ಕುಶಾಲನಗರ, ಸೆ.೨: ಬ್ಯಾಂಕ್ ಖಾತೆದಾರರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಓಟಿಪಿ ಪಡೆದು ೨ ಲಕ್ಷದ ೫ ಸಾವಿರ ರೂ. ವಂಚನೆ ಮಾಡಿದ ಪ್ರಕರಣವೊಂದು ಕುಶಾಲನಗರ ಗ್ರಾಮೀಣ ವ್ಯಾಪ್ತಿಯಲ್ಲಿ ನಡೆದಿದೆ.
ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆನರಾ ಬ್ಯಾಂಕ್ ಗ್ರಾಹಕರಾದ ತಬಸಂ ಎಂಬವರ ದೂರವಾಣಿಗೆ ೮೪೩೪೦೬೦೮೯೩ ಸಂಖ್ಯೆಯಿAದ ವಂಚಕನೋರ್ವ ಸಂಪರ್ಕಿಸಿ ತಾವು ಬ್ಯಾಂಕ್ ಅಧಿಕಾರಿಗಳೆಂದು ನಂಬಿಸಿ, ಬ್ಯಾಂಕ್ ಖಾತೆ ಲೋಪವಿದೆ ಎಂದು ತಿಳಿಸಿ ಓಟಿಪಿ ಪಡೆದು ಬ್ಯಾಂಕ್ ಖಾತೆಯಿಂದ ಒಟ್ಟು ಎರಡು ಲಕ್ಷದ ಐದು ಸಾವಿರ ರೂಪಾಯಿ ನಗದಿಕರಿಸಿರುವ ಬಗ್ಗೆ ವಂಚನೆಗೊಳಗಾದ ಬ್ಯಾಂಕ್ ಗ್ರಾಹಕಿ ತಬಸಂ ಅವರ ಪುತ್ರಿ ಸೈಬರ್ ಕೇಂದ್ರಕ್ಕೆ ದೂರು ನೀಡಿದ್ದಾರೆ.