ಗೋಣಿಕೊಪ್ಪ ವರದಿ, ಸೆ. ೨: ಕರ್ನಾಟಕ ರಾಜ್ಯ ಅಮೆಚೂರ್ ಬಾಡಿ ಬಿಲ್ಡರ್ ಅಸೋಸಿಯೇಷನ್ ವತಿಯಿಂದ ಕೂರ್ಗ್ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ೩೦೦ ಕ್ಕೂ ಸ್ಪರ್ಧಿಗಳು ಪಾಲ್ಗೊಂಡು ದೇಹ ಪ್ರದರ್ಶನ ನೀಡಿದರು. ಜಿಲ್ಲೆಯಲ್ಲಿ ಮೊದಲ ಬಾರಿಗೆ ಸ್ಪರ್ಧೆ ನಡೆದ ಕಾರಣ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡು ಗಮನ ಸೆಳೆದರು.

ಮಿಸ್ಟರ್ ಫಿಟ್‌ನೆಸ್ ಮಂತ್ರ ಬೆಸ್ಟ್ ಫಿಸಿಕ್, ಮಿಸ್ಟರ್ ಕಾಫಿ ನಾಡು ಮತ್ತು ಮಿಸ್ಟರ್ ಫಿಟ್‌ನೆಸ್ ಮಂತ್ರ ಕ್ಲಾಸಿಕ್ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.

ಮಿಸ್ಟರ್ ಫಿಟ್‌ನೆಸ್ ಮಂತ್ರ ವಿಭಾಗದ ಬೆಸ್ಟ್ ಫಿಸಿಕ್ ಸ್ಪರ್ಧೆಯನ್ನು ಮೈಸೂರಿನ ಪ್ರವೀಣ್ ಗೆದ್ದುಕೊಂಡರು. ಬೆಂಗಳೂರಿನ ಭರತ್ ಉಮೇಶ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಮಿಸ್ಟರ್ ಫಿಟ್‌ನೆಸ್ ಮಂತ್ರ ಕ್ಲಾಸಿಕ್ ವಿಭಾಗದಲ್ಲಿ ಮೈಸೂರಿನ ಮಹಮ್ಮದ್ ಇಬ್ರಾಹಿಂ ಪ್ರಥಮ, ಮೈಸೂರಿನ ನವೀನ್‌ಕುಮಾರ್ ಮೋಸ್ಟ್ ಮಸ್‌ಕ್ಯೂಲರ್ ಮ್ಯಾನ್ ಸ್ಥಾನ ಗಿಟ್ಟಿಸಿಕೊಂಡರು. ಬೆಂಗಳೂರಿನ ಎಚ್. ಅರುಣ್‌ಕುಮಾರ್ ಬೆಸ್ಟ್ ಫೋಸರ್ ಸ್ಥಾನ ಪಡೆದರು.

ಮಿಸ್ಟರ್ ಕಾಫಿ ನಾಡು ಸ್ಥಾನವನ್ನು ಕುಶಾಲನಗರದ ಪಿ. ಪಿ. ಪವನ್‌ಕುಮಾರ್ ಗಿಟ್ಟಿಸಿಕೊಂಡರು. ಕುಶಾಲನಗರದ ಎಚ್. ಆರ್. ಪ್ರಕಾಶ್ ಮೋಸ್ಟ್ ಮಸ್‌ಕ್ಯೂಲರ್ ಮ್ಯಾನ್ ಸ್ಥಾನ, ಕುಶಾಲನಗರದ ಅಜಯ್ ಬೆಸ್ಟ್ ಫೋಸರ್ ಸ್ಥಾನ ಪಡೆದುಕೊಂಡರು.

ಅಂತಾರಾಷ್ಟಿçÃಯ ಬಾಡಿ ಬಿಲ್ಡರ್ ಎಂ. ಡಿ. ರಫಿ, ದೀಪಕ್ ಕಾವೇರಪ್ಪ, ಮಿಸ್ಟರ್ ಇಂಡಿಯ ಪುರಸ್ಕೃತ ಕಾಮರಾಜ್, ಆರ್. ಪ್ರಸಾದ್ ಕುಮಾರ್ ಹಾಗೂ ರಫೀಕ್ ಪಾಲ್ಗೊಂಡು ಗಮನ ಸೆಳೆದರು.

ಮುಖ್ಯ ಅತಿಥಿಗಳಾಗಿ ಮಿಸ್ಟರ್ ಇಂಡಿಯಾ ವಿನ್ನರ್ ಎಂ. ಕಾಮರಾಜ್, ಪ್ರಸಾದ್ ಕುಮಾರ್. ಆರ್, ಇಂಟರ್ ನ್ಯಾಷನಲ್ ಬಾಡಿ ಬಿಲ್ಡರ್ ದೀಪಕ್ ಕಾವೇರಪ್ಪ, ಮಹಮ್ಮದ್ ರಫಿ ಬಹುಮಾನ ವಿತರಣೆ ಮಾಡಿದರು.

ಉದ್ಘಾಟನೆಯನ್ನು ರಾಷ್ಟಿçÃಯ ಯೋಗ ತರಬೇತುಗಾರ್ತಿ ಸ್ವಾತಿ ಬಿ. ಶೆಟ್ಟಿ ದೀಪ ಬೆಳಗಿಸಿ ನೆರವೇರಿಸಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಪ್ರಮುಖರಾದ ಗುಮ್ಮಟಿರ ಕಿಲನ್ ಗಣಪತಿ, ಗಿರೀಶ್ ಗಣಪತಿ, ಕೊಣಿಯಂಡ ಕಾವ್ಯ ಸಂಜು, ಚೆಪ್ಪುಡಿರ ಅರುಣ್ ಮಾಚಯ್ಯ, ಹಕೀಮ್, ಉಮೇಶ್ ಹಾಗೂ ಕಾರ್ಯಕ್ರಮ ಸಂಚಾಲಕರಾದ ಎಂ. ರಫೀಕ್, ಲಾಲ್‌ಕುಮಾರ್, ಮೀದೇರಿರ ನವೀನ್, ಮಹಿಳಾ ಸ್ಪರ್ಧಿ ನಿಶ್ಚಿತಾ ಉತ್ತಯ್ಯ, ಬಲ್ಯಂಡ ವರ್ಷ, ಎ. ಮಂಜುಳ ಇದ್ದರು.

ರಾಷ್ಟಿçÃಯ ತೀರ್ಪುಗಾರರಾದ ಕೆ. ವೆಂಕಟೇಶ್, ರವೀಂದ್ರ ಲಕ್ಕಾ, ಒ. ಆರ್. ಮೆನ್ಸಿಸ್, ಶ್ರೀನಿವಾಸ್ ಸ್ವಾಮಿ, ಕೆ. ರಾಜೇಶ್ ರಾವ್ ಕಾರ್ಯನಿರ್ವಹಿಸಿದರು.