ಚೆಟ್ಟಳ್ಳಿ, ಸೆ. ೨: ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಮಡಿಕೇರಿ ಇದರ ೨೦ನೇ ವಾರ್ಷಿಕ ಮಹಾಸಭೆಯು ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ಅಧ್ಯಕ್ಷ ಮಂಡುವAಡ. ಪಿ. ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

೨೦೦೫ರಲ್ಲಿ ಹಿರಿಯ ಸಹಕಾರಿ ಹಾಗೂ ಮಾಜಿ ಸಚಿವ ಮೇರಿಯಂಡ. ಸಿ. ನಾಣಯ್ಯ, ಮುಖ್ಯ ಪ್ರವರ್ತಕರಾದ ಚೋವಂಡ. ಡಿ. ಕಾಳಪ್ಪ, ಕೊಡವ ಸಮಾಜ ಮಡಿಕೇರಿಯ ಅಂದಿನ ಆಡಳಿತ ಮಂಡಳಿ ಸದಸ್ಯರ ದೂರ ದೃಷ್ಟಿಯಿಂದ ಈ ಸಂಘವನ್ನು ಸ್ಥಾಪಿಸಲಾಗಿ ಇಂದಿಗೆ ೧೯ ವರ್ಷಗಳ ಅವಧಿಯನ್ನು ಪೂರೈಸಿ ೨೦ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರಾರಂಭದಲ್ಲಿ ೨೯೩ ಸದಸ್ಯರಿಂದ ಕಾರ್ಯಾರಂಭಿಸಿದ ಸಂಸ್ಥೆ ಇದೀಗ ಒಟ್ಟು ೨೧೩೪ ಸದಸ್ಯರಿದ್ದು ಪಾಲು ಹಣ ರೂ. ೯೪.೫೬ ಲಕ್ಷಗಳಿದ್ದು, ಸದಸ್ಯರುಗಳ ಪ್ರಯೋಜನಕ್ಕಾಗಿ ಮರಣ ನಿಧಿ ಸ್ಥಾಪಿಸಿ ಸ್ವರ್ಗಸ್ಥರಾದ ಸದಸ್ಯರುಗಳ ಕುಟುಂಬಕ್ಕೆ ರೂ. ೧೦೦೦೦/- ಮರಣ ನಿಧಿ ಸಹಾಯಧನ ನೀಡಲಾಗುತ್ತಿದ್ದು ಹಾಲಿ ೧೨೬೦ ಸದಸ್ಯರುಗಳ ಮರಣ ನಿಧಿ ಸದಸ್ಯರಾಗಿರುತ್ತಾರೆ ಎಂದು ಅಧ್ಯಕ್ಷರು ತಿಳಿಸಿದರು.

ಸಹಕಾರಿಯಲ್ಲಿ ಸದಸ್ಯರಿಂದ ಉತ್ತಮ ಸ್ಪಂದನೆಯೊAದಿಗೆ ವಿವಿಧ ತರಹದ ಠೇವಣಿಯನ್ನು ಆಕರ್ಷಕ ಬಡ್ಡಿದರದಲ್ಲಿ ಪಡೆಯುತ್ತಿದ್ದು ನಿರಖು ಠೇವಣಿ ಹಾಗೂ ಇತರ ಠೇವಣಿ ಸೇರಿ ರೂ. ೫೧೨.೮೯ ಲಕ್ಷ ಇರುತ್ತದೆ. ಅಲ್ಲದೆ ವಿವಿಧ ರೀತಿಯ ಸಾಲಗಳನ್ನು ಸಹಕಾರಿಯ ವತಿಯಿಂದ ನೀಡಲಾಗುತ್ತಿದೆ ಹಾಗೂ ಜಾಮೀನು ಸಾಲ, ಗೃಹನಿರ್ಮಾಣ ಸಾಲ, ಆಭರಣ ಸಾಲ, ನಿರಖು ಠೇವಣಿಗಳ ಮೇಲಿನ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು ವರದಿ ಸಾಲಿನ ಅಂತ್ಯಕ್ಕೆ ರೂ. ೪೫೨.೯೯ ಲಕ್ಷ ಸಾಲ ನೀಡಲಾಗಿದೆ. ಶೇ. ೯೬.೫೦ ಸಾಲ ವಸೂಲಾತಿ ಯಾಗಿರುತ್ತದೆ. ಸಾರ್ವಜನಿಕರಿಗೆ ಮತ್ತು ಸಹಕಾರಿಗಳಿಗೆ ಆರ್‌ಟಿಸಿ, ಈ- ಸ್ಟಾಂಪ್, ಜೆರಾಕ್ಸ್ನಂತಹ ಸೌಲಭ್ಯವನ್ನು ಒದಗಿಸುತಿದ್ದು ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ ಹಾಗೂ ವಿವಿಧ ಬ್ಯಾಂಕುಗಳಲ್ಲಿ ೩೧೬.೧೯ ಲಕ್ಷ ಹೂಡಿಕೆ ಮಾಡಲಾಗಿದ್ದು ೨೦೨೩-೨೦೨೪ನೇ ಸಾಲಿನಲ್ಲಿ ರೂ. ೨೭.೯೬ ಲಕ್ಷ ಲಾಭಗಳಿಸಿದ್ದು, ಬೈಲಾ ಪ್ರಕಾರ ಲಾಭಂಶವನ್ನು ವಿಲೇವಾರಿ ಮಾಡಲಾಗಿರುತ್ತದೆ.

ಮಹಾಸಭೆಯಲ್ಲಿ ಸಹಕಾರಿಯ ಸದಸ್ಯರು ಮತ್ತು ಮಕ್ಕಳಿಗೆ ವಿವಿಧ ಕ್ಷೇತ್ರದ ಸಾಧನೆಗೆ ಪ್ರೋತ್ಸಾಹಧನವನ್ನು ನೀಡಲಾಯಿತು.

ಸಹಕಾರಿಯ ಕಾರ್ಯವೈಖರಿಯಲ್ಲಿ ಆಗಿರುವ ಪ್ರಗತಿಯನ್ನು ಪರಿಗಣಿಸಿ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಪೈಕಿ ನಮ್ಮ ಸಂಘವು ಉತ್ತಮ ಸಹಕಾರಿ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸತತ ೬ ವರ್ಷಗಳಿಂದ ನಗದು ಹಾಗೂ ಪ್ರಥಮ ಪ್ರಶಸ್ತಿ ಪತ್ರವನ್ನು ಪಡೆದುಕೊಂಡಿರುತ್ತೇವೆ. ಅಲ್ಲದೆ ಇತ್ತೀಚೆಗೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇವರಿಂದ ರಾಜ್ಯಮಟ್ಟದಲ್ಲಿ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ ಲಭ್ಯವಾಗಿದೆ. ಇವೆಲ್ಲದರ ಹಿಂದೆ ಹಿರಿಯ ಸಹಕಾರಿಗಳು, ದಾನಿಗಳು, ಸದಸ್ಯರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಪರಿಶ್ರಮ ಮತ್ತು ಉತ್ತಮ ಸ್ಪಂದನೆ ಯಿಂದ ಇಂದು ಸಹಕಾರಿಯು ಪ್ರಗತಿಯಲ್ಲಿ ಸಾಗುತ್ತಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ಸಭೆಯಲ್ಲಿ ಉಪಾಧ್ಯಕೆÀ್ಷ ಉಷಾ ಉತ್ತಯ್ಯ, ನಿರ್ದೇಶಕರು ಹಾಗೂ ಪ್ರವರ್ತಕರುಗಳಾದ ಚೋವಂಡ. ಡಿ. ಕಾಳಪ್ಪ, ಹಿರಿಯ ನಿರ್ದೇಶಕರುಗಳಾದ ಮಣವಟ್ಟೀರ. ಬಿ. ಮಾಚಯ್ಯ, ಆಲೆಮಾಡ. ಎ. ಕಾರ್ಯಪ್ಪ, ನಾಟೋಳಂಡ. ಡಿ. ಚರ್ಮಣ, ಪಟ್ಟಡ. ಎ. ಕರುಂಬಯ್ಯ, ಚೊಟ್ಟೆಯಾಂಡಮಾಡ ಬೇಬಿ ಪೂವಯ್ಯ, ಕೇಕಡ. ಎಂ. ಸುಗುಣ, ಶಾಂತೆಯAಡ. ಟಿ. ದೇವರಾಜ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಸಿ. ನೀಮಾ (ಕಳ್ಳೇಂಗಡ) ವ್ಯವಸ್ಥಾಪಕರಾದ ಚೋವಂಡ ಗೌತಮ್ ಮೇದಪ್ಪ, ಗುಮಾಸ್ತರಾದ ಮಂದೇಟಿರ. ಪಿ. ತಶ್ವಿನ್ ತಮ್ಮಯ್ಯ ಉಪಸ್ಥಿತರಿದ್ದರು.