x

ಮಡಿಕೇರಿ, ಸೆ. ೨: ನಾಪೋಕ್ಲುವಿನ ಭವಾನಿ ತೆಕ್ಕಡ ನಂಜುAಡ ಅವರು, ಮುಂಬರುವ ಏಷಿಯನ್ ಚಳಿಗಾಲದ ಕ್ರೀಡಾಕೂಟ ೨೦೨೫ ಹಾಗೂ ವಿಶ್ವ ಚಾಂಪಿಯನ್‌ಶಿಪ್ ೨೦೨೫ ಪಂದ್ಯಾವಳಿಯ ಸ್ಕೀಯಿಂಗ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದು, ದಕ್ಷಿಣ ಭಾರತದಿಂದ ಈ ಕ್ರೀಡೆಯಲ್ಲಿ ಆಯ್ಕೆಯಾದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮುಂಬರುವ ೨೦೨೬ರ ಚಳಿಗಾಲದ ಒಲಂಪಿಕ್ಸ್ ಪಂದ್ಯಾಟಕ್ಕೂ ಆಯ್ಕೆಯಾಗುವ ಪ್ರಯತ್ನದಲ್ಲಿ ಇದ್ದಾರೆ. ಇವರು ನಾಪೋಕ್ಲಿನ ತೆಕ್ಕಡ ನಂಜುAಡ ಶಂಭು ಹಾಗೂ ಪಾರ್ವತಿ ದಂಪತಿಯ ಪುತ್ರಿ.

ಇವರ ಮುಂದಿನ ಕ್ರೀಡಾ ಭವಿಷ್ಯಕ್ಕೆ ಬೇಕಾದ ಎಲ್ಲಾ ಅನುಕೂಲಗಳನ್ನು ಒದಗಿಸುವಂತೆ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಭೇಟಿ ಮಾಡಿ ಮನವಿ ಸಲ್ಲಿಸಿದರು.