ಮಡಿಕೇರಿ, ಸೆ. ೪: ನಬಾರ್ಡ್ ಬೆಂಗಳೂರು ಮತ್ತು ಓ.ಡಿ.ಪಿ. ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜೀವನೋಪಾಯ, ಉದ್ಯಮಶೀಲ ಅಭಿವೃದ್ಧಿ ಕಾರ್ಯಕ್ರಮ ದಡಿಯಲ್ಲಿ ಸಮಾರೋಪ ಮತ್ತು ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಮಡಿಕೇರಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ರಮೇಶ್ ಬಾಬು ಅವರು ವಹಿಸಿದ್ದರು. ನಬಾರ್ಡ್ನಿಂದ ೧ ತಿಂಗಳು ೬೦ ಶಿಬಿರಾರ್ಥಿಗಳಿಗೆ ಓಡಿಪಿ ಸಂಸ್ಥೆಯ ಸಹಕಾರದಿಂದ ತರಬೇತಿ ನೀಡಲಾಗಿದೆ.

ತರಬೇತಿಯಿಂದ ಪ್ರಯೋಜನವಾಗಲಿ, ಸರಕಾರದ ಸೌಲಭ್ಯಗಳನ್ನು ಉಪಯೋಗಿಸಿ ಎಂದು ಕರೆ ನೀಡಿದರು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಜಿ.ಪಂ. ಉಪಕಾರ್ಯದರ್ಶಿ ಧನರಾಜ್ ಮಾತನಾಡಿ, ಬ್ರೆöÊಡಲ್ ಮೇಕಪ್ ಕಲಿತು, ಬ್ಯಾಂಕಿನಿAದ ಸಾಲ ತೆಗೆದು ಬ್ಯೂಟೀಷಿಯನ್ ಅಂಗಡಿ ತೆರೆದು ಉದ್ಯಮಿಗಳಾಗುವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ಮುಖ್ಯ ಅಥಿತಿಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕ ನಟರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲಿ, ಸಂಘಸAಸ್ಥೆಗಳಲ್ಲಿ ಸೇರಿ ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದೆ ಬರುತ್ತಿದ್ದಾರೆ. ಇಲಾಖೆಯಿಂದ ಸಿಗುವ ಅನೇಕ ಸಬ್ಸಿಡಿ ಸಾಲದ ಬಗ್ಗೆ ಮಾಹಿತಿ ನೀಡಿ ಅದರ ಉಪಯೋಗ ಪಡೆದು, ಸ್ವ-ಉದ್ಯೋಗ ರೂಪಿಸಿಕೊಳ್ಳುವಂತೆ ಕರೆ ನೀಡಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ ನಾಯ್ಕ ಮಾತನಾಡಿ, ಬ್ಯಾಂಕುಗಳಿAದ ಸ್ವಂತ ಉದ್ದಿಮೆ ಪ್ರಾರಂಭಿಸಲು ಸಾಲ ಸೌಲಭ್ಯಗಳನ್ನು ನೀಡುತ್ತೇವೆ. ಮಹಿಳೆಯರಿಗೆ ಅಸಾಧ್ಯವಾದುದು ಯಾವುದು ಇಲ್ಲ. ಛಲಬೇಕು, ಕನಸಿರಬೇಕು, ಕಷ್ಟಪಟ್ಟರೆ ಸ್ವಾವಲಂಬಿ ಜೀವನ ಸಾಗಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಓಡಿಪಿ ಸಂಸ್ಥೆ ಮೋಲಿ, ಲಲಿತ ಜಾಯ್ಸ್ ಮೆನೆೆಜಸ್ ಹಾಗೂ ಇತರರು ಇದ್ದರು.

ಮಡಿಕೇರಿ ಮತ್ತು ಕುಶಾಲನಗರದಲ್ಲಿ ತರಬೇತಿ ಪಡೆದ ೬೦ ಶಿಬಿರಾರ್ಥಿಗಳು ಭಾಗವಹಿಸಿದ್ದರು.