ಮಡಿಕೇರಿ, ಸೆ. ೨: ಮಡಿಕೇರಿ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಪಿ.ಕೆ ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿ ಕೊಡವ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮಡಿಕೇರಿ ಮಿಲಿಟರಿ ಕ್ಯಾಂಟೀನ್ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಎಂ.ಎಸ್ ಕಾವೇರಪ್ಪ(ನಿ) ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಂತರ ಮಾತನಾಡಿದ ಅವರು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರು ಶಿಸ್ತು, ಸಂಯಮ, ಸಹಿಷ್ಣುತೆಯನ್ನು ನಿವೃತ್ತಿಯ ನಂತರವು ತಮ್ಮ ಜೀವನದಲ್ಲಿ ಪಾಲಿಸಬೇಕು ಎಂದು ಕರೆ ನೀಡಿದರು ಹಾಗೂ ಲಭ್ಯವಿರುವ ಸೇನಾ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಗಣಪತಿ, ಪದಾಧಿಕಾರಿಗಳಾದ ಎಂ.ಕೆ ನಾಚಪ್ಪ, ತಿಮ್ಮಯ್ಯ, ಸೋಮಯ್ಯ, ಬೆಳ್ಯಪ್ಪ, ಸುರೇಶ್, ಮಾದಪ್ಪ, ಪ್ರಭಾಕರ ಹಾಗೂ ಸಂಘದ ಸದಸ್ಯರು ಮತ್ತು ಕುಟುಂಬ ವರ್ಗದವರು ಭಾಗವಹಿಸಿದ್ದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಮಾದೆಯAಡ ಉಷಾ ನಾಚಪ್ಪ ಅವರು ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಮೇದುರ ಕಾವೇರಪ್ಪ ಸ್ವಾಗತಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು. ವಂದನಾರ್ಪಣೆಯನ್ನು ಹೆಚ್.ಆರ್. ವಾಸಪ್ಪ ಅವರು ಮಾಡಿದರು. ನಿರೂಪಣೆಯನ್ನು ಸಂಘದ ಖಜಾಂಚಿ ಕೂಪದಿರ ಮುತ್ತಣ್ಣ ನೆರವೇರಿಸಿದರು.