ಮಡಿಕೇರಿ, ಸೆ. ೨: ೨೦೨೪-೨೫ನೇ ಸಾಲಿನ ಯುವಜನೋತ್ಸವ ಎಚ್.ಐ.ವಿ/ಏಡ್ಸ್ ಅರಿವು ಆಂದೋಲನ-ಕಾರ್ಯಕ್ರಮದ ಅಂಗವಾಗಿ (ರೆಡ್ ರಿಬ್ಬನ್ ಓಟ, ಎಚ್.ಐ.ವಿ/ಏಡ್ಸ್ ನಿಯಂತ್ರಣಕ್ಕಾಗಿ ಯುವಜನತೆ) ಎಚ್.ಐ.ವಿ/ಏಡ್ಸ್ ಜಾಗೃತಿಗಾಗಿ ಮ್ಯಾರಾಥಾನ್ ಸ್ಪರ್ಧೆಯು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂ ಗಣದಲ್ಲಿ ಶನಿವಾರ ನಡೆಯಿತು.

೫ ಕಿ.ಮೀ. ಮ್ಯಾರಾಥಾನ್ ಸ್ಪರ್ಧೆ(೫ ಕಿ.ಮೀ) ಹಮ್ಮಿಕೊಳ್ಳಲಾಗಿತ್ತು. ಮ್ಯಾರಾಥಾನ್ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಒಟ್ಟು ೮೩ ಕಾಲೇಜು ವಿದ್ಯಾರ್ಥಿ/ ವಿದ್ಯಾರ್ಥಿನಿ ಯರು ಭಾಗವಹಿಸಿದ್ದರು.

ಈ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಹಸಿರು ನಿಶಾನೆ ಮುಖಾಂತರ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಆನಂದ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಮುರಳಿಧರ್ ಅಂಥೋನಿ ಡಿಸೋಜ, ಮಹಾಬಲ, ಜಿಲ್ಲಾ ಯುವಸಬಲೀ ಕರಣ ಮತ್ತು ಕ್ರೀಡಾ ಇಲಾಖೆಯ ತರಬೇತುದಾರರಾದ ಬಿಂದ್ಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಅಂತ ರರಾಷ್ಟಿçÃಯ ಬ್ಯಾಡ್ಮಿಂಟನ್ ಆಟಗಾರ್ತಿ ಜ್ಯೋತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸುನೀತ ಮುತ್ತಣ್ಣ, ಜಿಲ್ಲಾ ಮೇಲ್ವಿಚಾರಕರು, ಕಮಲ, ಉಷಾ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂ ದಿಗಳು ಹಾಗೂ ವಿವಿಧ ಕಾಲೇಜಿನ ಉಪನ್ಯಾಸಕರು ಹಾಜರಿದ್ದರು.

ಮ್ಯಾರಾಥಾನ್ ಸ್ಪರ್ಧೆಯು ಜನರಲ್ ತಿಮ್ಮಯ್ಯ ಕ್ರೀಡಾಂಗಣ, ಮಾನ್ಸ್ ಕಾಂಪೌAಡ್, ಮಡಿಕೇರಿ ಯಿಂದ ಪ್ರಾರಂಭವಾಗಿ, ನಗರದ ಪ್ರಮುಖ ಬೀದಿಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸರ್ಕಲ್, ಜನರಲ್ ತಿಮ್ಮಯ್ಯ ಸರ್ಕಲ್ (ಜಿ.ಟಿ ಸರ್ಕಲ್) ಮುಖಾಂತರ ಹಾದು ಜನರಲ್ ತಿಮ್ಮಯ್ಯ ಕ್ರೀಡಾಂಗಣವನ್ನು ತಲುಪಿತು. ಮ್ಯಾರಾಥಾನ್ ಸಂಚರಿಸುವ ಮಾರ್ಗದಲ್ಲಿ, ಆಟೋ ಪ್ರಚಾರದ ಮುಖಾಂತರ ಎಚ್.ಐ.ವಿ/ಏಡ್ಸ್ ಬಗ್ಗೆ ಅರಿವು ಮೂಡಿಸಲಾಯಿತು.

ವಿವಿಧ ಕಾಲೇಜುಗಳಿಂದ ಒಟ್ಟು ೮೩ ವಿದ್ಯಾರ್ಥಿಗಳು ಮ್ಯಾರಾಥಾನ್‌ನಲ್ಲಿ ಭಾಗವಹಿಸಿದ್ದು ವಿಜೇತರಾದವರ ವಿವರ ಇಂತಿದೆ

ಬಾಲಕರ ವಿಭಾಗದಲ್ಲಿ: ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಎಸ್. ಗೌತಮ್(ಪ್ರಥಮ), ವೀರಾ ಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಎಚ್.ಪ್ರತಾಪ್ (ದ್ವಿತೀಯ), ಸೋಮವಾರಪೇಟೆ ಸೆಂಟ್ ಜೋಸೆಪ್‌ನ ದೀಪಕ್ ಎಸ್.ಯು (ತೃತೀಯ) ಹಾಗೂ ವೀರಾಜಪೇಟೆ ಕಾವೇರಿ ಕಾಲೇಜಿನ ತಕ್ಷಕ್ ಬಿದ್ದಪ್ಪ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಗೌತಮ್ ಪಿ.ಸಿ., ವೀರಾಜಪೇಟೆ ಕಾವೇರಿ ಕಾಲೇಜಿನ ರೋಶನ್ ಉತ್ತಪ್ಪ ಮತ್ತು ಮಡಿಕೇರಿ ಎಫ್‌ಎಂಸಿ ಕಾಲೇಜಿನ ಪೃಥ್ವೀಶ್ ಎಂ.ಆರ್ ಅವರು ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.

ಬಾಲಕಿಯರ ವಿಭಾಗದಲ್ಲಿ: ಪೊನ್ನಂಪೇಟೆ ಕೂರ್ಗ್ ಇನ್ಸ್ಟ್ಯೂಟ್ ಆಫ್ ಟೆಕ್ನಾಲಜಿನ ಚೋಂದಮ್ಮ ಕೆ.ಟಿ.(ಪ್ರಥಮ), ಮಡಿಕೇರಿ ಎಫ್‌ಎಂಸಿ ಕಾಲೇಜಿನ ನಿಲಿಶಾ ಜೋಜೋ (ದ್ವಿತೀಯ), ಸೋಮವಾರಪೇಟೆ ಸಂತ ಜೋಸೆಪ್ ಶಾಲೆಯ ಐಶ್ವರ್ಯ ಕೆ.ವೈ (ತೃತೀಯ) ಹಾಗೂ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೌನ ಎಚ್.ಎಸ್, ಮಡಿಕೇರಿ ಎಫ್‌ಎಂಸಿ ಕಾಲೇಜಿನ ಭೂಮಿಕಾ ಕೆ.ಆರ್, ವೀರಾಜಪೇಟೆ ಕಾವೇರಿ ಕಾಲೇ ಜಿನ ಕಾವ್ಯ ಎನ್.ಆರ್. ಮತ್ತು ಮಡಿಕೇರಿ ಪ್ರಥಮ ದರ್ಜೆ ಕಾಲೇಜಿನ ಮೇಘನಾ ಬಿ.ಎಂ. ಅವರು ಸಮಾಧಾನಕರ ಬಹುಮಾನ ಪಡೆದುಕೊಂಡರು.

ಜಿಲ್ಲಾಮಟ್ಟದಲ್ಲಿ ಪ್ರಥಮ ಬಹು ಮಾನ ಪಡೆದ ವಿದ್ಯಾರ್ಥಿಗಳಾದ, ಗೌತಮ್. ಎಸ್ ಮತ್ತು ಚೋಂದಮ್ಮ ಕೆ.ಟಿ ಇವರು ಬೆಂಗಳೂರಿನಲ್ಲಿ ನಡೆ ಯುವ ರಾಜ್ಯ ಮಟ್ಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಮ್ಯಾರ ಥಾನ್ ಸ್ಪರ್ಧೆಯಲ್ಲಿ ವಿಜೇತರು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.