ವೀರಾಜಪೇಟೆ, ಸೆ. ೨: ಕೊಡಗು ಜಿಲ್ಲಾ ಖಾಸಗಿ ಬಸ್ಸು ಕಾರ್ಮಿಕರ ಸಂಘದ ವಾರ್ಷಿಕ ಮಾಹಾಸಭೆಯು ನಡೆದು ಕುಂಬೆಯAಡ ಸುರೇಶ್ ದೇವಯ್ಯ ಅವರು ಅಧÀ್ಯಕ್ಷರಾಗಿ, ಜ್ಯೂಡಿ ವಾಜ್ ಪ್ರಧಾನ ಕಾರ್ಯದರ್ಶಿಯಾಗಿ ಮರು ಅಯ್ಕೆಗೊಂಡರು.

ಸAಘದ ೨೦೨೪-೨೫ ನೇ ಸಾಲಿನ ಮಾಹಾಸಭೆಯು ನಗರ ಖಾಸಗಿ ಬಸ್ಸು ನಿಲ್ದಾಣ ಸಮೀಪದ ಸ್ವಾಗತ್ ಕಟ್ಟಡ ಸಭಾಂಗಣದಲ್ಲಿ, ಸಂಘದ ಅಧÀ್ಯಕ್ಷ ಸುರೇಶ್ ದೇವಯ್ಯ ಅವರ ಅಧÀ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ಗೌರವ ಅಧÀ್ಯಕ್ಷರಾಗಿದ್ದ ಬಿ.ಆರ್. ಗಣೇಶ್ ಮತ್ತು ಮೂರ್ನಾಡು ಬಸ್ಸು ಚಾಲಕರಾಗಿದ್ದ ಅಬ್ದುಲ್ ನಾಜೀರ್ ಅವರುಗಳ ನಿಧನದ ಗೌರವಾರ್ಥ ಸಂತಾಪ ಸೂಚಿಸಲಾಯಿತು. ಸಭೆಯಲ್ಲಿ

ಸದಸ್ಯ ಬಿ.ವಿ. ಹೇಮಂತ್ ಅವರು

ಸಂಘದ ಸದಸ್ಯರಿಗೆ ಆರೋಗ್ಯ

ದತ್ತಿ ನಿಧಿ ಮತ್ತು ಕಾರ್ಮಿಕ ಇಲಾಖೆಯಲ್ಲಿ ನೋಂದಾವಣೆ ಬಗ್ಗೆ

ಪ್ರಸ್ತಾಪಿಸಿದರು.

(ಮೊದಲ ಪುಟದಿಂದ) ಈ ಬಗ್ಗೆ ಚರ್ಚೆಗಳು ನಡೆದು ಸಂಘದ ಸದಸ್ಯತ್ವ ಹೊಂದುವ ಸರ್ವ ಸದಸ್ಯರು ೧೦೦೦ ರೂ. ನೀಡಿ ಸದಸ್ಯತ್ವ ಪಡೆದುಕೊಳ್ಳಬೇಕು. ಸಂಘದ ಸದಸ್ಯರು ಮರಣ ಹೊಂದಿದಲ್ಲಿ ರೂ. ೧೦,೦೦೦ ಹಾಗೂ ಶಸ್ತçಚಿಕಿತ್ಸೆಗೆ ಒಳಪಟ್ಟಲ್ಲಿ ಅಥಾವ ಅಪಘಾತಕ್ಕೀಡಾದಲ್ಲಿ ರೂ. ೫,೦೦೦, ಮತ್ತು ಇನ್ನಿತರ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದ ಸದಸ್ಯರಿಗೆ ವೈದ್ಯಕೀಯ ವೆಚ್ಚ ರೂ ೨೫,೦೦೦ ಕ್ಕೆ ಮೇಲ್ಪಟ್ಟಲ್ಲಿ ೫,೦೦೦ ರೂ. ಸಂಘದ ವತಿಯಿಂದ ನೀಡುವ ಬಗ್ಗೆ ಸರ್ವ ಸದಸ್ಯರ ಒಪ್ಪಿಗೆಯಂತೆ ನಿರ್ಣಯವನ್ನು ಅಂಗೀಕರಿಸಲಾಯಿತು. ಅಧ್ಯಕ್ಷ ಸುರೇಶ್ ದೇವಯ್ಯ ಅವರು ಖಾಸಗಿ ಬಸ್ಸು ನಿಲ್ದಾಣದಲ್ಲಿ ಸಾರ್ವಜನಿಕರ ಹಿತಾಸಕ್ತಿ ಅರಿತು ಸಿ.ಸಿ ಕ್ಯಾಮರ ಅಳವಡಿಸುವಂತೆ ಹೇಳಿದರು. ವರ್ತಕರಿಂದ ಮತ್ತು ದಾನಿಗಳಿಂದ ಹಣ ಸಂಗ್ರಹಿಸಿ ಸಿ.ಸಿ ಕ್ಯಾಮರ ಅಳವಡಿಸುವಂತೆ ಸದಸ್ಯರು ಒಪ್ಪಿಗೆ ಸೂಚಿಸಿದರು. ಪ್ರಧಾನ ಕಾರ್ಯದರ್ಶಿ ಜ್ಯೂಡಿ ವಾಜ್ ಅವರು ಸಂಘವನ್ನು ನೋಂದಾಯಿಸಲು ಸರ್ವ ಸದಸ್ಯರು ಸದಸ್ಯತ್ವ ಪಡೆಯುವುದು ಮುಖ್ಯ. ಕಾರ್ಮಿಕ ಇಲಾಖೆಯಲ್ಲಿ ಮುಂಬರುವ ಮೂರು ತಿಂಗಳ ಕಾಲ ಮಿತಿಯ ಅವಧಿಯಲ್ಲಿ ಸಂಘವನ್ನು ನೋಂದಾಯಿಸುವAತೆ ತಿಳಿಸಿದರು. ಸಂಘದ ಎಲ್ಲಾ ಸದಸ್ಯರು ಕೈಜೋಡಿಸುವಂತೆ ಮನವಿ ಮಾಡಿದರು.

ಸಂಘದ ಗೌರವ ಅಧÀ್ಯಕ್ಷರಾಗಿ ಅಲ್ಲಂಡ ಕಸ್ತೂರಿ ಚೆಂಗಪ್ಪ, ಉಪಾಧÀ್ಯಕ್ಷರಾಗಿ ದಿನೇಶ್ ಕಾವೇರಪ್ಪ, ಕೋಶಾಧಿಕಾರಿಯಾಗಿ ದಿನೇಶ್ ವಿ.ಎ. ಅವರುಗಳು ಮರು ಅಯ್ಕೆಗೊಂಡರು. ಮಹೇಶ್.ಎಂ.ಕೆ. ಅಜಯ್ ಕೆ.ಇ, ಎನ್.ಪಿ. ದಿನೇಶ್ ನಾಯರ್, ಬಿ.ವಿ. ವಿನಂತು ನಾಯಕ್, ಕೆ.ಎನ್. ಜೀವನ್, ಕುಪ್ಪಂಡ ಪ್ರಸಾದ್ ದೇವಯ್ಯ, ಮತ್ತು ರಂಜು ಎಸ್ ಆಡಳಿತ ಮಂಡಳಿಯ ಸದಸ್ಯರಾಗಿ ಅಯ್ಕೆಗೊಂಡರು.