ಮಡಿಕೇರಿ, ಸೆ.೪ : ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾಗಿರುವ ಕೃಷಿ ಕೆಲಸ ಕಾರ್ಯಗಳ ಜಂಜಾಟದ ನಂತರದಲ್ಲಿ ಜನರ ಮನಸ್ಸಿಗೆ ಮುದ ನೀಡುವ ಹಾಗೂ ಸಂಪ್ರದಾಯಬದ್ದವಾದ ಹಿನ್ನೆಲೆಯನ್ನೂ ಹೊಂದಿರುವ ಕೈಲ್‌ಪೊಳ್ದ್ (ಕೈಲ್ ಮುಹೂರ್ತ) ಹಬ್ಬದ ಸಂಭ್ರಮ ಮಂಗಳವಾರದAದು ಜಿಲ್ಲೆಯಲ್ಲಿ ನಡೆಯಿತು. ಪ್ರಸಕ್ತ ವರ್ಷ ಮಳೆ - ಬಿಸಿಲಿನ ವಾತಾವರಣದ ನಡುವೆ ಈ ಹಬ್ಬಾಚರಣೆ ಜರುಗಿತು. ಕೊಡಗಿನ ಆಯಧ ಪೂಜೆ ಎಂದೇ ಪರಿಗಣಿಸಲ್ಪಟ್ಟಿರುವ ಹಬ್ಬ ಇದಾಗಿದೆ.

ಐತಿಹಾಸಿಕ ಹಿನ್ನೆಲೆಯೊಂದಿಗೆ ಕೋವಿ-ಕತ್ತಿ ಸೇರಿದಂತೆ ಕೃಷಿ ಪರಿಕರಗಳಿಗೆ ಪೂಜೆ. ನಂತರದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ - ವಿವಿಧ ಕ್ರೀಡಾಕೂಟಗಳ ಸಂಭ್ರಮದೊAದಿಗೆ ಜನರು ಹಬ್ಬದ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮ ಒಂದೆಡೆಯಾದರೆ ಕೆಲವು ಕಡೆಗಳಲ್ಲಿ ಸಮಾಜ - ಸಂಘ - ಸಂಸ್ಥೆಗಳಲ್ಲಿ ಸಾರ್ವತ್ರಿಕವಾಗಿ ಕಾರ್ಯಕ್ರಮ ಜರುಗಿದವು. ಸಂಪ್ರದಾಯ ಬದ್ದವಾದ ಆಚರಣೆಯ ಪಾಲನೆಯೊಂದಿಗೆ ವಿಶೇಷ ಖಾದ್ಯವಾದ ಕಡ್‌ಂಬುಟ್ಟ್-ಪAದಿಕರಿಯ ಭೋಜನದ ವಿಶೇಷತೆಯೂ ‘ಕೈಲ್‌ಪೊಳ್ದ್’ ಒಂದಷ್ಟು ಮುದ ನೀಡಿತ್ತು.

ಪೊನ್ನಂಪೇಟೆ, ಮೂರ್ನಾಡು, ಕಾಕೋಟುಪರಂಬು ಬಲಂಬೇರಿ, ಕಬ್ಬಡಕೇರಿ, ಮರಗೋಡು ಸೇರಿದಂತೆ ಹಲವೆಡೆಗಳಲ್ಲಿ ಸಾರ್ವತ್ರಿಕ ಆಚರಣೆಯೊಂದಿಗೆ, ತೆಂಗಿನಕಾಯಿಗೆ ಗುಂಡು ಹೊಡೆಯುವುದು ಮತ್ತಿತರ ಕ್ರೀಡಾ ಸ್ಪರ್ಧೆಗಳು ಜರುಗಿದವು.

ಸಭಾ ಕಾರ್ಯಕ್ರಮ, ಸನ್ಮಾನದಂತಹ ಕಾರ್ಯಕ್ರಮಗಳೂ ವಿವಿಧಡೆ ಜರುಗಿತು.

ಪೊನ್ನಂಪೇಟೆ ಕೊಡವ ಸಮಾಜದಿಂದ ವಾಹನಪೂಜೆ ಹಾಗೂ ಮೆರವಣಿಗೆ ವಿಶೇಷವಾಗಿತ್ತು. ಮೂರ್ನಾಡಿನಲ್ಲಿ ಸ್ಥಳೀಯ ಸ್ಪೋರ್ಟ್ಸ್ ಕ್ಲಬ್‌ನಿಂದ ೧೦೦ನೇ ವರ್ಷದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿನ ಸಂಭ್ರಮಾಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಐಶ್ವರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಮತ್ತಿತರರು ಭಾಗಿಗಳಾಗಿದ್ದಾರು. ಜಿಲ್ಲೆಯ ಐದೂ ತಾಲೂಕಿನ ಹಲವೆÀಡೆಗಳಲ್ಲಿ ಮಳೆ - ಬಿಸಿಲಿನ ವಾತಾವರಣದ ನಡುವೆಯೂ ಹಬ್ಬದ ಸಂಭ್ರಮದಲ್ಲಿ ಜನರು ಭಾಗಿಗಳಾಗಿದ್ದರು. ಮುಂದಿನ ಕೆಲವು ದಿನಗಳ ಕಾಲ ವಿವಿಧ ಸಮಾಜಗಳು ಸಂಘ-ಸAಸ್ಥೆಗಳಲ್ಲಿ ಹಬ್ಬದ ಹಿನ್ನೆಲೆ ವಿವಿಧ ರೀತಿ ಕಾರ್ಯಕ್ರಮಗಳು ಜರುಗಲಿವೆ.

ಅಲ್ಲಲ್ಲಿ ಕಾರ್ಯಕ್ರಮಗಳು - ಪೊನ್ನಂಪೇಟೆಯಲ್ಲಿ ವಿಶೇಷತೆ - ವಾಹನ ಪೂಜೆ

ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ವಿಶೇಷವಾಗಿ ಕಾರ್ಯಕ್ರಮ ಆಚರಿಸಲ್ಪಟ್ಟಿತು. ಸ್ಥಳೀಯ ಕೊಡವ ಸಮಾಜ ಹಾಗೂ ಕೊಡವ ಹಿತರಕ್ಷಣಾ ಬಳಗ ಕ್‌ಗ್ಗಟ್‌ನಾಡ್ ಪೊನ್ನಂಪೇಟೆ ಇವರ ವತಿಯಿಂದ ಕೋವಿ-ಕತ್ತಿ, ಕೃಷಿ ಪರಿಕರಗಳ ಪೂಜೆಯೊಂದಿಗೆ ವಾಹನ ಪೂಜೆ. ವಾಹನಗಳ ಮೆರವಣಿಗೆಯೂ ಇಲ್ಲಿ ವಿಶೇಷವಾಗಿತ್ತು.

ಶ್ರೀಮಂಗಲ : ಕೊಡವ ಹಿತರಕ್ಷಣಾ ಬಳಗ ಕ್‌ಗ್ಗಟ್ಟ್ ನಾಡ್, ಪೊನ್ನಂಪೇಟೆ ಹಾಗೂ ಪೊನ್ನಂಪೇಟೆ ಕೊಡವ ಸಮಾಜ ಆಶ್ರಯದಲ್ಲಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೈಲ್ ಪೊಳ್ದ್ ಹಬ್ಬವನ್ನು ಸಾಂಪ್ರದಾಯಿಕವಾಗಿ ಕೃಷಿ ಪರಿಕರ, ಕೋವಿ, ವಾಹನಗಳಿಗೆ ಪೂಜೆ ಸಲ್ಲಿಸಿ ಆಚರಿಸಲಾಯಿತು.

ಪದ್ಧತಿಯಂತೆ ಕೃಷಿ ಪರಿಕರಗಳಾದ ನೇಗಿಲು, ನೊಗಗಳಿಗೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಕೊಡವ ಹಿತರಕ್ಷಣಾ ಬಳಗದ ಉಪಾಧ್ಯಕ್ಷ ಚೆಕ್ಕೇರ ರಮೇಶ್ ಅವರು ಕೊಡವ ಪದ್ಧತಿಯ ಕುಪ್ಯ ಚೇಲೆ ಧರಿಸಿ ಪೂಜೆ ಸಲ್ಲಿಸಿದರು.

ಕೋವಿ, ಕತ್ತಿಗಳಿಗೆ ಆಯುಧ ಪೂಜೆ ಮಾಡಿ "ಕಾರೋಣ"ಗೆ ಹಾಗೂ ಬೇಟೆಯಲ್ಲಿ ಜೊತೆ ಸಾಗುವ ಶ್ವಾನಗಳಿಗೆ ಪದ್ಧತಿಯಂತೆ ಪ್ರತ್ಯೇಕವಾಗಿ ಎಡೆ ಇಡಲಾಯಿತು.

ವಾಹನಗಳಿಗೆ ಸಾಮೂಹಿಕವಾಗಿ ಹೂವಿನ ಮಾಲೆಯಲ್ಲಿ ಅಲಂಕರಿಸಿ, ಆಯುಧ ಪೂಜೆ ಸಲ್ಲಿಸಿ ಆರತಿ ಬೆಳಗಿ ಪೂಜೆ ಸಲ್ಲಿಸಲಾಯಿತು.

ನಂತರ ಕೋವಿಗಳನ್ನು ಹಿರಿಯರಿಂದ ಕಿರಿಯರಿಗೆ ಹಸ್ತಾಂತರಿಸಿ "ಹುಲಿ -ಹಂದಿ ಬರುವ ದಾರಿಯಿಂದ ಸರಿದು ಬೇಟೆಯಾಡು, ಶತ್ರುವನ್ನು ಕೆಣಕಬೇಡ, ಶತ್ರುವಿನೊಂದಿಗೆ ದಾರಿ ಎದುರು ನಿಂತು ಹೋರಾಡು, ಮಿತ್ರನಿಗೆ ಮಿತ್ರನ್ನಾಗಿ ಇರು, ದೇವರನ್ನು ಮರೆಯಬೇಡ" ಎಂದು ಕೊಡವ ಭಾಷೆಯಲ್ಲಿ ಮಾತನಾಡಿ ಕೋವಿ ಹಸ್ತಾಂತರಿಸಲಾಯಿತು. ಕೋವಿ ಹಸ್ತಾಂತರಿಸಿದ ನಂತರ ಸಾಮೂಹಿಕವಾಗಿ ಆಕಾಶಕ್ಕೆ ಗುಂಡು ಹಾರಿಸಲಾಯಿತು.

ವಾಹನಗಳಿಗೆ ಸಾಮೂಹಿಕ ಆಯುಧ ಪೂಜೆ ಸಲ್ಲಿಸಿ, ಪೊನ್ನಂಪೇಟೆ ಪಟ್ಟಣದ ಮುಖ್ಯರಸ್ತೆಯಲ್ಲಿ ವಾಹನಗಳ ಮೆರವಣಿಗೆ ನಡೆಯಿತು. ಹಬ್ಬದ ವಿಶೇಷ ಉಟೋಪಚಾರದಲ್ಲಿ ಸಾಮೂಹಿಕವಾಗಿ ಎಲ್ಲರೂ ಭಾಗವಹಿಸಿದ್ದರು.

ಈ ಸಂದರ್ಭ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ, ಉಪಾಧ್ಯಕ್ಷ ಚೆಕ್ಕೇರ ರಮೇಶ್, ಕಾರ್ಯದರ್ಶಿ ಗಾಂಡAಗಡ ಕೌಶಿಕ್ ದೇವಯ್ಯ, ಖಜಾಂಚಿ ಕೋಟೆರ ಕಿಶನ್ ಉತ್ತಪ್ಪ, ನಿರ್ದೇಶಕರಾದ ಅಡ್ಡಂಡ ಡಾಲಿ ಜನಾರ್ಧನ, ಉಳುವಂಗಡ ಲೋಹಿತ್ ಭೀಮಯ್ಯ, ಪುಳ್ಳಂಗಡ ಪವನ್, ಕಳ್ಳಿಚಂಡ ಚಿಪ್ಪ ದೇವಯ್ಯ, ಅಜ್ಜಿಕುಟ್ಟಿರ ಶುಭಾ, ಅಜ್ಜಿಕುಟ್ಟಿರ ರಂಜಿ, ಚೇಯಂಡ ಶಮ್ಮಿ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಖಜಾಂಚಿ ಆಲೆಮಾಡ ಸುಧೀರ್, ನಿರ್ದೇಶಕ ಚೆಪ್ಪುಡೀರ ರಾಕೇಶ್ ದೇವಯ್ಯ, ಅಡ್ಡಂಡ ಸುನಿಲ್ ಸೋಮಯ್ಯ ಸೇರಿದಂತೆ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಇಟ್ಟೀರ ಬಿದ್ದಪ್ಪ, ಕಮಲಾಕ್ಷಿ ಬಿದ್ದಪ್ಪ ಹಾಜರಿದ್ದರು.

ನಾಪೋಕ್ಲು: ನಾಪೋಕ್ಲು ಸುತ್ತಮುತ್ತಲ ಗ್ರಾಮಗಳಲ್ಲಿ ಕೈಲ್‌ಪೊಳ್ದ್ ನಮ್ಮೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

ಹಬ್ಬದ ಪ್ರಯುಕ್ತ ನೆಲ್ಲಕ್ಕಿ ನಡುಬಾಡೆಯಲ್ಲಿ ಕೋವಿ, ಒಡಿಕತ್ತಿ, ಗೆಜ್ಜೆ ತಂಡ್ ಇಟ್ಟು ತೋಕ್ ಪೂ ಹಾಗೂ ಇತರ ಹೂವುಗಳಿಂದ ಶೃಂಗರಿಸಿ ಮೀದಿ ಇಟ್ಟು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಎಲ್ಲರಿಗೂ ಆಯುರಾರೋಗ್ಯ ಭಾಗ್ಯ ದೊರಕಲಿ ಎಂದು ಪ್ರಾರ್ಥಿಸಲಾಯಿತು. ಹಬ್ಬದ ವಿಶೇಷ ಭೋಜನದ ನಂತರ ಹಿರಿಯರು,ಕಿರಿಯರು, ಮಹಿಳೆಯರು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ವಿವಿಧ ಕ್ರೀಡಾಕೂಟಗಳು ಜರುಗಿ ಹಬ್ಬಕ್ಕೆ ತೆರೆ ಎಳೆಯಲಾಯಿತು.

ಇದೇ ತರ ನಾಪೋಕ್ಲು ಸುತ್ತಮುತ್ತಲ ಗ್ರಾಮಗಳಾದ ನೆಲಜಿ ಪುಲಿಕೋಟ್, ಪೇರೂರು, ಕೈಕಾಡು, ಪಾರಾಣೆ, ಬೆಟ್ಟಗೇರಿ, ಪಾಲೂರು, ಕಾರುಗುಂದ, ಹೆರವನಾಡು ಅವಂದೂರು, ಹೊದ್ದೂರು, ಬಲಮುರಿ ಸೇರಿದಂತೆ ಇನ್ನಿತರ ಕಡೆಗಳಲ್ಲಿಯೂ ಸಡಗರ ಸಂಭ್ರಮದಿAದ ಹಬ್ಬ ಆಚರಿಸಿಲ್ಪಟ್ಟಿತು.

ಪೊನ್ನಂಪೇಟೆ, ಸೆ. ೪: ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಪೂಳೆಮಾಡು ಈಶ್ವರ ದೇವಸ್ಥಾನದಲ್ಲಿ, ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಕೈಲ್ ಪೊಳ್ದ್ ಹಬ್ಬದ ಪ್ರಯುಕ್ತ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ನಡೆಸಲಾಯಿತು.

ನಾಡು ತಕ್ಕರಾದ ಬೈರಂಡ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ದೇವರನ್ನು ಪ್ರಾರ್ಥಿಸಿ, ಕೋವಿ ಹಾಗೂ ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸಲಾಯಿತು.

ನಂತರ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಸಲಾಯಿತು.ಪೊನ್ನಂಪೇಟೆ, ಸೆ. ೪: ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಪೂಳೆಮಾಡು ಈಶ್ವರ ದೇವಸ್ಥಾನದಲ್ಲಿ, ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಕೈಲ್ ಪೊಳ್ದ್ ಹಬ್ಬದ ಪ್ರಯುಕ್ತ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ನಡೆಸಲಾಯಿತು.

ನಾಡು ತಕ್ಕರಾದ ಬೈರಂಡ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ದೇವರನ್ನು ಪ್ರಾರ್ಥಿಸಿ, ಕೋವಿ ಹಾಗೂ ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸಲಾಯಿತು.

ನಂತರ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಸಲಾಯಿತು.

ಸ್ಪರ್ಧೆಯಲ್ಲಿ ಮತ್ರಂಡ ಕಿಶು ಮಾಚಯ್ಯ ಪ್ರಥಮ, ಮತ್ರಂಡ ವಿಶು ತಮ್ಮಯ್ಯ ದ್ವಿತೀಯ, ಮತ್ರಂಡ ಶಿವಿನ್ ಚಂಗಪ್ಪ ತೃತೀಯ ಹಾಗೂ ಮತ್ರಂಡ ಮೊಣ್ಣಪ್ಪ ರವಿ ಸಮಾಧಾನಕರ ಬಹುಮಾನ ಪಡೆದುಕೊಂಡರು.

ಸತತ ಎರಡನೇ ಬಾರಿ ರೋಲಿಂಗ್ ಟ್ರೋಫಿಯನ್ನು ಮತ್ರಂಡ ಕಿಶು ಮಾಚಯ್ಯ ಅವರು ತಮ್ಮದಾಗಿಸಿಕೊಂಡರು. ಸ್ಪರ್ಧೆಯಲ್ಲಿ ಊರಿನವರು , ನೆರೆ ಊರಿನವರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿಯವರು ಹಾಜರಿದ್ದರು.

ನಾಪೋಕ್ಲು: ಸಮೀಪದ ಬಲಮುರಿ ಗ್ರಾಮದ ಮಹದೇವ ಕ್ರೀಡಾ ಮಂಡಳಿ ವತಿಯಿಂದ ಬಲಮುರಿ ಹೊಳೆಮುಡಿ ಮೈದಾನದಲ್ಲಿ ೭೨ ನೇ ವರ್ಷದ ಕೈಲ್ ಮುಹೂರ್ತ ಕ್ರೀಡಾಕೂಟದ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಿದವು. ಭಾರದ ಗುಂಡು ಎಸೆಯುವುದು, ಗೋಣಿಚೀಲ ಓಟ, ಮೂರು ಕಾಲಿನ ಓಟ, ಸ್ಲೋ ಸೈಕಲ್ ರೇಸ್, ನಿಂಬೆ ಚಮಚ ಓಟ, ಹಗ್ಗ ಜಗ್ಗಾಟ... ಹೀಗೆ ವೈವಿಧ್ಯಮಯ ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ಜರುಗಿದವು.

ಸಮಾರಂಭದ ಅಧ್ಯಕ್ಷತೆಯನ್ನು ಕೊಣಂಜಗೇರಿ ಗ್ರಾಮ ಪಂಚಾಯಿತಿ ಸದಸ್ಯ ಬೊಳ್ಳಚೆಟ್ಟಿರ ಪ್ರಕಾಶ್ ಕಾಳಪ್ಪ ವಹಿಸಿದ್ದರು. ಅತಿಥಿಗಳಾಗಿ ಮಹಾದೇವ ಕ್ರೀಡಾ ಮಂಡಳಿ ಅಧ್ಯಕ್ಷ ತೊತ್ತಿಯಂಡ ಬನ್ಸಿ ಚಿಣ್ಣಪ್ಪ, ನಿವೃತ್ತ ವಿಜ್ಞಾನಿ ನಾಡಂಡ ಎ. ಪ್ರಿನ್ಸ್ ತಿಮ್ಮಯ್ಯ, ನಿವೃತ್ತ ನಾಯಕ್ ಸುಬೇದಾರ್ ಪೊನ್ನಚ್ಚನ ದಯಾನಂದ, ನಿವೃತ್ತ ಸುಬೇದಾರ್ ಬೊಳ್ಳಚೆಟ್ಟಿರ ವಿಜಯ ಚೆಟ್ಟಿಚ್ಚ ಇನ್ನಿತರರು ಪಾಲ್ಗೊಂಡಿದ್ದರು. ಈ ಸಂದರ್ಭ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ವೇದಿಕೆಯಲ್ಲಿ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು. ಪೊನ್ನಂಪೇಟೆ : ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ತೋಣಕೇರಿ ಭಗವತಿ ಅಂಬಲದಲ್ಲಿ ಕೈಲ್ ಪೊಳ್ದ್ ಹಬ್ಬವನ್ನು ಸಾಮೂಹಿಕ ವಾಗಿ, ಸಾಂಪ್ರದಾಯಕವಾಗಿ ಆಚರಿಸಲಾಯಿತು. ಗ್ರಾಮಸ್ಥರು ಕೃಷಿ ಪರಿಕರಗಳಿಗೆ ಹಾಗೂ ಶಸ್ತಾçಸ್ತçಗಳಿಗೆ ಪೂಜೆ ಸಲ್ಲಿಸಿದರು. ನಂತರ ಅರಳಿ ಕಟ್ಟೆಯ ಸುತ್ತ ಪ್ರದಕ್ಷಿಣೆ ಹಾಕುತ್ತಾ ಮುಹೂರ್ತದ ಹಾಡನ್ನು ಹಾಡಿ ದೇವರನ್ನು ಸ್ತುತಿಸಿದರು. ಈ ಸಂದರ್ಭ ಗ್ರಾಮಸ್ಥರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಗ್ರಾಮದ ಹಿರಿಯರು, ಕಿರಿಯರು, ಮಹಿಳೆಯರು, ತಮ್ಮ ಗುರಿ ಪ್ರದರ್ಶನ ಮಾಡುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಜೊತೆಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿಷದ ಚೆಂಡು ಸ್ಪರ್ಧೆ, ಗ್ರಾಮಸ್ಥರಿಗೆ ಕೊಡವ ವಾಲಗತ್ತಾಟ್ ಸ್ಪರ್ಧೆ ಏರ್ಪಡಿಸಲಾಗಿತ್ತು.

ಊರಿನ ದೇವಸ್ಥಾನ ಸಮಿತಿ ಅಧ್ಯಕ್ಷ ಚೀರಂಡ ಗಣಪತಿ ಆಯುಧಗಳಿಗೆ ಪೂಜೆ ಸಲ್ಲಿಸಿ, ಗ್ರಾಮದ ಒಳಿತಿಗಾಗಿ ಪ್ರಾರ್ಥಿಸಿದರು.

ಊರಿನ ತಕ್ಕ ಮುಖ್ಯಸ್ಥರಾದ ಮಲಚೀರ ಬೋಜಪ್ಪನವರು ಗಾಳಿಯಲ್ಲಿ ಗುಂಡು ಹಾರಿಸುವುದರ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು

ದೇವಸ್ಥಾನ ಸಮಿತಿಯ ಖಜಾಂಚಿ ಚೀರಂಡ ಕಂದ ಸುಬ್ಬಯ್ಯ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗ್ರಾಮಸ್ಥರು ಒಂದೆಡೆ ಸೇರಿ ಹಬ್ಬ ಆಚರಿಸುತ್ತಿದ್ದೇವೆ. ಕೈಲ್ ಪೋಳ್ದ್ ಹಬ್ಬ ಕೃಷಿ ಚಟುವಟಿಕೆಗಳನ್ನು ಮುಗಿಸಿ ದಣಿದ ದೇಹಕ್ಕೆ ಹಾಗೂ ಮನಸಿಗೆ ಖುಷಿ ಕೊಡುವ ಹಬ್ಬವಾಗಿದ್ದು, ಆಯುಧಗಳಿಗೆ ಪೂಜೆ ಸಲ್ಲಿಸಿ ಗ್ರಾಮಸ್ಥರು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ವಿಶಿಷ್ಟ ಆಚಾರ ವಿಚಾರ ಪದ್ಧತಿ ಪರಂಪರೆಯನ್ನು ಒಳಗೊಂಡಿರುವ ಕೊಡವ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವ ಜನತೆಯ ಮೇಲಿದೆ ಎಂದರು.

ಸ್ಪರ್ಧೆಯ ಫಲಿತಾಂಶ : ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕೋಟೆರ ಸಂಜು ಸುಬ್ಬಯ್ಯ ಪ್ರಥಮ, ಮುದ್ದಿಯಡ ಕಿರಣ್ ಜೋಯಪ್ಪ ದ್ವಿತೀಯ, ಮುದ್ದಿಯಡ ಮುದ್ದಪ್ಪ ತೃತೀಯ ಬಹುಮಾನ ಪಡೆದುಕೊಂಡರು. ಮಕ್ಕಳ ವಿಭಾಗದಲ್ಲಿ ಗಾಂಡAಗಡ ಯಾದೇನ್ ಬಹುಮಾನ ಪಡೆದುಕೊಂಡರು.

ಮಹಿಳೆಯರ ವಿಷದ ಚೆಂಡು ಸ್ಪರ್ಧೆಯಲ್ಲಿ ಮುಕ್ಕಾಟಿರ ಹರ್ಷಿತ ಪ್ರಥಮ, ಆಲೆಮಾಡ ಧನ್ಯ ದ್ವಿತೀಯ, ಸೌಮ್ಯ ತೃತೀಯ, ಬಾಲಕಿಯರ ವಿಭಾಗದಲ್ಲಿ ಚೀರಂಡ ಕ್ಷಿಪ್ರ ಪ್ರಥಮ, ಆಲೆಮಾಡ ತ್ರಿಷಾ ದ್ವಿತೀಯ, ಕರಿನೆರವಂಡ ರಕ್ಷಿತ ತೃತೀಯ, ಮಕ್ಕಳ ವಿಭಾಗದಲ್ಲಿ ಮುದ್ದಿಯಡ ದಿಯಾ ಪ್ರಥಮ, ಮುಕ್ಕಾಟಿರ ಅನೀಶ್ ದ್ವಿತೀಯ, ಚೀರಂಡ ವಿಯಾನ್ ತೃತೀಯ ಬಹುಮಾನ ಪಡೆದುಕೊಂಡರು.

ವಾಲಗತ್ತಾಟ್ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಮಲ್ಚೀರ ಅಮಿತ ಪ್ರಥಮ, ಚೀರಂಡ ಚೈತ್ರ ದ್ವಿತೀಯ, ಪುರುಷರ ವಿಭಾಗದಲ್ಲಿ ಮುದ್ದಿಯಡ ಪ್ರಕಾಶ್ ಪ್ರಥಮ, ಮುದ್ದಿಯಡ ಕಿರಣ್ ಜೋಯಪ್ಪ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಮಲ್ಚೀರ ಸಿರಿ, ನಾಮೇರ ದೃಶ್ಯ ದ್ವಿತೀಯ, ಬಾಲಕರ ವಿಭಾಗದಲ್ಲಿ ಗಾಂಡAಗಡ ಭುವನ್ ಪ್ರಥಮ, ಆಲೆಮಾಡ ರಿಷಿ ದ್ವಿತೀಯ, ಪುಟ್ಟ ಮಕ್ಕಳ ವಿಭಾಗದಲ್ಲಿ ಕೋಟೆರ ಜಾಗೃತಿ ಪ್ರಥಮ, ಚೀರಂಡ ಸಾನ್ವಿ ದ್ವಿತೀಯ, ಕಾಳಿಮಾಡ ಸಾತ್ವಿಕ್ ತೃತೀಯ ಬಹುಮಾನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಮುಗುಟಗೇರಿಯ ಮರಣ ನಿಧಿ ಅಧ್ಯಕ್ಷ ಆಲೆಮಾಡ ನವೀನ್, ಕಾರ್ಯದರ್ಶಿ ಮಲ್ಚೀರ ಲೋಕೇಶ್, ದೇವಸ್ಥಾನ ಸಮಿತಿ ಕಾರ್ಯದರ್ಶಿ ಮುದ್ದಿಯಡ ನಿತಿನ್, ಗ್ರಾಮಸ್ಥರಾದ ಮುದ್ದಿಯಡ ಮಂಜು ಗಣಪತಿ, ಚೀರಂಡ ಚಂಗಪ್ಪ, ಆಲೆಮಾಡ ರೋಷನ್, ಮುದ್ದಿಯಡ ಜೋಯಪ್ಪ,

ಕರ್ನಲ್ ಆಲೆಮಾಡ ಕರುಂಬಯ್ಯ, ಮುದ್ದಿಯಡ ಪ್ರಕಾಶ್, ಮುದ್ದಿಯಡ ಸುರೇಶ್ ಮಲ್ಚೀರ ಕುಶಾಲಪ್ಪ, ಮುದ್ದಿಯಡ ಗಣೇಶ್, ಚೀರಂಡ ಭೀಮಯ್ಯ, ಕೋಟೆರ ಕವೀನ, ಮಲಚೀರ ಹರ್ಷ, ಚೀರಂಡ ಶಿವಾಜಿ, ಮಲಚೀರ ಬೋಪಣ್ಣ, ಮಲಚೀರ ತಶ್ವಿನ್, ಮಲಚೀರ ಪೊನ್ನಣ್ಣ, ಕೋಟೆರ ಶರಣು, ಮಲಚೀರ ಪವನ್, ಕಳ್ಳಿಚಂಡ ಅಶೋಕ್, ಚೀರಂಡ ದಿನು, ಚೀರಂಡ ದೀಪು, ಚೀರಂಡ ಮುತ್ತಪ್ಪ ಮತ್ತಿತರರು ಇದ್ದರು. ಮಹಿಳೆಯರು, ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆ ಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

- ಹರೀಶ್ ಮಾದಪ್ಪ,

ದುಗ್ಗಳ, ಚನ್ನನಾಯಕ ಮಡಿಕೇರಿ : "ಕೈಲ್ ಪೊಳ್ದ್" ಹಬ್ಬದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬುವಿನಲ್ಲಿ ಹಿರಿಯರಿಗೆ ಮೀದಿ ಇಟ್ಟು ತೋಕ್ ಪೂ ಮೂಲಕ ನಮನ ಸಲ್ಲಿಸಿತು.

ಹತ್ಯೆಗೀಡಾದ ಹಿರಿಯರಿಗೆ ನರಮೇಧದ ಸ್ಮಾರಕ ಸ್ಥಳದಲ್ಲಿ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ಪ್ರಮುಖರು ಪುಷ್ಪ ನಮನ ಸಲ್ಲಿಸಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯನ್ನು ಸಾಧಿಸಲು ಶಕ್ತಿಯನ್ನು ನೀಡುವಂತೆ ಪ್ರಾರ್ಥಿಸಿದರು.

ಕೊಡವರ ಹಿತಕಾಯಲು ಕಳೆದ ಅನೇಕ ವರ್ಷಗಳಿಂದ ಸಿಎನ್‌ಸಿ ಸಂಘಟನೆ ಹೋರಾಟ ನಡೆಸುತ್ತಾ ಬಂದಿದೆ. ಈ ಹಕ್ಕುಗಳು ಶೀಘ್ರ ಈಡೇರುತ್ತದೆ ಎನ್ನುವ ವಿಶ್ವಾಸದೊಂದಿಗೆ ಸ್ಮಾರಕ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ಎನ್.ಯು. ನಾಚಪ್ಪ ತಿಳಿಸಿದರು.

ಈ ಸಂದರ್ಭ ಕಲಿಯಂಡ ಮೀನಾ, ಕಲಿಯಂಡ ಪ್ರಕಾಶ್, ಅಳಮಂಡ ಜೈ, ಪಟ್ಟಮಾಡ ಕುಶ, ಮಂದಪAಡ ಮನೋಜ್, ಮಂದಪAಡ ಸೂರಜ್, ಚೀಯಬೆರ ಸತೀಶ್, ಪಟ್ಟಮಾಡ ಅಶೋಕ್, ಪಟ್ಟಮಾಡ ಮೋಹಿತ್ ಮುತ್ತಣ್ಣ, ಕಲಿಯಂಡ ಶಾನ್ ಸುಬ್ಬಯ್ಯ ಅವರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಶಾಲಾ ಮಕ್ಕಳ ಕೈಲ್ ಪೊಳ್ದ್ ಸಂಭ್ರಮಾಚರಣೆ

ಚೆಟ್ಟಳ್ಳಿ: ಕೊಡಗಿನಲ್ಲಿ ಜನತೆ ಕೈಲ್ ಪೊಳ್ದ್ ಸಂಭ್ರಮಾಚರಣೆಯಲ್ಲಿ ತೊಡಗಿದರೆ ಬಿಟ್ಟಂಗಾಲದ ದೇವಯ್ಯ ಮೆಮೋರಿಯಲ್ ಪ್ರಿಪರೇಟರಿ ಶಾಲಾ ಮಕ್ಕಳೆಲ್ಲಾ ಒಟ್ಟಾಗಿ ಸೇರಿ ಕೈಲ್‌ಪೊಳ್ದ್ ಆಚರಣೆ ಮಾಡುವ ಮೂಲಕ ವಿದ್ಯಾದೇಗುಲದಲ್ಲಿ ಸಂಸ್ಕೃತಿಯ ಅನಾವರಣಕ್ಕೆ ಸಾಕ್ಷಿ ಯಾಗಿದ್ದಾರೆ. ಕೊಡಗಿನ ಸಾಂಪ್ರದಾಯಿಕ ಹಬ್ಬವಾದ ಪುತ್ತರಿ ನಮ್ಮೆಯ ಆಚರಣೆ, ನಾಟಿಕೆಲಸ ಹಾಗೂ ವಿವಿಧ ಸಾಂಪ್ರದಾಯಿಕ ಆಚರಣೆಗಳನ್ನು ಮಕ್ಕಳೊಂದಿಗೆ ಶಿಕ್ಷಕರು ಆಚರಿಸಿದರು. ಈ ಬಾರಿ ಹಬ್ಬಕ್ಕೆ ಮುಂಚಿತವಾಗಿ ಮಕ್ಕಳೇ ಕಡಂಬಿಟ್ಟು ತಯಾರಿಸಿದರು. ಕೈಲ್‌ಪೊಳ್ದ್ ಹಬ್ಬದ ದಿನ ಕೋವಿ, ಕತ್ತಿ ಆಯುಧಗಳಿಗೆ ಅಲಂಕರಿಸಿ ಮಕ್ಕಳೆಲ್ಲಾ ಸೇರಿ ಆಯುಧ ಪೂಜೆ ಸಲ್ಲಿಸಿದರು. ನಂತರ ಮಕ್ಕಳೆಲ್ಲಾ ಒಟ್ಟಾಗಿ ಕುಳಿತು ಹಬ್ಬದ ವಿಶೇಷ ಭೋಜನವನ್ನು ಸವಿದದ್ದು ವಿಶೇಷವಾಗಿತ್ತು. -ಕರುಣ್ ಕಾಳಯ್ಯ

ಪೊನ್ನಂಪೇಟೆ : ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ತೋಣಕೇರಿ ಭಗವತಿ ಅಂಬಲದಲ್ಲಿ ಕೈಲ್ ಪೊಳ್ದ್ ಹಬ್ಬವನ್ನು ಸಾಮೂಹಿಕ ವಾಗಿ, ಸಾಂಪ್ರದಾಯಕವಾಗಿ ಆಚರಿಸಲಾಯಿತು. ಗ್ರಾಮಸ್ಥರು ಕೃಷಿ ಪರಿಕರಗಳಿಗೆ ಹಾಗೂ ಶಸ್ತಾçಸ್ತçಗಳಿಗೆ ಪೂಜೆ ಸಲ್ಲಿಸಿದರು. ನಂತರ ಅರಳಿ ಕಟ್ಟೆಯ ಸುತ್ತ ಪ್ರದಕ್ಷಿಣೆ ಹಾಕುತ್ತಾ ಮುಹೂರ್ತದ ಹಾಡನ್ನು ಹಾಡಿ ದೇವರನ್ನು ಸ್ತುತಿಸಿದರು. ಈ ಸಂದರ್ಭ ಗ್ರಾಮಸ್ಥರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಗ್ರಾಮದ ಹಿರಿಯರು, ಕಿರಿಯರು, ಮಹಿಳೆಯರು, ತಮ್ಮ ಗುರಿ ಪ್ರದರ್ಶನ ಮಾಡುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಜೊತೆಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿಷದ ಚೆಂಡು ಸ್ಪರ್ಧೆ, ಗ್ರಾಮಸ್ಥರಿಗೆ ಕೊಡವ ವಾಲಗತ್ತಾಟ್ ಸ್ಪರ್ಧೆ ಏರ್ಪಡಿಸಲಾಗಿತ್ತು.

ಊರಿನ ದೇವಸ್ಥಾನ ಸಮಿತಿ ಅಧ್ಯಕ್ಷ ಚೀರಂಡ ಗಣಪತಿ ಆಯುಧಗಳಿಗೆ ಪೂಜೆ ಸಲ್ಲಿಸಿ, ಪೊನ್ನಂಪೇಟೆ : ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ತೋಣಕೇರಿ ಭಗವತಿ ಅಂಬಲದಲ್ಲಿ ಕೈಲ್ ಪೊಳ್ದ್ ಹಬ್ಬವನ್ನು ಸಾಮೂಹಿಕ ವಾಗಿ, ಸಾಂಪ್ರದಾಯಕವಾಗಿ ಆಚರಿಸಲಾಯಿತು. ಗ್ರಾಮಸ್ಥರು ಕೃಷಿ ಪರಿಕರಗಳಿಗೆ ಹಾಗೂ ಶಸ್ತಾçಸ್ತçಗಳಿಗೆ ಪೂಜೆ ಸಲ್ಲಿಸಿದರು. ನಂತರ ಅರಳಿ ಕಟ್ಟೆಯ ಸುತ್ತ ಪ್ರದಕ್ಷಿಣೆ ಹಾಕುತ್ತಾ ಮುಹೂರ್ತದ ಹಾಡನ್ನು ಹಾಡಿ ದೇವರನ್ನು ಸ್ತುತಿಸಿದರು. ಈ ಸಂದರ್ಭ ಗ್ರಾಮಸ್ಥರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಗ್ರಾಮದ ಹಿರಿಯರು, ಕಿರಿಯರು, ಮಹಿಳೆಯರು, ತಮ್ಮ ಗುರಿ ಪ್ರದರ್ಶನ ಮಾಡುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಜೊತೆಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿಷದ ಚೆಂಡು ಸ್ಪರ್ಧೆ, ಗ್ರಾಮಸ್ಥರಿಗೆ ಕೊಡವ ವಾಲಗತ್ತಾಟ್ ಸ್ಪರ್ಧೆ ಏರ್ಪಡಿಸಲಾಗಿತ್ತು.

ಊರಿನ ದೇವಸ್ಥಾನ ಸಮಿತಿ ಅಧ್ಯಕ್ಷ ಚೀರಂಡ ಗಣಪತಿ ಆಯುಧಗಳಿಗೆ ಪೂಜೆ ಸಲ್ಲಿಸಿ, ಗ್ರಾಮದ ಒಳಿತಿಗಾಗಿ ಪ್ರಾರ್ಥಿಸಿದರು.

ಊರಿನ ತಕ್ಕ ಮುಖ್ಯಸ್ಥರಾದ ಮಲಚೀರ ಬೋಜಪ್ಪನವರು ಗಾಳಿಯಲ್ಲಿ ಗುಂಡು ಹಾರಿಸುವುದರ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು

ದೇವಸ್ಥಾನ ಸಮಿತಿಯ ಖಜಾಂಚಿ ಚೀರಂಡ ಕಂದ ಸುಬ್ಬಯ್ಯ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗ್ರಾಮಸ್ಥರು ಒಂದೆಡೆ ಸೇರಿ ಹಬ್ಬ ಆಚರಿಸುತ್ತಿದ್ದೇವೆ. ಕೈಲ್ ಪೋಳ್ದ್ ಹಬ್ಬ ಕೃಷಿ ಚಟುವಟಿಕೆಗಳನ್ನು ಮುಗಿಸಿ ದಣಿದ ದೇಹಕ್ಕೆ ಹಾಗೂ ಮನಸಿಗೆ ಖುಷಿ ಕೊಡುವ ಹಬ್ಬವಾಗಿದ್ದು, ಆಯುಧಗಳಿಗೆ ಪೂಜೆ ಸಲ್ಲಿಸಿ ಗ್ರಾಮಸ್ಥರು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ವಿಶಿಷ್ಟ ಆಚಾರ ವಿಚಾರ ಪದ್ಧತಿ ಪರಂಪರೆಯನ್ನು ಒಳಗೊಂಡಿರುವ ಕೊಡವ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವ ಜನತೆಯ ಮೇಲಿದೆ ಎಂದರು.

ಸ್ಪರ್ಧೆಯ ಫಲಿತಾಂಶ : ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕೋಟೆರ ಸಂಜು ಸುಬ್ಬಯ್ಯ ಪ್ರಥಮ, ಮುದ್ದಿಯಡ ಕಿರಣ್ ಜೋಯಪ್ಪ ದ್ವಿತೀಯ, ಮುದ್ದಿಯಡ ಮುದ್ದಪ್ಪ ತೃತೀಯ ಬಹುಮಾನ ಪಡೆದುಕೊಂಡರು. ಮಕ್ಕಳ ವಿಭಾಗದಲ್ಲಿ ಗಾಂಡAಗಡ ಯಾದೇನ್ ಬಹುಮಾನ ಪಡೆದುಕೊಂಡರು.

ಮಹಿಳೆಯರ ವಿಷದ ಚೆಂಡು ಸ�