*ಗೋಣಿಕೊಪ್ಪ, ಸೆ. ೨: ಶ್ರೀ ಕಾವೇರಿ ದಸರಾ ಸಮಿತಿ ಆಚರಿಸುವ ೪೬ನೇ ವರ್ಷದ ಗೋಣಿಕೊಪ್ಪಲು ದಸರಾ ಜನೋತ್ಸವದ ಆಚರಣೆಯಲ್ಲಿ ಹತ್ತು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರು ಮತ್ತು ಕಲಾತಂಡಗಳಿAದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಬಗ್ಗೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾಹಿತಿ ನೀಡಿದರು.

೨೦೨೪ನೇ ಸಾಲಿನ ದಸರಾ ಆಚರಣೆ ಅಕ್ಟೋಬರ್ ೩ರಿಂದ ೧೨ರ ವರೆಗೆ ನಡೆಯಲಿದೆ. ನಗರದ ದಸರಾ ಮೈದಾನದಲ್ಲಿ ಶ್ರೀ ಕಾವೇರಿ ಕಲಾ ವೇದಿಕೆಯಲ್ಲಿ ಸ್ಥಳೀಯ ಹಾಗೂ ಖ್ಯಾತ ಕಲಾವಿದರಿಂದ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕಾರ್ಯಕ್ರಮಗಳನ್ನು ನೀಡಲು ಆಸಕ್ತ ಕಲಾವಿದರು ಹಾಗೂ ಕಲಾತಂಡಗಳು ತಾ. ೧೪ರ ಒಳಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದಾರೆ.

ಸಾಂಸ್ಕöÈತಿಕ ಸಮಿತಿ ಅಧ್ಯಕ್ಷ ದಿಲನ್ ಚಂಗಪ್ಪ ಮಾತನಾಡಿ, ಈ ಬಾರಿ ಖ್ಯಾತ ಕಲಾವಿದರ ಜೊತೆಗೆ ಸ್ಥಳೀಯ ಪ್ರತಿಭೆಗಳಿಂದಲೂ ಹೆಚ್ಚಿನ ಅರ್ಜಿಗಳನ್ನು ನಿರೀಕ್ಷಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಸುವ ಕಲಾವಿದರು ಹಿಂದೆ ನೀಡಿದ ಕಾರ್ಯಕ್ರಮದ ಫೋಟೋ ಅಥವಾ ವೀಡಿಯೋ ತುಣುಕುಗಳನ್ನು ಸಂಬAಧಿಸಿದ ನಂಬರಿಗೆ ಅಥವಾ ಈ ಕೆಳಗೆ ಕಾಣಿಸಿದ ವಿಳಾಸಕ್ಕೆ ತಲುಪಿಸುವಂತೆ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ೭೭೬೦೮೦೩೭೮೩ ಮತ್ತು ೬೧೧೬೪೦೫೫೨ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು. ಅಥವಾ gಟಿಞಠಿಟಜಚಿsಚಿಡಿಚಿ೨೩@gmಚಿiಟ.ಛಿom ಮೇಲ್ ಮಾಡಬಹುದಾಗಿದೆ. ಖುದ್ದು ಭೇಟಿ ನೀಡುವವರು ಶ್ರೀ ಕಾವೇರಿ ಉತ್ಸವ ಸಮಿತಿ-೨೪, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಇಲ್ಲಿಗೆ ಬಂದು ಸಂಪರ್ಕಿಸಬಹುದಾಗಿದೆ ಎಂದು ಗೋಣಿಕೊಪ್ಪ ದಸರಾ ಸಾಂಸ್ಕöÈತಿಕ ಸಮಿತಿ ತಿಳಿಸಿದೆ.

ಗೋಷ್ಠಿಯಲ್ಲಿ ಸಮಿತಿ ಸದಸ್ಯರುಗಳಾದ ಚಂದನ್‌ಕಾಮತ್, ಸೈಕ್ಲೋನ್ ರಮೇಶ್, ಅವಿನಾಶ್ ಉಪಸ್ಥಿತರಿದ್ದರು.