ಮಡಿಕೇರಿ, ಸೆ. ೨: ಮಂಜಿನ ನಗರಿ ಎಂದೇ ಹೆಸರುವಾಸಿಯಾಗಿರುವ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ವಿಘ್ನ ನಿವಾರಕನ ಆರಾಧನೆಗೆ ಸಜ್ಜಾಗುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಗಣೇಶ ಉತ್ಸವ ಸಮಿತಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಸಾರ್ವಜನಿಕರಿಂದ ದೇಣಿಗೆ ಸಂಗ್ರಹ, ಬಂಟಿAಗ್ಸ್, ಸ್ವಾಗತ ಕಮಾನುಗಳ ಅಳವಡಿಕೆ ಸೇರಿದಂತೆ ಇನ್ನಿತರ ತಯಾರಿಗಳು ಭರದಿಂದ ಸಾಗಿವೆ. ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಲವು ದಿನಗಳ ಕಾಲ ಗಣಪತಿ ಆರಾಧನೆ ನಡೆಸಲು ಸಮಿತಿಗಳು ಸಜ್ಜಾಗುತ್ತಿವೆ. ಗೌರಿ -ಗಣೇಶ ಮೂರ್ತಿಗಳ ಮಾರಾಟವೂ ನಗರದ ಕೆಲವೆಡೆ ನಡೆಯುತ್ತಿದೆ.

ಎಲ್ಲೆಲ್ಲಿ ಆರಾಧನೆ

ಈ ಬಾರಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಗಣಪತಿ ಉತ್ಸವ ಆಚರಿಸುವ ಸಮಿತಿಗಳ ವಿವರ ಇಂತಿದೆ: ಮಹದೇವಪೇಟೆಯ ವಿನಾಯಕ ಯುವಕ ಮಿತ್ರ ಮಂಡಳಿ, ಗಣೇಶ ಭಕ್ತ ಮಂಡಳಿ, ಚೌಡೇಶ್ವರಿ ದೇವಾಲಯ, ಸ್ವಸ್ತಿಕ್ ಯುವ ವೇದಿಕೆ, ಗಣಪತಿ ಬೀದಿಯ ಗಣಪತಿ ಯುವಕ ಸಂಘ, ಕೊಹಿನೂರು ರಸ್ತೆಯ ಹಿಂದೂ ಯುವಶಕ್ತಿ, ಹಳೆ ಖಾಸಗಿ ಬಸ್ ನಿಲ್ದಾಣದ ಸಾರ್ವಜನಿಕ ಗಣಪತಿ ಸೇವಾ ಸಮಿತಿ, ತ್ಯಾಗರಾಜ ಕಾಲೋನಿಯ ಅಭಿಷ್ಟಪ್ರದ ಗಣಪತಿ ಯುವಕ ಸಂಘ, ಮಲ್ಲಿಕಾರ್ಜುನ ನಗರದ ಜ್ಯೋತಿ ಯುವಕ ಸಂಘ, ಅಂಬೇಡ್ಕರ್ ಬಡಾವಣೆಯ ಶ್ರೀ ಯುವಕ ಸಂಘ, ಭಗವತಿ ನಗರದ ಭಗವತಿ ಯುವಕ ಸಂಘ, ವಿದ್ಯಾನಗರದ ಶಕ್ತಿ ಗಣಪತಿ ಸೇವಾ ಸಮಿತಿ, ಎಫ್.ಎಂ.ಸಿ. ಕಾಲೇಜು ಹಿಂಭಾಗದ ವಿನಾಯಕ ಬಾಲಕ ಭಕ್ತ ಮಂಡಳಿ, ಐಟಿಐ ಜಂಕ್ಷನ್‌ನ ಮೈತ್ರಿ ವಿಘ್ನೇಶ್ವರ ಯುವಕ ಸಂಘ, ವಿಜಯನಗರದ ಶ್ರೀ ಮಹಾಗಣಪತಿ ಸೇವಾ ಸಮಿತಿ, ಜ್ಯೋತಿನಗರದ ಶಿವಶಕ್ತಿ ಯುವಕ ಸಂಘ, ಚಾಮುಂಡೇಶ್ವರಿ ನಗರದ ಶ್ರೀ ಸಿದ್ಧಿ ವಿನಾಯಕ ಯುವಕ ಮಿತ್ರ ಮಂಡಳಿ, ಕೇಸರಿ ಯುವಕ ಸಂಘ, ಮೆಸ್ಕಾಂ ಗಣೇಶೋತ್ಸವ ಸಮಿತಿ, ಗೌಳಿಬೀದಿ ಗಣೇಶೋತ್ಸವ ಸಮಿತಿ, ಹೊಸಬಡಾವಣೆಯ ಪ್ರಸನ್ನ ಗಣಪತಿ ಯುವಕ ಸಂಘ, ಮಂಗಳಾದೇವಿನಗರದ ಶ್ರೀ ಆದಿಪರಾಶಕ್ತಿ ಯುವಕ ಸಂಘ, ಕೆ.ಎಸ್.ಆರ್.ಟಿ.ಸಿ. ಡಿಪೋ

ನಿಷೇಧಿಸಲಾಗಿದೆ ಎಂದು ಸೂಚಿಸಲಾಯಿತು.

ಜಿಲ್ಲೆಯಾದ್ಯಂತ ಮೊಟ್ಟೆ, ಕೋಳಿ, ಮಾಂಸ/ಮಾAಸದ ಪದಾರ್ಥಗಳ ಸಂಗ್ರಹಕರು, ಮಾರಾಟಗಾರರು ಮತ್ತು ತಯಾರಿಕಾ ಸ್ಥಳಗಳಿಗೆ ಭೇಟಿ ನೀಡಿ ಪದಾರ್ಥಗಳನ್ನು ಸೂಕ್ತವಾದ ತಾಪಮಾನದಲ್ಲಿ ಸಂಗ್ರಹಿಸಿ ಗ್ರಾಹಕರಿಗೆ ನೀಡಲಾಗುತ್ತಿದೆಯೆ ಮತ್ತು ತ್ಯಾಜ್ಯ ವಸ್ತುಗಳ ಸೂಕ್ತ ನಿರ್ವಹಣೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಹಳೆಯ ಮಾಂಸ/ ಮಾಂಸದ ಪದಾರ್ಥಗಳನ್ನು ಕೆಡದಂತೆ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತಿದೆಯೇ ಎಂಬ ಬಗ್ಗೆಯೂ ಪರಿಶೀಲನೆಯನ್ನು ನಡೆಸಿ ಸಂಶಯಾಸ್ಪದ ೧೧ ಆಹಾರ ಪದಾರ್ಥಗಳನ್ನು ಸಂಗ್ರಹಿಸಲಾಯಿತು. ಈ ಆಂದೋಲನದಲ್ಲಿ ಕೊಡಗು ಜಿಲ್ಲೆಯ ಅಂಕಿತಾಧಿಕಾರಿ ಡಾ|| ಅನಿಲ್ ಧಾವನ್ ಇ. ಮತ್ತು ಕೊಡಗು ಜಿಲ್ಲೆಯ ಹಿರಿಯ ಆಹಾರ ಸುರಕ್ಷತಾಧಿಕಾರಿ ಮಂಜುನಾಥ ಜೆ.ಎನ್. ಹಾಗೂ ವೀರಾಜಪೇಟೆ ತಾಲೂಕು ಆಹಾರ ಸುರಕ್ಷತಾಧಿಕಾರಿ ನವೀನ್‌ಕುಮಾರ್ ಕೆ.ಆರ್. ಅವರು ಭಾಗಿಯಾಗಿದ್ದರು.