ಚೆಯ್ಯAಡಾಣೆ, ಸೆ. ೫: ಅನಾರೋಗ್ಯದಿಂದ ಬಳಲುತ್ತಿದ್ದ ಸಾಕು ನಾಯಿಯನ್ನು ಅದರ ಮಾಲೀಕರು ಜೀವಂತವಾಗಿ ಕಾವೇರಿ ನದಿಗೆ ಎಸೆದ ಅಮಾನವೀಯ ಘಟನೆ ನಡೆದಿದೆ.

ಪಾಲೂರು ಗ್ರಾಮದ ನಿವಾಸಿ ಕಾರ್ಯಪ್ಪ ಹಾಗೂ ಅವರ ಪತ್ನಿ ಈ ಕೃತ್ಯವೆಸಗಿದವರಾಗಿದ್ದಾರೆ. ತಮ್ಮ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಸಾಕುನಾಯಿಯನ್ನು ಪಾಲೂರು ಗ್ರಾಮದಿಂದ ತಮ್ಮ ವಾಹನ ಆಲ್ಟೊ ೮೦೦ರಲ್ಲಿ ತಂದ ಇವರುಗಳು ನಾಪೋಕ್ಲು ಮೂರ್ನಾಡು ಮುಖ್ಯರಸ್ತೆಯ ಬೊಳಿಬಾಣೆ ಬಳಿಯ ಕಾವೇರಿ ನದಿಗೆ ಅದರ ಕುತ್ತಿಗೆಗೆ ಹಾಕಿದ್ದ ಸರಪಳಿ ಸಹಿತ ಎಸೆದಿದ್ದಾರೆ. ಇದನ್ನು ಕಂಡ ಸಾರ್ವಜನಿಕರು ಅವರುಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನAತರ ನದಿಗೆ ಎಸೆದ ನಾಯಿಯ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ, ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ನೀರಿನಲ್ಲಿ ಕೊಚ್ಚಿ ಹೋದ ನಾಯಿ ಕಣ್ಮರೆಯಾಗಿದೆ. ಬಳಿಕ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಹಂಸ ಅವರು, ನಡೆದ ಕೃತ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿ ನಾಯಿಯ ಮಾಲೀಕರಿಗೆ ೩ ಸಾವಿರ ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಈ ವ್ಯಾಪ್ತಿಯ ವಿವಿಧ ಕಡೆಗಳಿಂದ ಕಿಡಿಗೇಡಿಗಳು ತ್ಯಾಜ್ಯವನ್ನು ತಂದು ಕಾವೇರಿ ನದಿಗೆ ಎಸೆದು ಮಲಿನಗೊಳಿಸುತ್ತಿರುವ ದೂರುಗಳು ಕೇಳಿಬರುತ್ತಿರುವುದರಿಂದ ಇದನ್ನು ನಿಯಂತ್ರಿಸಲು ಗ್ರಾಮ ಪಂಚಾಯಿತಿ ಸಿಸಿ ಕ್ಯಾಮೆರಾ ಕೂಡ ಅಳವಡಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಜಾಗೃತಿ ಮೂಡಿಸುತ್ತಿರುವಾಗಲೇ ಇಂತಹ ಕೃತ್ಯ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. -ಅಶ್ರಫ್