ. ದೇಶದಲ್ಲಿ ಈ ರೀತಿ ಸಂಸ್ಕೃತಿ ಬೇರೆಲ್ಲೂ ಕಾಣಸಿಗುವುದಿಲ್ಲ. ಸಂವಿಧಾನ ಜಾರಿ ಮುನ್ನ ಧರ್ಮಪ್ರಭುತ್ವ, ರಾಜಪ್ರಭುತ್ವ ಇತ್ತು. ಈ ಸಂದರ್ಭ ಸ್ಥಳೀಯರ ಭೂಮಿಗಳು ಅನ್ಯರ ಪಾಲಾಗಲು ಆರಂಭವಾದವು.

ಧರ್ಮಪ್ರಭುತ್ವ, ರಾಜಪ್ರಭುತ್ವ ಹೋಗಿ ಇದೀಗ ಸಂವಿಧಾನದಡಿ ಪ್ರಜಾಪ್ರಭುತ್ವ ಬಂದಿದೆ. ದೇಶಕ್ಕೆ ಕೊಡವರ ಕೊಡುಗೆ ಅಪಾರವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರ ಋಣ ತೀರಿಸಬೇಕು. ಕೊಡವ ಅಸ್ಮಿತೆ ಉಳಿವಿಗೆ ಬುಡಕಟ್ಟು ಸ್ಥಾನಮಾನ ಅವಶ್ಯಕವಾಗಿದೆ. ಹಿಮಾಚಲ ಪ್ರದೇಶ, ಕೊಡಗಿಗೂ ಸಂಸ್ಕೃತಿಯಲ್ಲಿ ಹೋಲಿಕೆ ಇದೆ. ಹಿಮಾಚಲ ಪ್ರದೇಶ ಭೂಮಿ, ನೆಲ ಉಳಿವಿಗೆ ವಿಶೇಷ ಕಾನೂನಿದೆ. ಮೇಘಾಲಯದಲ್ಲಿ ಬುಡಕಟ್ಟು ಜನಾಂಗದವರಿಗೆ ವಿಶೇಷ ರಾಜಕೀಯ ಸ್ಥಾನಮಾನವಿದೆ. ಶೆಡ್ಯೂಲ್ ೬ ಪ್ರಕಾರ ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನ ದೊರೆತರೆ ಕೊಡವರು ಮುನ್ನಲೆಗೆ ಬಂದು ಜನಾಂಗದ ಸಂಸ್ಕೃತಿ, ಪದ್ಧತಿ, ಆಚಾರ-ವಿಚಾರಗಳೊಂದಿಗೆ ಇಲ್ಲಿನ ನೆಲ-ಜಲ ಉಳಿಯುತ್ತದೆ ಎಂದು ಪ್ರತಿಪಾದಿಸಿದರು. ಎಲ್ಲರೊಂದಿಗೆ ಕಡಿಮೆ ಜನಸಂಖ್ಯೆ ಇರುವ ಕೊಡವರಿಗೂ ಸಮಾನ ಅವಕಾಶ ದೊರೆಯ ಬೇಕಾಗಿದೆ. ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಸಿಕೊಳ್ಳದಿದ್ದಲ್ಲಿ ಮುಂದೆ ಅಪಾಯ ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದ ಹರಿಪ್ರಸಾದ್, ಕೊಡವ ಸಾಹಿತ್ಯ ಉಳಿವಿಗೆ ಪ್ರತ್ಯೇಕ ಪ್ರಾಧಿಕಾರ ಬೇಕಾಗಿದೆ. ಭಾಷಾ ಅಕಾಡೆಮಿಯಿಂದ ಮಾತ್ರ ಇದು ಸಾಧ್ಯವಿಲ್ಲ. ಮುಂದಿನ ಪೀಳಿಗೆಯ ಉತ್ತಮ ಭವಿಷ್ಯ ಹಾಗೂ ಸರಿಸಮಾನ ಬದುಕಿಗೆ ಹೋರಾಟ ಅನಿವಾರ್ಯವಾಗಿದೆ. ಇಲ್ಲಿನ ಹೋರಾಟಕ್ಕೆ ಒಂದಲ್ಲ ಒಂದು ದಿನ ಜಯ ದೊರೆಯುತ್ತದೆ. ಕೊಡವರಿಗೆ ಜಾತಿ, ಧರ್ಮದ ಹಂಗಿಲ್ಲ. ಸಂಸ್ಕೃತಿಯೇ ಜನಾಂಗದ ಜೀವಾಳವಾಗಿದ್ದು, ಇದನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ಕೊಡವರು ಒಂದಾಗಬೇಕಾಗಿದೆ. ಕೊಡವರ ಹಕ್ಕನ್ನು ಸಮರ್ಥವಾಗಿ, ನಿರಂತರವಾಗಿ ಪ್ರತಿಪಾದಿಸುತ್ತಿರುವ ಸಿಎನ್‌ಸಿಯೊಂದಿಗೆ ಕೊಡವರ ಸಹಕಾರ ಅಗತ್ಯವಿದೆ ಎಂದು ಕರೆ ನೀಡಿದರು.

ಸಿಎನ್.ಸಿ. ಅಧ್ಯಕ್ಷ ನಂದಿನೆರವAಡ ನಾಚಪ್ಪ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗಿನ ರಕ್ಷಣೆಗೆ ಸಿಎನ್‌ಸಿ ಬದ್ಧವಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದೆ. ಇಲ್ಲಿನ ನೆಲಜಲ ರಕ್ಷಣೆಗೆ ಪ್ರತಿ ಕೊಡವರು ಒಂದಾಗಬೇಕು. ಹರಿಪ್ರಸಾದ್, ಸುಬ್ರಮಣ್ಯ ಸ್ವಾಮಿ ಕೊಡವ ಪರ ನಿಲುವು ಹೊಂದಿ ನೈತಿಕ, ರಾಜಕೀಯ, ನ್ಯಾಯಾಂಗ ಸಹಕಾರದೊಂದಿಗೆ ಕೈಜೋಡಿಸಿದ್ದಾರೆ. ಕೊಡವ ಜನಾಂಗದ ಹಿತಾಸಕ್ತಿ ಕಾಪಾಡಲು ಬೇರೆ ಪಕ್ಷಗಳ ಇಬ್ಬರು ನಾಯಕರು ಒಂದಾಗಿರುವುದು ಕೊಡವ ಜನಾಂಗದ ಉಳಿವಿಗಾಗಿ. ಇದನ್ನು ಅರಿತು ಕೊಡವರು ಕೈಜೋಡಿಸಬೇಕಾಗಿದೆ. ಭಾರತ ದೇಶಕ್ಕೆ ಅಪಾರ ಕೊಡುಗೆ ಕೊಡವ ಜನಾಂಗ ನೀಡಿದೆ. ಕೊಡವ ಭಾಷೆಯನ್ನು ೮ನೇ ಶೆಡ್ಯೂಲ್‌ಗೆ ಸೇರಿಸಬೇಕು. ಎಸ್.ಟಿ.ಟ್ಯಾಗ್, ಬಂದೂಕು ವಿನಾಯಿತಿಗೆ ಹರಿಪ್ರಸಾದ್ ಧ್ವನಿಯಾಗಿ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ನಮ್ಮ ನ್ಯಾಯಾಂಗ ಹೋರಾಟಕ್ಕೆ ಸುಬ್ರಮಣ್ಯ ಸ್ವಾಮಿ ಸಹಕರಿಸುತ್ತಿದ್ದಾರೆ ಎಂದರು.

ಬರ, ಪ್ರಾಕೃತಿಕ ವಿಕೋಪ ಆದ ವೇಳೆಯಲ್ಲಿ ಕೊಡವರತ್ತ ಬೊಟ್ಟು ಮಾಡುವ ಕೆಲಸವಾಗುತ್ತಿದೆ. ಹೋಂಸ್ಟೇ ಉದ್ಯಮದಿಂದ ಸ್ಥಳೀಯರ ಆರ್ಥಿಕ ಸಶಕ್ತೀಕರಣವಾಗುತ್ತಿದೆ. ಆದರೆ, ಉದ್ಯಮ ನಿಲ್ಲಿಸುವ ತೆರೆಮರೆ ಪ್ರಯತ್ನ ನಡೆದಿರುವುದು ಆತಂಕಕಾರಿ. ಕಡಮಕಲ್ಲಿನಿಂದ ಪೆರುಂಬಾಡಿ ತನಕ ಜಾಗಗಳಲ್ಲಿದ್ದ ಮರಗಳನ್ನು ಕೇರಳದ ಉದ್ಯಮಿಗಳು ಲೂಟಿ ಮಾಡಿದ್ದಾರೆ. ಆದರೆ, ತೋಟದಲ್ಲಿ ನಾವೇ ನೆಟ್ಟು ಬೆಳೆಸಿದ ಮರ ಕಡಿದರೆ ಅದನ್ನು ಅರಣ್ಯ ನಾಶ ಎಂದು ಬಿಂಬಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ದೊಡ್ಡ ಪ್ರಮಾಣದ ವಾಣಿಜ್ಯ ಜಾಗದ ವಿಸ್ತೀರ್ಣ ಕಡಿಮೆ ಮಾಡಿ ಹಂತಹAತವಾಗಿ ಮಾರಾಟ ಮಾಡುವ ಹುನ್ನಾರವೂ ನಡೆಯುತ್ತಿದೆ. ಹಲವು ವಿಚಾರಗಳಿಂದ ಕೊಡವ ಸಂಸ್ಕೃತಿ, ಪರಂಪರೆಗೆ ಧಕ್ಕೆ ಬರುತ್ತಿದೆ. ಇದನ್ನು ಜನತೆ ಗಂಭೀರವಾಗಿ ಪರಿಗಣಿಸಿ ಉಳಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಕೊಡವರ ಜಾಗಗಳು ಪರರ ಪಾಲಾಗುತ್ತಿವೆ. ಇದರಿಂದ ಮುಂದೆ ನಾವು ಅಸ್ತಿತ್ವ ಕಳೆದುಕೊಳ್ಳುತ್ತೇವೆ ಎಂದು ಆತಂಕ ವ್ಯಕ್ತಪಡಿಸಿದ ನಾಚಪ್ಪ, ನ್ಯಾಯಯುತ ಬೇಡಿಕೆಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಕೊಡವರ ಸಹಕಾರ ಬೇಕಿದೆ. ಅನ್ಯ ರಾಜ್ಯದವರಿಂದ ಕೊಡಗನ್ನು ಲೂಟಿ ಮಾಡುವ ಕೆಲಸ ನಡೆಯುತ್ತಿದೆ. ಟಿಂಬರ್ ಮಾಫಿಯ ಕೊಡಗನ್ನು ಕಾಡುತ್ತಿದೆ. ಯಾರಿಗೂ ಹೆದರದೆ ಕೊಡಗನ್ನು ಪಡೆದುಕೊಂಡ ಕೊಡವರು ಇಂದು ಉಳಿಸಿಕೊಳ್ಳಲು ಪರದಾಡುತ್ತಿರುವುದು ವಿಪರ್ಯಾಸ ಎಂದು ವಿಷಾದಿಸಿದರು.

ಹಕ್ಕೋತ್ತಾಯಗಳ ಮಂಡನೆ

ಇದೇ ಸಂದರ್ಭ ವಿವಿಧ ಹಕ್ಕೋತ್ತಾಯಗಳ ನಿರ್ಣಯವನ್ನು ಸಭೆಯಲ್ಲಿ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಮಂಡಿಸಿದರು. ಇದಕ್ಕೆ ಸಭೆಯಲ್ಲಿ ನೆರೆದಿದ್ದವರು ಒಪ್ಪಿಗೆ ಸೂಚಿಸಿದರು.

ನವೆಂಬರ್ ೧ ರಂದು ಕೊಡವ ಲ್ಯಾಂಡ್ ಹಕ್ಕೋತ್ತಾಯಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ ನವದೆಹಲಿ ಚಲೋಗೆ ಬೆಂಬಲಿಸಲು ಸಹಕಾರ ಕೋರಿದರು. ನ. ೨೬ ರಂದು ಕೊಡವ ನ್ಯಾಷನಲ್ ಡೇ, ಸಂವಿಧಾನ ದಿನ ಆಚರಣೆಗೆ ಕೈಜೋಡಿಸುವಂತೆ, ಹೊರಗಿನ ಭಂಡವಾಳಶಾಹಿಗಳಿಗೆ ಮಣೆ ಹಾಕಲು ಭಾರಿ ಪ್ರಮಾಣದ ವಾಣಿಜ್ಯ ಉದ್ದೇಶದ ಭೂ ಪರಿವರ್ತನೆ ವಿರೋಧಿಸಿ ನಡೆಯುತ್ತಿರುವ ಜನಜಾಗೃತಿ ಮಾನವ ಸರಪಳಿಗೆ ಸಹಕರಿಸುವಂತೆ ನಿರ್ಣಯ ಮಂಡಿಸಿದರು.

ಕೊಡವರ ಜೀವನ ಚಕ್ರದಲ್ಲಿ ಅಂತರ್ಗತವಾಗಿರುವ ಕೊಡವ ಹಬ್ಬ ಹರಿದಿನ, ಸಾಂಪ್ರದಾಯಕ ಆವಾಸ ಸ್ಥಾನ, ಪಾರಂಪರಿಕ ಭೂಮಿ, ಮಂದ್, ಮಾನಿ, ಕೈಮಡ, ಯುದ್ಧ ಸ್ಮಾರಕ, ನರಮೇಧ ದುರಂತ ಸ್ಥಳ, ದೇವರಕಾಡು, ಭಾಷೆ, ಪರ್ವತ, ಕಾವೇರಿ, ಸಂಸ್ಕೃತಿ ಉಳಿವಿಗೆ, ರಾಜ್ಯಾಂಗದತ್ತ ರಕ್ಷಣೆಗಾಗಿ ಸಿಎನ್‌ಸಿಯೊಂದಿಗೆ ಕೈಜೋಡಿಸುವುದಾಗಿ ಪಾಲ್ಗೊಂಡವರು ಪವಿತ್ರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಕೈಲ್ ಪೊಳ್ದ್ ಆಚರಣೆ

ಕೈಲ್‌ಪೊಳ್ದ್ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ, ಬಾಳೆ ದಿಂಡು ಕಡಿದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆಯುಧಗಳಿಗೆ ಪೂಜೆ ಸಲ್ಲಿಸಿ ತೆಂಗಿನ ಕಾಯಿಗೆ ಗುಂಡು ಹೊಡೆದು ದುಡಿಕೊಟ್ಟ್ ಪಾಟ್‌ಗೆ ನೆರೆದಿದ್ದವರು ಕುಣಿದು ಸಂಭ್ರಮಿಸಿ ಸಾಂಪ್ರದಾಯಕವಾಗಿ ಹಬ್ಬ ಆಚರಿಸಲಾಯಿತು. ಕಾರ್ಯಕ್ರಮದ ನಂತರ ಸಾಂಪ್ರದಾಯಿಕ ಖಾದ್ಯಗಳನ್ನು ಸವಿದರು.

ಕಾರ್ಯಕ್ರಮದಲ್ಲಿ ಕಲಿಯಂಡ ಮೀನಾ, ಬೊಪ್ಪಂಡ ಬೊಳ್ಳಮ್ಮ, ಪಟ್ಟಮಾಡ ಲಲಿತಾ, ಪುಲ್ಲೇರ ಸ್ವಾತಿ, ಅಪ್ಪಚ್ಚಿರ ರೀನಾ, ನಂದೇಟಿರ ಕವಿತಾ, ಚೋಳಪಂಡ ಜ್ಯೋತಿ, ಬೊಟ್ಟಂಗಡ ಸವಿತಾ, ಅರೆಯಡÀ ಸವಿತಾ, ಮಂದಪAಡ ರಚನ, ನಂದಿನೆರವAಡÀ ನಿಶಾ, ಪಾಲಂದಿರ ಲೀಲಾ, ನಂದಿನೆರವAಡ ಬೀನಾ, ಅಜ್ಜಿನಿಕಂಡ ಇನಿತಾ, ಅಪ್ಪಾರಂಡ ವಿನ್ಸಿ, ನಂದಿನೆರವAಡ ಸೋನಿ, ಮುದ್ದಿಯಡ ಲೀಲಾವತಿ, ಮಂದಪAಡ ನೇಹಾಲಿ ದೇಚಕ್ಕ, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಳ್ಮಂಡ ಜೈ, ಕಾಂಡೇರ ಸುರೇಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಜ್ಜಿಕುಟ್ಟೀರ ಲೋಕೇಶ್, ಪಟ್ಟಮಾಡ ಕುಶ, ಕಿರಿಯಮಾಡ ಶೆರೀನ್, ಚಂಬAಡ ಜನತ್, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್, ನಂದೇಟಿರ ರವಿ, ಪಾಲಂದಿರ ಜೋಯಪ್ಪ, ಬಡುವಂಡ ವಿಜಯ, ಮಂದಪAಡ ಮನೋಜ್, ಮಂದಪAಡ ಸೂರಜ್, ಪೊರಿಮಂಡ ದಿನಮಣಿ, ಪುಲ್ಲೇರ ಕಾಳಪ್ಪ, ಕಾಟುಮಣಿಯಂಡ ಉಮೇಶ್, ಪುಟ್ಟಿಚಂಡ ದೇವಯ್ಯ, ಮಣವಟ್ಟಿರ ಚಿಣ್ಣಪ್ಪ, ಪಾರುವಂಗಡ ನವೀನ್, ಅಪ್ಪೆಂಗಡ ಮಾಲೆ, ನಂದಿನೆರವAಡ ಟಿಪ್ಪು, ನಂದಿನೆರವAಡ ಅಪ್ಪಯ್ಯ, ನಂದಿನೆರವAಡ ದಿನೇಶ್, ಚೋಳಪಂಡ ನಾಣಯ್ಯ, ನಂದಿನೆರವAಡÀ ಅಯ್ಯಣ್ಣ, ನಂದಿನೆರವAಡ ವಿಜು, ನಂದಿನೆರವAಡ ಮಧು, ನಂದಿನೆರವAಡ ಬೋಪಣ್ಣ, ನಂದಿನೆರವAಡ ಅಪ್ಪಣ್ಣ, ಪುಲ್ಲೇರ ಹರ್ಷ, ಪುಲ್ಲೇರ ಅಶ್ವಿತ್, ಮಣವಟ್ಟಿರ ನಂದ, ಮಣವಟ್ಟಿರ ಸ್ವರೂಪ್, ಬಾಚಮಂಡ ಪೂವಪ್ಪ, ಚೀಯಬೆರ ಸತೀಶ್, ಆಳಮಂಡ ನೆಹರು, ನಂದಿನೆರವAಡ ಶ್ಲೋಕ್, ಅಯ್ಯಲಪಂಡ ಮಿಟ್ಟು, ಹಂಚೇಟ್ಟಿರ ಮನು, ಸೋಮೆಯಂಡ ರೇಶ, ಪಾಲೆಕಂಡ ಪ್ರತಾಪ್, ಮೀದೇರಿರÀ ತಿಮ್ಮಯ್ಯ, ಪಾಲಂದಿರ ಅರ್ಜುನ್, ಬಾಚೀರ ಚಿಣ್ಣಪ್ಪ, ಪೊಯ್ಯೇಟಿರ ನಂದ, ಮಂಡೇಟಿರ ಮಂದಪ್ಪ, ಪೂಳಂಡ ಪೂವಯ್ಯ, ಪೆಮ್ಮಂಡ ಲವ, ಪಟ್ಟಮಾಡ ಅಶೋಕ್, ಮಂದಪAಡ ನೆಹನ್ ನಾಚಪ್ಪ, ಮಂದಪAಡ ವಿಹಾನ್ ದೇವಯ್ಯ, ಅಪ್ಪಾರಂಡ ಪ್ರಸಾದ್, ಅಜ್ಜಿನಿಕಂಡ ಸನ್ನಿ, ಮಾಳೆಯಂಡ ಮುತ್ತಪ್ಪ, ಮೇದುರ ಕಂಠಿ, ಮುಕ್ಕಾಟಿರ ಕಿಟ್ಟು ಹಾಜರಿದ್ದರು.