ಮಡಿಕೇರಿ, ಸೆ. ೨ : ಮಂಗಳಾದೇವಿನಗರದ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ಹಾಗೂ ಓಡಿಪಿ ಮಹಿಳೋದಯ ಮಹಿಳಾ ಒಕ್ಕೂಟದ ಸಹಭಾಗಿತ್ವದಲ್ಲಿ ಕೃಷಿ ತರಬೇತಿ ಆಯೋಜಿಸಲಾಗಿತ್ತು. ನಿವೃತ್ತ ಕೃಷಿ ಅಧಿಕಾರಿ ರಮೇಶ್ ಅವರು ಕೃಷಿ ಇಲಾಖೆಯ ಯೋಜನೆ ಬಗ್ಗೆ, ಕೈತೋಟ ಮಾಡುವುದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಕೂಡಿಗೆ ಕೃಷಿ ಇಲಾಖೆ ಅಧಿಕಾರಿ ಸ್ವರ್ಣ ತರಕಾರಿ ಬೀಜಗಳನ್ನು ವಿತರಣೆ ಮಾಡಿದರು. ಓಡಿಪಿಯ ವಲಯ ಸಂಯೋಜಕಿ ಜಾಯ್ಸ್ ಮೆನೇಜಸ್ ಕ್ಯಾನ್ಸರ್ ತಡೆಗಟ್ಟುವ ಬಗ್ಗೆ, ಆಶಾಕಾರ್ಯಕರ್ತೆ ಬೇಬಿ ಸಾಂಕ್ರಾಮಿಕ ಕಾಯಿಲೆ ಬಗ್ಗೆ ಮಾಹಿತಿ ನೀಡಿದರು.
ತರಬೇತಿಯಲ್ಲಿ ಓಡಿಪಿ ಕಾರ್ಯಕರ್ತೆ ವಿಜಯ ನಾರಾಯಣ ನಿರೂಪಿಸಿದರು. ರೇಣುಕಾ ಸ್ವಾಗತಿಸಿದರು. ಸಿ.ಎಸ್. ಅಕ್ಷಯ್ ದಿವ್ಯ ಸಂಘದ ಸದಸ್ಯರು, ಒಕ್ಕೂಟದ ಸದಸ್ಯರು, ಕೃಷಿ ಇಲಾಖೆ ಸಿಬ್ಬಂದಿ, ದಿವ್ಯಾ, ಜೀವನ ಜ್ಯೋತಿ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.