ಮಡಿಕೇರಿ, ಸೆ. ೨: ಮಡಿಕೇರಿ ನಗರದ ಸಂಪಿಗೆಕಟ್ಟೆಯ ವಿವಿಧ ಸಮಿತಿಗಳು ಹಾಗೂ ಇಲ್ಲಿನ ನಿವಾಸಿಗಳು ಒಂದುಗೂಡಿ ಸ್ವಾತಂತ್ರö್ಯ ದಿನವನ್ನು ಆಚರಿಸಿದರು.
ಸ್ಥಳೀಯ ಬೃಂದಾವನ ರೆಸಾರ್ಟ್ನ ಮಾಲೀಕ ಕುಕ್ಕೇರ ಚಿಣ್ಣಪ್ಪ ಅವರು ಧ್ವಜಾರೋಹಣ ಮಾಡಿದರು. ಸ್ಥಳೀಯ ಮುಖಂಡ ಇ.ಆರ್. ಶಶಿಧರನ್ ಸ್ವಾಗತಿಸಿ, ದಿನದ ಮಹತ್ವದ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ವಿವಿಧ ಸಮಿತಿಗಳ ಪ್ರಮುಖರಾದ ಪ್ರಮೋದ್, ಕೃಷ್ಣ, ಪುಷ್ಪಾ, ಅಂಗನವಾಡಿ ಶಿಕ್ಷಕಿ ಯಶೋಧÀ ಮುಂತಾದವರು ಹಾಜರಿದ್ದರು.