ಮಡಿಕೇರಿ, ಸೆ. ೨: ಪ್ರಸಕ್ತ(೨೦೨೪-೨೫) ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ ಅರೆ ಅಲೆಮಾರಿ ಪ್ರವರ್ಗ-೧ ವಿದ್ಯಾರ್ಥಿಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ‘ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ತಾ.೧೫ ಕೊನೆಯ ದಿನವಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವೆಬ್‌ಸೈಟ್ hಣಣಠಿs://ssಠಿ.ಠಿosಣmಚಿಣಡಿiಛಿ.ಞಚಿಡಿಟಿಚಿಣಚಿಞಚಿ.gov.iಟಿ/ ಕಾರ್ಯಕ್ರಮಗಳ ವಿವರ, ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ಕಾರ್ಯಕ್ರಮಗಳ ಸರ್ಕಾರಿ ಆದೇಶಗಳಿಗೆ ಇಲಾಖಾ ವೆಬ್‌ಸೈಟ್ hಣಣಠಿs://bಛಿತಿಜ.ಞಚಿಡಿಟಿಚಿಣಚಿಞಚಿ.gov.iಟಿ ನ್ನು ನೋಡಬಹುದು. ಹೆಚ್ಚಿನ ಮಾಹಿತಿಗೆ ಇಲಾಖಾ ಸಹಾಯವಾಣಿ ಸಂಖ್ಯೆ ೮೦೫೦೭೭೦೦೦೫ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾAಶದ ಸಹಾಯವಾಣಿ ಇ-ಮೇಲ್ ಠಿosಣmಚಿಣಡಿiಛಿheಟಠಿ@ಞಚಿಡಿಟಿಚಿಣಚಿಞಚಿ.gov.iಟಿ ದೂ.ಸಂ.೦೮೨೭೨-೨೯೫೬೨೮ ನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವರು ತಿಳಿಸಿದ್ದಾರೆ.