ಮಡಿಕೇರಿ, ಸೆ. ೨: ೨೦೧೧ರಲ್ಲಿ ಕರ್ನಲ್ ಚೆಪ್ಪುಡಿರ ಮುತ್ತಣ್ಣ, ಕರ್ನಲ್ ಚೋವಂಡ ಅಯ್ಯಪ್ಪ ಹಾಗೂ ಕಾಟಿಮಾಡ ಜಿಮ್ಮಿ ಅಯ್ಯಣ್ಣ ಅವರುಗಳ ಮುಂದಾಳತ್ವದಲ್ಲಿ, ಪೊನ್ನಂಪೇಟೆ ಕೊಡವ ಸಮಾಜದ ಅಂಗ ಸಂಸ್ಥೆಯಾಗಿ ಪ್ರಾರಂಭಗೊAಡ ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ ಉತ್ತಮ ಕ್ರೀಡಾಪಟುಗಳನ್ನು ಹೊರತರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಂತರರಾಷ್ಟಿçÃಯ ಬಾಕ್ಸಿಂಗ್ ಆಟಗಾರ ಹಾಗೂ ಭಾರತ ಒಲಂಪಿಕ್ಸ್ ತಂಡದ ಮುಖ್ಯ ತರಬೇತುದಾರ ಚೇನಂಡ ಕುಟ್ಟಪ್ಪ ಅಭಿಪ್ರಾಯಪಟ್ಟರು.

ಕ್ರೀಡಾಭಿಮಾನಿಗಳು, ದಾನಿಗಳು ಹಾಗೂ ಬ್ರಿಗೇಡಿಯರ್ ಮಾಳೇಟಿರ ದೇವಯ್ಯ ಅವರುಗಳಿಂದ ಪಡೆದ ಸುಮಾರು ಏಳು ಲಕ್ಷ ರೂಪಾಯಿಗಳಲ್ಲಿ, ಗೋಣಿಕೊಪ್ಪದ ಲಿಟ್ಲ್ ಫ್ಲವರ್ ಶಾಲೆ ಆವರಣದಲ್ಲಿ ನಿರ್ಮಾಣ ಮಾಡಿದ ರಿಂಗ್ ಅನ್ನು ವೀಕ್ಷಿಸಿ ಕ್ರೀಡಾಪಟುಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತ ಅವರನ್ನು ಉದ್ದೇಶಿಸಿ ಮಾತನಾಡಿದರು.

ದ. ಕೊಡಗಿನಲ್ಲಿ ಬಾಕ್ಸಿಂಗ್ ಕ್ರೀಡೆಯನ್ನು ಉತ್ತೇಜಿಸಲು ಲಿಟ್ಲ್ ಫ್ಲವರ್ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಪಟ್ರಪಂಡ ಚಿಣ್ಣಪ್ಪ ಹಾಗೂ ಕಾರ್ಯದರ್ಶಿ ಕುಪ್ಪಂಡ ಗಣೇಶ್ ಅವರ ಸಹಕಾರ ಅಭಿನಂದನಾರ್ಹ ಎಂದರು.

ಸAಸ್ಥೆಯ ಸಲಹೆಗಾರರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ ತಮ್ಮ ಸಂಸ್ಥೆಯಲ್ಲಿ ತರಬೇತುದಾರರಾದ ದೇಯಂಡ ಮೇದಪ್ಪ, ಹಾಗೂ ಟಿ.ಪಿ. ಶರತ್ ಅವರ ಪರಿಶ್ರಮದಿಂದ ಅನೇಕ ರಾಷ್ಟಿçÃಯ ಹಾಗೂ ರಾಜ್ಯ ಮಟ್ಟದ ಪದಕಗಳನ್ನು ಗೆಲ್ಲಲು ಸಾಧ್ಯವಾಗಿದೆ ಎಂದರು.

ಈಗಾಗಲೆ ಲಯನ್ಸ್, ಅಪ್ಪಚ್ಚಕವಿ, ಸಾಯಿಶಂಕರ್, ಸಂತ ಅಂಥೋಣಿ ಶಾಲೆಗಳ ಸುಮಾರು ೪೦ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಬೇರೆ ಶಾಲಾ ಮಕ್ಕಳು ಕೂಡ ಸೇರಿಕೊಳ್ಳಬಹುದೆಂಬ ವಿಶ್ವಾಸವಿದೆ ಎಂದರು.

ಈಗಾಗಲೆ ನಮ್ಮ ಸಂಸ್ಥೆಯಿAದ ಎಂ.ಬಿ. ಪ್ರಜ್ವಲಾ, ಎಂ.ಎಸ್. ಪ್ರಜ್ವಲ್, ಯು.ಆರ್. ಮಂದಣ್ಣ, ಯು.ಎನ್. ಅರ್ಚನ ಕೊಡಗು ಜಿಲ್ಲೆಯನ್ನು ಪ್ರತಿನಿದಿಸಿದ್ದು ರಾಷ್ಟçಮಟ್ಟದಲ್ಲಿ ಪದಕಗಳನ್ನು ಕೂಡ ಪಡೆದಿದ್ದಾರೆ ಎಂದರು.

ವೇದಿಕೆಯಲ್ಲಿ ಕಾರ್ಯದರ್ಶಿ ಪುತ್ತಾಮನೆ ಸ್ಮರಣ್ ಸುಭಾಶ್, ಖಜಾಂಚಿ ಐನಂಡ ಮಂದಣ್ಣ ಹಾಗೂ ನಿರ್ದೇಶಕ ಸಿ .ಪಿ ಬೋಪಣ್ಣ ಉಪಸ್ಥಿತರಿದ್ದರು.