ಮಡಿಕೇರಿ, ಸೆ. ೨: ಪಿಕಪ್ ಮತ್ತು ಸ್ಕೂಟಿ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ, ಸ್ಕೂಟಿ ಹಿಂಬದಿ ಸವಾರನ ಕಾಲು ಮುರಿಯಲ್ಪಟ್ಟ ಘಟನೆ ಸಂಪಾಜೆ ಗ್ರಾಮದ ಚೆಡಾವಿನಲ್ಲಿ ನಡೆದಿದೆ.
ಕೊಯನಾಡಿನ ಮಾದವ ಅವರು ತಮ್ಮ ಸ್ಕೂಟಿಯಲ್ಲಿ ಶ್ಯಾಮ್ ಅವರ ಜೊತೆ ಸಂಪಾಜೆಯಿAದ ಕೊಯನಾಡು ಕಡೆಗೆ ತೆರಳುತ್ತಿದ್ದ ವೇಳೆ ಸಂಪಾಜೆಯ ಚೆಡಾವಿನಲ್ಲಿ ಮಡಿಕೇರಿ ಕಡೆಯಿಂದ ಬರುತ್ತಿದ್ದ ಮೈಸೂರು ಮೂಲದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಸ್ಕೂಟಿ ಹಿಂಬದಿ ಸವಾರ ಕೊಡಗು ಸಂಪಾಜೆ ಗ್ರಾ.ಪಂ. ಮಾಜಿ ಸದಸ್ಯೆ ರಾಜೇಶ್ವರಿ ಅವರ ಪತಿ ಶ್ಯಾಮ್ ಅವರ ಕಾಲು ಮುರಿಯಲ್ಪಟ್ಟಿದೆ. ಸ್ಕೂಟಿ ಚಲಾಯಿಸುತ್ತಿದ್ದ ಮಾದವ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಾಳುಗಳನ್ನು ಸ್ಥಳೀಯರು ಸೇರಿ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸಲಾಗಿದೆ.