ಸುಂಟಿಕೊಪ್ಪ, ಸೆ. ೨: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಕಚೇರಿಯನ್ನು ಸಂಭ್ರಮ ಗ್ರೂಪ್ಸ್ ಹಾಗೂ ಎ.ಬಿ. ಗ್ರೂಪ್ಸ್ ಧನಸಹಾಯ ವನ್ನು ನೀಡುವ ಮೂಲಕ ಅಭಿವೃದ್ಧಿ ಗೊಳಿಸಿದ್ದಾರೆಂದು ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ ತಿಳಿಸಿದ್ದಾರೆ. ಕಳೆದ ಹ¯ವು ವರ್ಷಗಳಿಂದ ವಾಹನ ಚಾಲಕರ ಸಂಘದ ಕಚೇರಿ ಕಾರ್ಯಾಚರಿಸುತ್ತಿದ್ದು, ಕಚೇರಿ ಒಳಭಾಗವು ಶಿಥಿಲಾವಸ್ಥೆಯಲ್ಲಿರುವುದನ್ನು ಮನಗಂಡ ಸಂಭ್ರಮ ಗ್ರೂಪ್ಸ್ ಹಾಗೂ ಎ.ಬಿ. ಗ್ರೂಪ್ಸ್ನ ಮಾಲೀಕರು ಸಾವಿರಾರು ರೂ ವಿನಿಯೋಗಿಸಿ ಕಚೇರಿಗೆ ನೆಲಹಾಸು ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ಅದೇ ರೀತಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಪಿ.ಎಂ. ಲತೀಫ್ ಕಚೇರಿಗೆ ಸಿ.ಸಿ. ಕ್ಯಾಮರಾ ಅಳವಡಿಸುವ ಮೂಲಕ ಸಂಘದ ಕಚೇರಿಯನ್ನು ಅಭಿವೃದ್ಧಿಪಡಿಸಿರುವದಾಗಿ ಅವರು ತಿಳಿಸಿದ್ದಾರೆ.