ಮಡಿಕೇರಿ, ಸೆ.೨: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಮತ್ತು ಆಯುಕ್ತರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತ ಸೂಚನೆ ಮೇರೆಗೆ ಎರಡು ದಿನಗಳ ಕಾಲ ಅಂಕಿತಾಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ತಂಡದಿAದ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿತ್ತು.

ಈ ಆಂದೋಲನದಲ್ಲ್ಷಿ ಜಿಲ್ಲೆಯಾದ್ಯಂತ ಹೊಟೇಲ್, ರೆಸ್ಟೋರೆಂಟ್, ಬೇಕರಿ, ಬೀದಿಬದಿಯ ವ್ಯಾಪಾರಿಗಳು ಕ್ಯಾಂಟೀನ್ ಮತ್ತಿತರ ಸುಮಾರು ೫೪ ಘಟಕಗಳಿಗೆ ಭೇಟಿ ನೀಡಿ ಕಾಯ್ದೆಯಡಿ ಪರಿಶೀಲನೆ ನಡೆಸಿ ಆಹಾರ ಮಾದರಿಗಳನ್ನು ಸಂಗ್ರಹಿಸಲಾಯಿತು.

ಕಾಯ್ದೆ ಉಲಂಘನೆಗೆ ಸಂಬAಧಿಸಿದAತೆ ಸುಮಾರು ೧೦ ಸಾವಿರ ದಂಡ ವಿಧಿಸಿ ೩೭ ಆಹಾರ ಉದ್ದಿಮೆದಾರರಿಗೆ ನೋಟಿಸ್ ನೀಡಲಾಯಿತು. ಸಾರ್ವಜನಿಕರ ಹಿತದೃಪ್ಠಿಯಿಂದ ಶುಚಿತ್ವ ಕಾಪಾಡಿಕೊಂಡು ಶುದ್ಧವಾದ ಆಹಾರವನ್ನು ಗ್ರಾಹಕರಿಕೆ ನೀಡಬೇಕು. ಕಾಯ್ದೆಯ ಮಾನದಂಡಗಳಿಗೆ ಮೀರಿ ಕೃತಕ ಬಣ್ಣಗಳನ್ನು ಆಹಾರ ತಯಾರಿಕೆ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಸೂಚಿಸಲಾಯಿತು.

ಜಿಲ್ಲೆಯಾದ್ಯಂತ ಮೊಟ್ಟೆ, ಕೋಳಿ, ಮಾಂಸ/ಮಾAಸದ ಪದಾರ್ಥಗಳ ಸಂಗ್ರಹಕರು, ಮಾರಾಟಗಾರರು ಮತ್ತು ತಯಾರಿಕಾ ಸ್ಥಳಗಳಿಗೆ ಭೇಟಿ ನೀಡಿ ಪದಾರ್ಥಗಳನ್ನು ಸೂಕ್ತವಾದ ತಾಪಮಾನದಲ್ಲಿ ಸಂಗ್ರಹಿಸಿ ಗ್ರಾಹಕರಿಗೆ ನೀಡಲಾಗುತ್ತಿದೆಯೆ ಮತ್ತು ತ್ಯಾಜ್ಯ ವಸ್ತುಗಳ ಸೂಕ್ತ ನಿರ್ವಹಣೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಹಳೆಯ ಮಾಂಸ/ ಮಾಂಸದ ಪದಾರ್ಥಗಳನ್ನು ಕೆಡದಂತೆ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತಿದೆಯೇ ಎಂಬ ಬಗ್ಗೆಯೂ ಪರಿಶೀಲನೆಯನ್ನು ನಡೆಸಿ ಸಂಶಯಾಸ್ಪದ ೧೧ ಆಹಾರ ಪದಾರ್ಥಗಳನ್ನು ಸಂಗ್ರಹಿಸಲಾಯಿತು. ಈ ಆಂದೋಲನದಲ್ಲಿ ಕೊಡಗು ಜಿಲ್ಲೆಯ ಅಂಕಿತಾಧಿಕಾರಿ ಡಾ|| ಅನಿಲ್ ಧಾವನ್ ಇ. ಮತ್ತು ಕೊಡಗು ಜಿಲ್ಲೆಯ ಹಿರಿಯ ಆಹಾರ ಸುರಕ್ಷತಾಧಿಕಾರಿ ಮಂಜುನಾಥ ಜೆ.ಎನ್. ಹಾಗೂ ವೀರಾಜಪೇಟೆ ತಾಲೂಕು ಆಹಾರ ಸುರಕ್ಷತಾಧಿಕಾರಿ ನವೀನ್‌ಕುಮಾರ್ ಕೆ.ಆರ್. ಅವರು ಭಾಗಿಯಾಗಿದ್ದರು.