ಮಡಿಕೇರಿ, ಸೆ. ೨: ಇಲ್ಲಿನ ಸನ್‌ಸೈನ್ ಪ್ಲೇ ಹೋಂನಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪುಟಾಣಿಗಳಿಗೆ ಕೃಷ್ಣ-ರಾಧೆಯ ಛದ್ಮವೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹಾಗೂ ಪುಟಾಣಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಪ್ಲೇಹೊಂನ ಶಿಕ್ಷಕಿ ಕಾವ್ಯ ಹಾಗೂ ಸಹ ಶಿಕ್ಷಕಿಯರು ಹಾಜರಿದ್ದರು.