ಸೋಮವಾರಪೇಟೆ, ಸೆ. ೨: ಇಲ್ಲಿನ ವಿವಿಧೋದ್ಧೇಶ ಸಹಕಾರ ಸಂಘವು ಪ್ರಸಕ್ತ ವರ್ಷ ರೂ. ೩೮ ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಎಂ. ಶ್ರೀಕಾಂತ್ ತಿಳಿಸಿದರು.

ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಲವು ವ್ಯವಹಾರಗಳನ್ನು ನಡೆಸುವ ಮೂಲಕ ಸಹಕಾರ ಸಂಘವು ೨೦೨೩-೨೪ನೇ ಸಾಲಿನಲ್ಲಿ ರೂ. ೩೮ ಲಕ್ಷ ಲಾಭಗಳಿಸಿದ್ದು, ಸಂಘದ ಸದಸ್ಯರಿಗೆ ಶೇ. ೨೦ ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದರು.

ಸAಘದಲ್ಲಿ ಸದಸ್ಯರ ರೂ. ೭೦ ಲಕ್ಷ ಪಾಲು ಬಂಡವಾಳವಿದ್ದು, ಅದನ್ನು ರೂ. ೨ ಕೋಟಿಗೆ ಹೆಚ್ಚಿಸಲು ನಿರ್ಣಯಿಸಲಾಗಿದೆ. ಸದಸ್ಯರು ಹಾಗೂ ಆಡಳಿತ ಮಂಡಳಿಯ ಸಹಕಾರದಿಂದಾಗಿ ಸಂಘದಲ್ಲಿ ಲಾಭಗಳಿಕೆ ಹೆಚ್ಚಾಗುತ್ತಿದೆ. ಶನಿವಾರಸಂತೆ ಶಾಖೆಯನ್ನು ಕಳೆದ ಸಾಲಿನಲ್ಲಿ ಪ್ರಾರಂಭಿಸಿದ್ದು, ಅಲ್ಲಿಯೂ ಗ್ರಾಹಕರಿಗೆ ರೂ. ೧ ಕೋಟಿ ಸಾಲ ನೀಡಲಾಗಿದೆ ಎಂದರು.

ಸುAಟಿಕೊಪ್ಪ ಶಾಖೆಯಲ್ಲಿಯೂ ವ್ಯವಹಾರ ಉತ್ತಮವಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಲಾಭಗಳಿಸಲು ಸಾಧ್ಯವಾಗಲಿದೆ. ಮಹಿಳೆಯರಿಗೆ, ಸ್ವ ಸಹಾಯ ಸಂಘಗಳಿಗೆ ಸಾಲ ನೀಡಲಾಗುತ್ತಿದೆ. ಕೇವಲ ಲಾಭದ ದೃಷ್ಟಿಯಿಂದ ಸಂಘದಲ್ಲಿ ವ್ಯವಹಾರ ಮಾಡದೆ, ಗ್ರಾಹಕರ ಸೇವೆಯನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎನ್.ಟಿ. ಪರಮೇಶ್, ಸದಸ್ಯರಾದ ಎಚ್.ಕೆ. ಮಾದಪ್ಪ, ಬಿ.ಪಿ. ಶಿವಕುಮಾರ್, ಬಿ.ಎಂ. ರಾಮ್‌ಪ್ರಸಾದ್, ಬಿ.ಆರ್. ಮೃತ್ಯುಂಜಯ, ಎಂ.ಸಿ. ರಾಘವ, ಎಚ್.ಎಸ್. ವೆಂಕಪ್ಪ, ಬಿ. ಶಿವಪ್ಪ, ಕೆ.ಬಿ. ಸುರೇಶ್, ಕೆ.ಆರ್. ದಿವ್ಯ, ಎಂ.ಜೆ. ದರ್ಶನ್, ಸಿ.ಎನ್. ಶೋಭಿತ, ಎಸ್.ಸಿ. ರೂಪ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಬಿ. ತಾರಾ ಇದ್ದರು.