ಐಗೂರು, ಸೆ. ೨: ಮಾದಾಪುರದಿಂದ ಸುಂಟಿಕೊಪ್ಪ ಹೆದ್ದಾರಿ ರಸ್ತೆಗೆ ಸಂಪರ್ಕ ಕಲ್ಪಿಸುವ ಗರಗಂದೂರು ಗ್ರಾಮದ ಹರದೂರಿನ ಹೊಳೆಗೆ ಈ ಹಿಂದೆ ಕಿರಿದಾದ ಸೇತುವೆ ಯನ್ನು ನಿರ್ಮಿಸಲಾಗಿತ್ತು. ಆ ಸೇತುವೆಯು ವಾಹನ ಸಂಚಾರಕ್ಕೆ ಯೋಗ್ಯವಲ್ಲದ ಕಾರಣ ಹಳೆಯ ಸೇತುವೆಯ ಸನಿಹದಲ್ಲಿ ದ್ವಿಮುಖ ಸಂಚಾರಕ್ಕೆ ಯೋಗ್ಯವಾದ ನೂತನ ಸೇತುವೆಯನ್ನು ಸುಮಾರು ೫೦ ವರ್ಷಗಳ ಹಿಂದೆ ನಿರ್ಮಿಸಲಾಯಿತು. ಕಳೆದ ಜುಲೈ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಸೇತುವೆಯ ಮೇಲ್ಭಾಗದಲ್ಲಿ ಮಳೆಯ ನೀರಿನ ತೇವಾಂಶದಿAದ ಬಿರುಕುಗಳು ಕಂಡುಬAದಿವೆ. ಈಗಾಗಲೇ ಸೇತೆವೆಯ ಮೇಲ್ಮುಖವಾಗಿ ಬಾಯಿ ತೆರೆದುಕೊಂಡಿರುವ ಈ ಬಿರುಕುಗಳು ರಸ್ತೆಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತಾರಗೊಳಿಸುವ ಲಕ್ಷಣಗಳು ಕಂಡುಬರುತ್ತಿವೆ.
ಆದ್ದರಿಂದ ಲೋಕೋಪಯೋಗಿ ಇಲಾಖೆಯವರು ಸೇತುವೆಯ ಸ್ಥಳ ಪರಿಶೀಲನೆ ಮಾಡಬೇಕೆಂದು ಈ ಭಾಗದ ವಾಹನ ಸವಾರರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ. -ಸುಕುಮಾರ