ಸುಂಟಿಕೊಪ್ಪ, ಸೆ. ೨: ಸುಂಟಿಕೊಪ್ಪ -ಮಾದಾಪುರ ರಾಜ್ಯ ಹೆದ್ದಾರಿಯ ಐಗೂರಿನಲ್ಲಿ ಕಾರು ಹಾಗೂ ಮಿನಿ ಲಾರಿ ನಡುವೆ ಅಪಘಾತಗೊಂಡಿದ್ದು ಮೂವರು ಗಾಯಗೊಂಡಿದ್ದಾರೆ.
ಸೋಮವಾರಪೇಟೆಯ ಬಜೆಗುಂಡಿಯಿAದ ಮಾದಾಪುರ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಸುಂಟಿಕೊಪ್ಪ ಕಡೆಯಿಂದ ಸೋಮಾವಾರಪೇಟೆ ಕಡೆಗೆ ಹೋಗುತ್ತಿದ್ದ ಸ್ವರಾಜ್ ಮಸ್ದಾ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಎರಡು ವಾಹನಗಳ ಮುಂಭಾಗ ನಜ್ಜುಗುಜ್ಜಾಗಿದ್ದು ಲಾರಿಯ ಚಾಲಕ ಸೇರಿದಂತೆ ಮೂವರಿಗೆ ಗಾಯಗಳಾಗಿ ಚಾಲಕನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಚಾಲಕ ಸೇರಿದಂತೆ ಇತರ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮಾದಾಪುರ ಪೊಲೀಸರು ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.