ಮಾನ್ಯರೆ, ಮರಣದ ಕುರಿತು ಮೂಡಿ ಬಂದಿರುವ ಲೇಖನವು ಓದುಗರನ್ನು ಓದಿಸುತ್ತದೆ. ನಮ್ಮನ್ನು ನಾವೇ ಅರಿತು ನಮ್ಮ ಜೀವನವು ಇಷ್ಟೇ ಎಂದಾಗುವAತೆ ಮಾಡುತ್ತದೆ. ಹುಟ್ಟು, ಜೀವನ, ಮರಣ ಹೀಗೆ ೩ ಕೆಮ್ಮಿನಷ್ಟೇ ದೂರ. ಪ್ರಾಣಿಗಳೇ ಆಗಲಿ, ಮನುಷ್ಯರೆ ಆಗಲಿ ಜೀವ ಒಂದೇ ರೀತಿಯಾಗಿದ್ದರೂ, ಮನುಷ್ಯ ಬದುಕುವ ರೀತಿಯೇ ಬೇರೆ. ಪ್ರಾಣಿಗಳ ಜೀವನ ಶೈಲಿಯೇ ಬೇರೆ. ಯಾವುದೇ ಜೀವದ ಉಸಿರು ನಿಂತ ಸ್ವಲ್ಪ ಸಮಯದಲ್ಲಿ ಅವನ ಅಂತ್ಯಕ್ರಿಯೆ ಮುಗಿದು ಸತ್ತ ನಂತರದ ೧೨ನೇ ದಿನದ ಕಾರ್ಯಗಳು ಮುಗಿದು ಹೋದನಂತರ ಕೆಲವರು ವರ್ಷಕ್ಕೊಮ್ಮೆ ನೆನಪಿಸಿಕೊಳ್ಳುವುದು ಒಂದು ಸಂಸ್ಕಾರವಷ್ಟೇ.

ಹುಟ್ಟಿದವನಿಗೆ ಸಾವು ನಿಶ್ಚಯ ಆದರೆ ಕೆಲವರು ಅಸೌಖ್ಯದಿಂದ ಮೃತಪಟ್ಟರೆ, ಇನ್ನು ಕೆಲವರು ನರಕಯಾತನೆ ಅನುಭವಿಸಿ ಸಾಯುವವರು ಇದ್ದಾರೆ. ಕೆಲವರಂತು ಪೇಪರ್ ಓದುತ್ತಾ, ಕಾಫಿ ಹೀರುತ್ತಾ ಯಾರಿಗೂ ಏನೊಂದು ತೊಂದರೆ ಕೊಡದೆ ಕುಳಿತಲ್ಲಿಯೇ ಪ್ರಾಣ ಹೋಗುವುದನ್ನು ನಾವು ಪ್ರತಿದಿನವೂ ಪತ್ರಿಕೆಯಲ್ಲಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದೇವೆ. ಆ ಸಮಯದಲ್ಲಿ ಮನೆಯವರಾಗಲಿ ಅಥವಾ ಅವರ ಸ್ನೇಹಿತರಾಗಲಿ ಹೇಳುವುದಿಷ್ಟೇ "ಪಾಪ ಒಳ್ಳೇ ವ್ಯಕ್ತಿ ಯಾರಿಗೂ ತೊಂದರೆ ಕೊಡದೆ ಹೋದ" ಎಂದು ಹೇಳುತ್ತಾ ೨-೩ ವರ್ಷದಲ್ಲಿ ಮರೆತು ಹೋಗುತ್ತಾರೆ. ಸಾವು ಯಾವಾಗ, ಎಲ್ಲಿ, ಹೇಗೆ ಎಂದು ಅರಿತವರಿಲ್ಲ ಅಂದ ಮೇಲೆ ಅದನ್ನು ಬಂದAತೆ ಸ್ವಾಗತಿಸಬೇಕಾದ್ದು ಅನಿವಾರ್ಯ. ಕೆಲವರು ದುಃಖಪಡುತ್ತಾರೆ, ಹೀಗೆ ಮರಣವನ್ನು ಅರಗಿಸಿಕೊಳ್ಳಲು ಅಧ್ಯಾತ್ಮದ ಅರಿವು ಕೂಡಾ ಬೇಕಾಗಿದೆ. ಅದನ್ನು ಎಲ್ಲರಿಗೂ ವಿಚಾರಪೂರ್ಣ ಕಣ್ಣುತೆರೆಸುವ ಲೇಖನದ ಮೂಲಕ ಎದುರಿಗಿಟ್ಟಿದ್ದೀರಿ. ಇಂತಹ ಲೇಖನಗಳು ಪದೇ ಪದೇ ಪ್ರಕಟಗೊಳ್ಳುತ್ತಿರಲಿ ಎಂಬ ಆಶಯದೊಂದಿಗೆ.

ಜೀವನದಲ್ಲಿ ಮನುಷ್ಯ ಅರಿತಿರುವುದು ಅಂಗೈನಷ್ಟು, ಅರಿಯಬೇಕಿರುವುದು ಆಕಾಶದಷ್ಟು.

- ಎಸ್. ಸಂಪತ್‌ಕುಮಾರ್, ಮಡಿಕೇರಿ.

ಅರ್ಥಪೂರ್ಣ

ಮಾನ್ಯರೆ, ಬಿ.ಜಿ. ಅನಂತ ಶಯನ ಅವರು ಬರೆದ ಲೇಖನದಲ್ಲಿ ಜೀವನ ಮತ್ತು ಮರಣದ ಕುರಿತು ಬಹಳ ಚೆನ್ನಾಗಿ ಹೇಳಿದ್ದೀರ. ಒಂದೊAದು ಪದಗಳೂ ಅರ್ಥಪೂರ್ಣ. ಜೀವವಿರುವ ಎಲ್ಲರಿಗೂ ನೋವು ಒಂದೇ... ನಿಮ್ಮ ಲೇಖನ ಓದಿ ಕಣ್ಣು ತುಂಬಿಬAತು.

- ಪ್ರಮೀಳಾ ಶೆಟ್ಟಿ, ಮಡಿಕೇರಿ

ಜೀವನ ಇಷ್ಟೇ...!

ಮಾನ್ಯರೆ, ಮರಣ...! ನಿಮ್ಮ ಲೇಖನ ಅರ್ಥಗರ್ಭಿತವಾಗಿದೆ. ನನ್ನ ಅಮ್ಮನ ತಂಗಿಯ ಮಗ ನೋಬಿನ್ ಕೆವಿನ್, ಭಾನುವಾರ ಮಡಿಕೇರಿಯ ತನಲ್ ಆಶ್ರಮದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಬರುವಂತೆ ನನಗೆ ಕರೆ ಮಾಡಿದ್ದ. ಸುಮಾರು ಐದು ಘಂಟೆಗಳ ಕಾಲ ಮಾತನಾಡಿದ್ದ. ಆದರೆ ಆದುದೇನು? ಶುಕ್ರವಾರ ಬೆಳಿಗ್ಗೆ ಆತ ಹೃದಯಾಘಾತದಲ್ಲಿ ಅಕಾಲ ಮರಣಕ್ಕೆ ಈಡಾದ! ಜೀವನ ಇಷ್ಟೇ.

- ನಾ ಕನ್ನಡಿಗ, ಶನಿವಾರಸಂತೆ

ಅAತರಾಳದ ಕದ ತೆರೆದಂತಾಯಿತು!

ಮಾನ್ಯರೆ, ಅನಂತ ಶಯನ ಅವರು ಬರೆದ ‘ಮೂರು ಕೆಮ್ಮಿನಷ್ಟೇ ದೂರ ಮರಣ’ ಲೇಖನ ಅಂತರಾಳದ ಕದ ತೆರೆಯುವಂತಿದೆ.

ಹುಟ್ಟು-ಸಾವು ಎರಡೂ ದೈವನಿಯಮ. ಹಿಂದೆ ಎಲ್ಲ ‘ಬಾಯಿಗೆ ನೀರಿಲ್ಲದೆ ಸತ್ತ ಪಾಪಿ’ ಎಂದು ಧೂಷಿಸಿದ ಹಲವಾರು ಉದಾಹರಣೆಗಳಿವೆ. ಇತ್ತೀಚೆಗೆ ಮೂರು ಕೆಮ್ಮಲ್ಲ, ನಿಂತಲ್ಲೇ, ಕುಳಿತಲ್ಲೇ, ಮಲಗಿದಲ್ಲೇ, ಆಟ ಆಡುತ್ತಲೆ, ಹಾಡು ಹಾಡುತ್ತ, ನೃತ್ಯ ಮಾಡುತ್ತ, ಭಾಷಣ ಮಾಡುತ್ತಾ ಕೊನೆಯ ಪಯಣಕ್ಕೆ ಸಾಗಿಬಿಡುವ ಉದಾಹರಣೆ ಹಲವಾರು! ಮನುಷ್ಯನ ಆಸ್ತಿ, ಅಂತಸ್ತಿನ ವ್ಯಾಮೋಹ ಕಂಡು ಸಾವು ಗಹಗಹಿಸಿ ನಗುತ್ತಿರುತ್ತದೆ.

ಇಷ್ಟು ತಿಳಿದು ಎಲ್ಲವನ್ನೂ ತ್ಯಜಿಸಿ ವೈರಾಗಿಯಾಗು ಎಂಬುದು ಪ್ರಕೃತಿಯ ಸಂದೇಶವಲ್ಲ. ಇದ್ದಷ್ಟು ದಿನ ನಿನ್ನದೇ ಆದ ರೀತಿಯಲ್ಲಿ ಒಳ್ಳೆಯತನದಿಂದ ಸಾಗು, ನಾನು ಬಂದಾಗ ಕಾಯಲಾರೆ, ನನಗೂ ಬಹಳ ಕೆಲಸವಿದೆ ‘ತಟ್ ಅಂತ ಹೊರಟುಬಿಡು ಎಂಬAತೆ ಕಾಲ ತರಾತುರಿಯಲ್ಲಿ ಇರುವಂತಿದೆ. ಮೂರು ಕೆಮ್ಮಿನಲ್ಲೇ ಹೋಗಿ ಬಿಡುವುದು ಒಳ್ಳೆಯ ನಿರ್ಗಮನವೆ.

‘ಪಾಪ ಒಳ್ಳೆಯವ ಯಾರಿಗೂ ತೊಂದರೆ ಕೊಡದೆ ಹೋಗಿಬಿಟ್ಟ’ ಅನ್ನುವಂತೆ ಬದುಕಿ ಹೋಗುವುದು ಜೀವನದ ಸಾರ್ಥಕ್ಯ.

- ಶ್ವೇತಾ, ಮಡಿಕೇರಿ.

ಓದ ಬೇಕಾದ್ದೆ...

ಮಾನ್ಯರೆ, ಮೇಲಿನ ಲೇಖನವನ್ನು ಎಲ್ಲರೂ ಓದಿ ಅರ್ಥೈಸಿಕೊಳ್ಳಬೇಕಾದ್ದೆ. ಮೋಹ, ಮಮಕಾರದಲ್ಲೇ ಮುಳುಗಿದೆ ಬದುಕು. ಮನಸ್ಸಿನ ಶೂನ್ಯತೆ ದಾಟಿ ಪೂರ್ಣತೆ ಪಡೆಯುವುದು ಆಂತರ್ಯ ತೆರೆದುಕೊಂಡಾಗಲೆ. ಅದಕ್ಕೆ ಗುರು ಮತ್ತು ಭಗವಂತನ ಅನುಗ್ರಹವೂ ಅವಶ್ಯ.

- ವಿಮಲಾ ದಶರಥ, ವೀರಾಜಪೇಟೆ.

‘ಖಾಲಿ ಖಾಲಿ ಜೀವನ’

ಮಾನ್ಯರೆ, ನನ್ನ ಮಗಳು ಯುನೈಟೆಡ್ ಕಿಂಗ್ಡಮ್ಮಿನಲ್ಲಿದ್ದಾಳೆ. ಮೊನ್ನೆ ಮೊನ್ನೆ ಕಾಲ್ ಮಾಡಿ ‘ಮಮ್ಮಿ’, ನನ್ನ ಫ್ರೆಂಡ್ ಮನೆಗೆ ರಾತ್ರಿ ಹೋಗುವೆ. ಅವಳ ಅಪ್ಪ-ಅಮ್ಮ ಭಾರತದಿಂದ ಬಂದಿದ್ದು, ಇಂದು ರಾತ್ರಿ ಅವರ ೬೩ನೇ ಹುಟ್ಟುಹಬ್ಬ ಆಚರಿಸಲು ಕರೆದಿದ್ದಾಳೆ ಅಂದಳು. ಮರುದಿನ ಬೆಳಿಗ್ಗೆ ಮತ್ತೆ ಅವಳಿಂದ ಕರೆ ಬಂದಿತು. ‘ಮಮ್ಮಿ’ ರಾತ್ರಿ ೧೨ ಘಂಟೆಗೆ ಎಲ್ಲರೂ ಸಂತಸದಿAದ ಕೇಕ್ ಕತ್ತರಿಸಿ ಶುಭಾಷಯ ತಿಳಿಸಿ ಮರಳಿದೆವು. ರಾತ್ರಿ ಒಂದು ಘಂಟೆಗೆ ‘ಪಪ್ಪ’ ತೀರಿಕೊಂಡುಬಿಟ್ಟರು ಎಂದು ಸ್ನೇಹಿತೆ ಕರೆ ಮಾಡಿ ಆಘಾತದ ಸುದ್ದಿ ಹೇಳಿದಳಂತೆ.

ಹಿAದಿನ ಸಂಜೆ ಆಕೆಯ ತಂದೆ-ತಾಯಿ ಬೀಚ್ ವೀಕ್ಷಣೆಗೆ ತೆರಳಿದ್ದಾಗ, ತಾಯಿ-ತಂದೆಯೊಡನೆ (ಪತಿಯ ಬಳಿ) ಅಲ್ಲಿ ನೋಡಿ, ಎಲ್ಲರೂ ಖುಷಿ ಖುಷೀಲಿ ಕೈ-ಕೈ ಹಿಡಿದು ಎಷ್ಟು ಕುಷೀಲಿ ಓಡಾಡುತ್ತಿದ್ದಾರೆ, ಇನ್ನು ಮುಂದೆ ನಾವಿಬ್ಬರೂ ಹೀಗೆ ಸಂತಸದಿAದ ಓಡಾಡೋಣ ಅಲ್ವಾ ಎಂದು ಹೇಳಿ ಅವರ ಕೈಗಟ್ಟಿ ಹಿಡಿದುಕೊಂಡಿದ್ದರAತೆ. ಸಮುದ್ರ ಕಿನಾರೆಯಲ್ಲಿ ಸೂರ್ಯ ಮುಳುಗುವುದನ್ನು ಕಂಡ ಅವರು ಬೆಳಗಿನ ಸೂರ್ಯೋದಯ ಕಾಣುವದರೊಳಗೆ ಒಬ್ಬಂಟಿಯಾಗಿಬಿಟ್ಟರು.

ಈ ಸುದ್ದಿ ಕೇಳಿ ನನಗೆ ಜೀವನ ಖಾಲಿ ಖಾಲಿ ಅನಿಸತೊಡಗಿತ್ತು. ಕಾಕತಾಳೀಯವಾಗಿ ನನ್ನ ಮೆಚ್ಚಿನ ಶಕ್ತಿ ಪತ್ರಿಕೆಯಲ್ಲಿ ಮರಣ ಎಷ್ಟು ಸನಿಹ ಇದೆ ಎಂಬ ಲೇಖನ ಕಂಡು ವಾಸ್ತವಕ್ಕೆ ಮರಳಿದೆ. ಅರ್ಥಪೂರ್ಣ ಬರಹ. ಜೀವನ ಎಷ್ಟು ಕ್ಷಣಿಕ ಎಂದು ತಿಳಿದಿದ್ದರೂ ನಾವು ಬೀಗುತ್ತೇವೆ. ಹಿಂದು-ಮುAದು ಯೋಚಿಸದೆ ದೇವರನ್ನೂ ಹಳಿಯುತ್ತೇವೆ. ಪ್ರಕೃತಿಗೆ ತನ್ನದೇ ಆದ ನಿಯಮವಿದೆ. ಜೀವನದ ವಾಸ್ತವ ಅರಿತು ಬಾಳುವುದೇ ನಮ್ಮ ಜಾಣ್ಮೆಯಾಗಬೇಕು ಎಂಬ ಸತ್ಯವನ್ನು ಅನಂತ ಶಯನ ಅವರು ತೆರೆದಿಟ್ಟಿದ್ದಾರೆ.

- ಫ್ಯಾನ್ಸಿ ಮುತ್ತಣ್ಣ, ಕುಶಾಲನಗರ.

ನಂಬಲಾಗದAತೆ ಇಲ್ಲವಾಗುತ್ತೇವೆ...

ಮಾನ್ಯರೆ, ನಿಮ್ಮ ಲೇಖನ ಅಕ್ಷರಶಃ ಸತ್ಯ. ಇಂದು ಕಂಡವರು ನಾಳೆ ಇಲ್ಲವಾಗುತ್ತಾರೆ. ನನ್ನ ಬಾಲ್ಯದ ಗೆಳತಿ ೧೫ ದಿನದ ಹಿಂದೆ ತೀರಿಕೊಂಡಳು. ಸಾಯುವ ವಯಸ್ಸಲ್ಲ. ಸಾಯುವಂತಹ ಕಾಯಿಲೆಯಲ್ಲ. ತಟ್ಟೆಂದು ಹೃದಯಾಘಾತದಲ್ಲಿ ಹೋಗಿಬಿಟ್ಟಳು. ನನಗಿನ್ನೂ ಇದನ್ನು ನಂಬಲಾಗುತ್ತಿಲ್ಲ.

- ಸುರೇಖ ಹರೀಶ್, ಮೈಸೂರು.

ಸತ್ಯವಾದ ಸಾಲುಗಳು...

ಮಾನ್ಯರೆ, ಲೇಖನದ ಪ್ರತಿ ಶಬ್ಧ, ಪ್ರತಿ ಸಾಲು ವಾಸ್ತವದಿಂದ ಕೂಡಿದೆ. ಎಲ್ಲರಿಗೂ ಹುಟ್ಟು-ಸಾವಿನ ವಿಚಾರ ತಿಳಿದಿರುತ್ತದೆ. ಆದರೆ ಬದುಕಿನ ನಡುವೆ ಅದನ್ನು ಮರೆಯುತ್ತಾರೆ. ಅರಿತು ಬಾಳಬೇಕು.

- ನಮೃತಾ, ಕೊಟಕ್ ಬ್ಯಾಂಕ್, ಮಡಿಕೇರಿ.

ಕಣ್ಣು ತೆರೆಸುವ ಲೇಖನ

ಮಾನ್ಯರೆ, ಅನಂತ ಶಯನ ಅವರು ಸಾವಿನ ಕುರಿತು ಬರೆದ ಲೇಖನ ಎಲ್ಲರ ಕಣ್ಣು ತೆರೆಸುವಂತಿದೆ. ನಾನೇ ಎಲ್ಲ, ನನ್ನದೇ ಎಲ್ಲ, ಆ ಜಾತಿ, ಈ ಜಾತಿ ಎಂದು ಬೀಗುವ, ಕಿತ್ತಾಡುವ ಮಂದಿಗೆ ಇಂತಹದೊAದು ಲೇಖನ ಅತ್ಯವಶ್ಯಕ. ನಾನು ಈ ಲೇಖನವನ್ನು ಮೂರು ಬಾರಿ ಓದಿದೆ. ಪಾಪ - ಓಂಕಾರೇಶ್ವರ ದೇವಾಲಯದ ನಂದೀಶನ ಸಾವು - ಕರುವಿನ ಆಕ್ರಂದನ-ಛೆ, ಮನ ಮುದುಡಿಹೋಯಿತು. ಇನ್ನಾದರೂ ಜನ ವಾಸ್ತವ ಅರಿತು ‘ಆತ ಹೇಗೆ ಬಾಳಿದ್ದ’ ಎಂದು ಜನ ಸ್ಮರಿಸುವಂತೆ ಬದುಕು ನಡೆಸುವಂತಾಗಲಿ.

- ಚೌರೀರ ಸುಧಾ ಜವಹರ್, ಹೊದ್ದೂರು.

ನಶ್ವರ ಬದುಕು

ಮಾನ್ಯರೆ, ಬದುಕು ನಶ್ವರ. ಜನತೆ ಬಾಳಿನ ಅನಿಶ್ಚಿತತೆಯನ್ನು ಅರಿತು ಬಾಳುವುದು ಅವಶ್ಯಕ. ಈ ಸತ್ಯವನ್ನು ಬಹಳ ಅರ್ಥಪೂರ್ಣವಾಗಿ ನಿರೂಪಿಸಿದೆ. ಲೇಖನ ‘ಮೂರು ಕೆಮ್ಮಿನಷ್ಟೇ ದೂರ, ಮರಣ’. ಎಲ್ಲರೂ ಓದಿ ಚಿಂತಿಸಿ, ಆಚರಿಸಬೇಕಾದ ವಿಷಯ ಲೇಖನದಲ್ಲಿದೆ.

- ಶಿಲ್ಪಾ ರವೀಂದ್ರ ರೈ, ಮಡಿಕೇರಿ.

ನೀರ ಮೇಲಣ ಗುಳ್ಳೆ...

ಮಾನ್ಯರೆ, ಹೌದು, ನೀರ ಮೇಲಣ ಗುಳ್ಳೆಯಂತೆ ಮನುಷ್ಯ ಮತ್ತು ಪ್ರಾಣಿಗಳ ಬಾಳು-ಬದುಕು.

‘ಶಕ್ತಿ’ಯ ಲೇಖನ ಓದಿ ಕಣ್ಣೀರ ಧಾರೆ ಹರಿಯಿತು. ಬೆಂಗಳೂರಿನಲ್ಲಿ ನಾನು ವಾಯು ವಿಹಾರಕ್ಕೆಂದು ತೆರಳಿದ್ದೆ. ಅಲ್ಲಿ ಹಸುವೊಂದು ಕರು ಹಾಕುತ್ತಿತ್ತು. ತಲೆ ಮತ್ತು ಕಾಲುಗಳೆರಡು ಮಾತ್ರ ಹೊರ ಬಂದು ಅದು ಅಂಬಾ ಎನ್ನುತ್ತಾ ನರಳಾಡುತ್ತಿತ್ತು. ನೋಡುಗರೆಲ್ಲಾ ನೋಡದಂತೆ ತೆರಳುತ್ತಿದ್ದರು. ಮತ್ತೊಂದು ದನ ಬಂದು ಅದರ ಸುತ್ತು ಸುತ್ತುತ್ತಾ ಮೈ-ಕೈ ನಕ್ಕುತ್ತಾ ಸಮಾಧಾನಪಡಿಸುವಂತೆ ವರ್ತಿಸುತ್ತಿತ್ತು. ಹಸುವಿನ ಕಣ್ಣೀರು ಕಂಡು ಕರುಳು ಕಿತ್ತುಬಂದAತಾಗುತ್ತಿತ್ತು. ಅಕ್ಕಪಕ್ಕದ ಮನೆಯವರೂ ಸುಮ್ಮನೆ ನೋಡುತ್ತಿದ್ದರು. ನಾನು ಒಂದು ಮನೆಯವರನ್ನು ಕಾಡಿ ಸ್ವಲ್ಪ ನೀರು ತಂದುಕೊಟ್ಟು ಕುಡಿಸಿದೆ. ಹತ್ತು ನಿಮಿಷದಲ್ಲಿ ಕರು ಹೊರ ಬಂದಿತು. ನಿಮ್ಮ ಲೇಖನ ವಾಸ್ತವ ಮೆರೆದಿದೆ.

- ಗೌರಮ್ಮಯ್ಯ, ಬೆಂಗಳೂರು.

ಸತ್ಸAಗವಾಯಿತು...

ಮಾನ್ಯರೆ, ನಿಮ್ಮ ಲೇಖನ, ಅದರ ಒಕ್ಕಣೆ, ವಾಸ್ತವದ ವಿವರಣೆ ಓದುತ್ತಿದ್ದರೆ ಈ ಮಾತುಗಳನ್ನು ನಾನೆಲ್ಲೋ ಸತ್ಸಂಗದಲ್ಲಿ ಕೇಳುತ್ತಿದ್ದೇನೆ ಅನಿಸಿತು. ಸುಂದರವಾದ ಲೇಖನ. ಎಲ್ಲರಿಗೂ ಅವಶ್ಯವುಳ್ಳ ವಿಚಾರಧಾರೆ ಹರಿಸಿದ ನಿಮಗೆ ಧನ್ಯವಾದಗಳು.

- ರಾಣಿ ದೇವಯ್ಯ, ನಿಟ್ಟೂರು.

ನನ್ನದೊಂದು ಸಲ್ಯೂಟ್

ಮಾನ್ಯರೆ, ‘ಕೆಮ್ಮು... ಮರಣ’ ಈ ಬರಹ ಈಗಿನ ಜನತೆಯ ವಿಧವಿಧದ ಚಿಂತನೆಗಳಿಗೆ, ಪ್ರಶ್ನೆಗಳಿಗೆ ಸೂಕ್ತ ಉತ್ತರದಂತಿದೆ. ಅನಂತ ಶಯನ ಅವರ ಸಾಮಾಜಿಕ ಚಿಂತನೆ - ಬರಹದಲ್ಲಿ ಅನಾವರಣಗೊಂಡಿದೆ.

ನಶ್ವರ ಬದುಕಿನಲ್ಲಿ ಮರೆಯಾಗುವ ಮೊದಲು ಸಂಸ್ಕಾರಯುತ ಜೀವನ ನಡೆಸಿ, ಸಾವಿಗೆ ಹೆದರದಿರಿ, ಬಂದದ್ದನ್ನು ಸ್ವೀಕರಿಸಿ ಎನ್ನುವ ಸಂದೇಶಭರಿತ, ಉತ್ತಮ ಲೇಖನಕ್ಕೆ ನನ್ನದೊಂದು ಸಲ್ಯೂಟ್!

- ವಿಜಯ್ ಉತ್ತಯ್ಯ, ಮಡಿಕೇರಿ.

ಹುಟ್ಟು - ಸಾವು - ಬದುಕು...

ಮಾನ್ಯರೆ, ಹುಟ್ಟು - ಸಾವು - ಬದುಕಿನ ನಡುವಿನ ಎಲ್ಲವನ್ನೂ ಪುಟ್ಟ ಲೇಖನದಲ್ಲಿ ಹಿಡಿದಿಟ್ಟಿದ್ದೀರಿ. ಇದೊಂದು ಚಿಂತನೆಗೆ ಹಚ್ಚುವ ಲೇಖನ.

- ರಂಜಿತ್ ಕವಲಪಾರ, ಮಡಿಕೇರಿ.

ಸತ್ಯ ವಿಚಾರ - ಒಳ್ಳೆಯ ಲೇಖನ.

- ಸವಿತಾ ಭಟ್, ಮಡಿಕೇರಿ.

ತುಂಬಾ ಇಷ್ಟವಾದ ಲೇಖನ.

- ಜಯಲಕ್ಷಿö್ಮ, ಬೆಂಗಳೂರು.

ಮಾರ್ಮಿಕ ಬರಹ - ಅರಿಯಬೇಕಾದ ವಿಚಾರ.

- ಇಂದಿರಾ ಬಿಂದು, ಮೈಸೂರು.

ಮನೋಜ್ಞವಾಗಿದೆ

ಮನುಜರೆಲ್ಲರೂ ನಿತ್ಯ ಮನನ ಮಾಡಬೇಕಾದ, ಮನೋಜ್ಞ ಲೇಖನ. ಓದಿ ಸಂತೋಷವಾಯಿತು.

- ಎ.ಬಿ. ಶಿವದೇವಿ ಬಾಬಿ, ಕೊಡಗು ಜಿಲ್ಲೆ.

ಉತ್ತಮ ಬರಹ. ಎಲ್ಲರೂ ಓದಿ ತಿಳಿದುಕೊಳ್ಳಬೇಕಾದ ಸತ್ಯ.

- ಪ್ರಕಾಶ್ ಕಾರಂತ್, ರೋಟರಿ ಮಾಜಿ ಗವರ್ನರ್, ಕುಂದಾಪುರ.

ಚಿAತನೆಗೆ ಹಚ್ಚುವ ಲೇಖನ.

- ಎನ್.ಕೆ. ರಾಮಚಂದ್ರ, ಬೆಂಗಳೂರು.

ಬಹಳ ಇಷ್ಟವಾಯ್ತು

ಅಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಸಾವಿನ ಚಿಂತನೆ ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಬಹಳ ಇಷ್ಟವಾಯ್ತು.

- ಸುಜಾತ ರೆಡ್ಡಿ, ಬೆಂಗಳೂರು.

ಚAದದ, ಅರ್ಥಪೂರ್ಣ ಬರಹವಿದು. ಎರಡೆರಡು ಬಾರಿ ಓದಿದೆ.

- ಎ.ಎಂ. ವೃಂದಾ, ಮೂರ್ನಾಡು.

ಅರಿತು ಆಚರಿಸಬೇಕಾದ ಉತ್ತಮ ವಿಚಾರಧಾರೆ.

- ಬಾಲಕೃಷ್ಣ ಬಿ. ಸೂರ್ಕಳ್ಳಿ ಕೃಷ್ಣ.

ನೊಂದಾಗ ಸಿಟ್ಟು, ಸಿಟ್ಟಿನಲ್ಲಿ ದೇವರನ್ನು ಧೂಷಿಸುವುದು ಒಂದು ಮಟ್ಟ. ಅದನ್ನು ಮೀರಿ, ವಾಸ್ತವ ಅರಿಯಬೇಕು.

- ಚರಿತಾ ಕಾರ್ಯಪ್ಪ, ಬೆಂಗಳೂರು.

ಚಿAತನ - ಮಂಥನ ಲೇಖನ.

- ಶಿವಾನಂದ ಕಾಮತ್.

ಪ್ರಾಪಂಚಿಕ ವ್ಯಾಮೋಹ

ಮಾನ್ಯರೆ, ಮಾನವನ ಜನ್ಮದ ಉದ್ದೇಶವೇ ಮೋಕ್ಷ ಪ್ರಾಪ್ತಿ. ಆದರೆ ಶೇ. ೯೦ ರಷ್ಟು ಮಂದಿ ಪ್ರಾಪಂಚಿಕ ವ್ಯಾಮೋಹಕ್ಕೆ ಒಳಗಾಗುತ್ತಾರೆ. ತಾವೇ ನಿರ್ಮಿಸಿದ ಜೈಲಿನಲ್ಲಿ ಬಂಧಿಗಳಾಗುತ್ತಾರೆ. ಈ ಲೇಖನ ಅಂತಹವರ ಕಣ್ಣು ತೆರೆಸುವಂತಿದೆ.

- ರಾಕೇಶ್ ನೆಲ್ಲಿತ್ತಾಯ, ಬೆಂಗಳೂರು.

ಸಾವಿನAದು ಮಾತ್ರ ವೈರಾಗ್ಯ

ಮಾನ್ಯರೆ, ಸಾವಿನ ದಿನ ಎಲ್ಲರ ಬಾಯಲ್ಲೂ ವೈರಾಗ್ಯದ ಮಾತು. ಮರು ದಿನದಿಂದ ಪುನಃ ಆಸೆಗೆ ದಾಸರು! ಮಾನವನ ಗುಣವೇ ಹೀಗೆ. ಪರಮಾತ್ಮನ ಅರಿವು ಯಾರಲ್ಲಿರುವುದೋ ಅವರು ಶಾಂತಿಯಿAದ ಬದುಕಿ ಜೀವನ ಸಾರ್ಥಕ ಮಾಡಿಕೊಳ್ಳುತ್ತಾರೆ.

ನಿಮ್ಮ ಲೇಖನ ಮನ ಪರಿವರ್ತನೆ ಮಾಡುವಂತಿದೆ.

- ರುಕ್ಮಿಣಿ ನಾಣಯ್ಯ, ಚೆರಿಯಪಂಡ.

ಸಾವಿನ ಭಯ, ಪ್ರಶ್ನೆಗಳಿಗೆ ಉತ್ತನ ಹುಡುಕುವವರಿಗೆ ಉತ್ತಮ ಉತ್ತರ ನೀಡುವ ಅಧ್ಯಾತ್ಮಿಕ ಲೇಖನ.

- ಶಾಂತಿ ವಿ. ಭಟ್.

ಲೈಫು ಇಷ್ಟೇನೆ ಅಲ್ವ. ಸತ್ಯಕ್ಕೆ ಸನಿಹವಾದ ವಿಶಿಷ್ಟ ಲೇಖನವಿದು.

- ಪರಮೇಶ್ ಕೆರೆಕರಿ, ಸಂಯುಕ್ತ ಕರ್ನಾಟಕ, ಬೆಂಗಳೂರು.ಎಚ್ಚರಿಕೆ ಘಂಟೆ...!

ಮಾನ್ಯರೆ, ಭೂಮಿಯಲ್ಲಿ ದರ್ಪದಿಂದ ಬಾಳುವ ಮಂದಿಗೆ, ಮರಣದ ಕುರಿತು ಮೂಡಿಬಂದ ಈ ಲೇಖನ ಎಚ್ಚರಿಕೆ ಘಂಟೆಯAತಿದೆ.

- ಮೋಹನ್‌ದಾಸ್, ಐಗೂರು.

ವಿಚಾರಪೂರ್ಣ ಲೇಖನ

ಮಾನ್ಯರೆ, ಇದೊಂದು ಕಣ್ಣು ತೆರೆಸುವ ವಿಚಾರಪೂರ್ಣ ಲೇಖನ. ಸಾವು ಯಾವಾಗ, ಎಲ್ಲಿ, ಹೇಗೆ ಎಂದು ಅರಿತವರಿಲ್ಲ. ಅಂದಮೇಲೆ ಅದನ್ನು ಬಂದAತೆ ಸ್ವಾಗತಿಸಬೇಕು. ಮೂರು ಕೆಮ್ಮೇಕೆ, ಒಂದೇ ಕೆಮ್ಮು ಸಾಕು ಸಾಯಲು!

ನಿಗೂಢ, ಸಂದಿಗ್ಧ, ದುಸ್ತರ ಬದುಕು ಹಾಗೂ ಹಠಾತ್ ಮರಣ ಅರಗಿಸಿಕೊಳ್ಳಲು ಅಧ್ಯಾತ್ಮದ ಅರಿವು ಸಹಕಾರಿ. ಅದನ್ನು ಅಕ್ಷರಷಃ ಎದುರಿಗಿಟ್ಟಿದ್ದೀರಿ. ಅಭಿನಂದನೆಗಳು.

- ರಮೇಶ್ ಮರಸಂಕ ಶ್ಯಾಮಭಟ್, ಬೆಂಗಳೂರು.

ಮತ್ತೆ ಮತ್ತೆ ಓದಿದೆ...

ಮಾನ್ಯರೆ, ನಮ್ಮನ್ನೆಲ್ಲ ಜನ್ಮ ತಾಳುವಂತೆ ಮಾಡಿ, ಲಾಲಿಸಿ, ಪೋಷಿಸಿ, ನೀನು ಮಾಡಿದ್ದು ಸಾಕು, ಹಿಂದಕ್ಕೆ ಬಾ ಎನ್ನುವಂತೆ ಕರೆಸಿಕೊಳ್ತಾನೆ ಭಗವಂತ.

ಅAತೂ ಅನಂತ ಶಯನ ಅವರು ಸಾವನ್ನು ಅಧ್ಯಾತ್ಮದ ಮೂಲಕ ನೋಡಬೇಕು ಎನ್ನುವ ಲೇಖನವನ್ನು ಸಾವು ಬರುವದರೊಳಗೆ ಮತ್ತೆ ಮತ್ತೆ ಓದಬೇಕೆನಿಸುವಂತೆ ಬರೆಯಲಾಗಿದೆ. ಓದಿದೆ... ಮತ್ತೆ ಮತ್ತೆ ಓದಿದೆ. ಹೊತ್ತಿಲ್ಲ - ಗೊತ್ತಿಲ್ಲ ಕರ್ಕೊಂಡು ಹೋಗೇಬಿಡ್ತಾನಲ್ಲ!

- ಜಿ.ಟಿ. ರಾಘವೇಂದ್ರ, ಮಡಿಕೇರಿ.

ಅದ್ಭುತವಾದ ಲೇಖನ. - ಪ್ರವೀಣ್ ಕೂರ್ಗ್.

ಬಹಳ ಚೆನ್ನಾಗಿದೆ. ಅರಿಯಬೇಕು - ಆಚರಿಸಬೇಕು.

- ಶಾರದಾ ನರೇಂದ್ರ, ಬೆಂಗಳೂರು.

ತೂಕವುಳ್ಳ ಬರಹ. - ಗೀತಾಂಜಲಿ ಮಹೇಶ್, ಸೋಮವಾರಪೇಟೆ.

ಓದಿದೆ - ಚಪ್ಪಾಳೆ ತಟ್ಟುವೆ, ಚೆನ್ನಾಗಿದೆ ಎಂದು.

- ಮೋನಿಶ್ ಸುಕುಮಾರ.

ಬದುಕಿಯೇ ಇಲ್ಲವೆಂಬAತೆ...

ಮಾನ್ಯರೆ, ಈ ಮಂದಿ ಸಾವೇ ಇಲ್ಲವೆಂಬAತೆ ಬದುಕುತ್ತಾರೆ. ಸಾಯುವಾಗ ಬದುಕಿಯೇ ಇಲ್ಲವೆಂಬAತೆ ಆಡುತ್ತಾರೆ!

- ಅಶೋಕ್ ಕುಮಾರ್ ವೈ.ಜಿ., ಹಿರಿಯ ಪತ್ರಕರ್ತ, ಬೆಂಗಳೂರು.

ಲೇಖನ ಓದಿದೆ. ಓದಿಸಿಕೊಂಡು ಹೋಗುತ್ತದೆ. ಬಹಳ ಚೆನ್ನಾಗಿದೆ.

- ಗೀತಾಬಾವೆ, ಮಡಿಕೇರಿ.

ಎಷ್ಟು ಸೂಕ್ತವಾಗಿದೆ

ಮಾನ್ಯರೆ, ನಾನೊಂದು ಇಂಗ್ಲೀಷ್ ಲೇಖನ ‘Wಇ ಂಖಇ ಂಐಐ ಎUSಖಿ ಉಔIಓಉ ಊಔಒಇ’ ಎಂಬ ಓದುತ್ತಾ ಇರುವಾಗ ನೀವು ಬರೆದ ಲೇಖನ ಎದುರಾಯಿತು. ನಿಮ್ಮ ದೃಷ್ಠಿಕೋನ ರೋಚಕವಾಗಿದೆ. ಅಂತರ್ಯ ಪ್ರವೇಶಿಸುತ್ತದೆ. ಒಳದೃಷ್ಠಿಯನ್ನು ಪ್ರೇರೇಪಿಸುತ್ತದೆ.

- ಮೋಕ್ಷಿತಾ ಪಟೇಲ್.

ಸಮಾಜಕ್ಕೊಂದು ಸಂದೇಶ

ಮಾನ್ಯರೆ, ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದೀರ. ಲೇಖನ ಓದಿ ಹೆಮ್ಮೆ ಅನಿಸಿತು. ಮಾನವ ಎಲ್ಲಿಂದ ಬಂದ, ಎಲ್ಲಿಗೆ ಹೋಗುತ್ತಾನೆ. ಹೇಗೆ ಹೋಗುತ್ತಿದ್ದಾನೆ ಎಂಬ ವಿಚಾರ ಚಿಂತಿಸುವAತೆ ಮಾಡಿದೆ.

- ಪುಲ್ಲೇರ ಕಾಳಪ್ಪ ಕೊಡವ, ೭ನೇ ಹೊಸಕೋಟೆ.

ಸತ್ವಯುತ ಲೇಖನ. ಎಲ್ಲರೂ ಓದಬೇಕು.

- ಜಯಲಕ್ಷಿö್ಮ ಕೆ., ಉಪನ್ಯಾಸಕಿ, ಮಡಿಕೇರಿ.

ಅನಂತ್, ಲೇಖನ ಓದುತ್ತಾ ಉದ್ವೇಗಕ್ಕೆ ಒಳಗಾಗಿಬಿಟ್ಟೆ. ಎಷ್ಟೊಂದು ಸುಂದರ ಬರಹ ಸತ್ಯದ ಕುರಿತು.

- ಕೆ.ಎಂ. ಕರುಂಬಯ್ಯ, ಮಡಿಕೇರಿ.

ಕಣ್ಮುಂದೆ ಬಂದAತಾಯಿತು

ಮಾನ್ಯರೆ, ಅನಂತ ಶಯನ ಅವರ ಮೂರು ಕೆಮ್ಮಿನಷ್ಟೇ ದೂರ ಮರಣ ಲೇಖನವನ್ನು ಓದಿದಾಗ ಮಾನವ ಜೀವನದ ಪ್ರತಿಯೊಂದು ಹೆಜ್ಜೆಯ ಗುರುತು ಕಣ್ಮುಂದೆ ಬಂದು ನಿಂತAತಾಯಿತು.

ಅದಕ್ಕೆ ಹಿರಿಯರು, ಅನುಭವಿಗಳು, ಸಾಹಿತಿಗಳು, ಋಷಿಮುನಿಗಳು ತಮ್ಮ ಅಧ್ಯಾತ್ಮಿಕ, ಮಾನಸಿಕ ಅನುಭವಗಳ ಚಿಂತನೆಗಳನ್ನು ನಮಗೆ ಬಿಚ್ಚಿಟ್ಟು ಅಮರರಾಗಿದ್ದಾರೆ. ಮೂರು ಕೆಮ್ಮಿನಷ್ಟೇ ದೂರ ಮರಣ ಲೇಖನವನ್ನು ಮತ್ತೂ ನೆನಪಿಸಿದಾಗ ಮೂರು ದಶಕದ ಹಿಂದೆ ೫೬ ವರುಷದಲ್ಲಿ ನಡೆದ ಅಪ್ಪಾ... ಅಪ್ಪಾ... ಏನಾಯ್ತು ಹೇಳು ಎಂದು ಉಸಿರಾಟವನ್ನು ಕೊಡುತ್ತಾ ಇದ್ದಾಗ ಮೂರೇ ಕೆಮ್ಮು ಕೆಮ್ಮುತ್ತಾ ಕಣ್ಮುಚ್ಚಿದ ಘಟನೆ ಕಣ್ಮುಂದೆ ಮತ್ತೊಮ್ಮೆ ಬಂದAತಾಯ್ತು. ಇದೇ ಮನುಷ್ಯ ಜೀವನವಲ್ಲವೇ? ತಿಳಿಯದವರಿಗೆ ತಿಳಿಯಪಡಿಸಲು ಬರೆದ ಲೇಖಕರಿಗೂ, ಪ್ರಕಟಿಸಿದ ಪತ್ರಿಕೆಗೂ ಧನ್ಯವಾದಗಳು.

- ಚೌರಿರ ಚೋಂದಮ್ಮ ಚಂಗಪ್ಪ, ಕೆ. ಬಾಡಗ, ಮಡಿಕೇರಿ.