ಮಡಿಕೇರಿ, ಸೆ. ೪: ಅಂಡರ್ ೧೬ ಮಂಗಳೂರು ವಲಯ ಕ್ರಿಕೆಟ್ ತಂಡಕ್ಕೆ ಕೊಡಗು ಜಿಲ್ಲೆಯ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ತಾ.೮ ರಂದು ಮಂಗಳೂರು ಲಾಲ್‌ಬಾಗ್‌ನಲ್ಲಿರುವ ಸಾಯ್ ಬೀನ್ ಕಾಂಪ್ಲೆಕ್ಸ್ ನ ೨೨ ಯಾರ್ಡ್ಸ್ ಇಂಡೋರ್ ಕ್ರಿಕೆಟ್ ಫೆಸಿಲಿಟಿಯಲ್ಲಿ ನಡೆಯಲಿದೆ. ೨೦೦೮ ಸೆಪ್ಟೆಂಬರ್ ೧ ರಂದು ಹಾಗೂ ನಂತರದಲ್ಲಿ ಜನಿಸಿರುವ, ೧೪ ವರ್ಷ ಮೇಲ್ಪಟ್ಟ ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಂದು ಬೆಳಿಗ್ಗೆ ವೈಟ್ ಜರ್ಸಿ, ಶೂಸ್‌ನೊಂದಿಗೆ ಜನನ ಪ್ರಮಾಣ ಪತ್ರದೊಂದಿಗೆ ಬೆ. ೯ ಗಂಟೆಗೆ ಸ್ಥಳದಲ್ಲಿ ಹಾಜರಿರಬೇಕೆಂದು ಕೆ.ಎಸ್.ಸಿ.ಎ ಮಂಗಳೂರು ವಲಯ ಸಂಚಾಲಕ ರತನ್ ಕುಮಾರ್ ತಿಳಿಸಿದ್ದಾರೆ.