*ಗೋಣಿಕೊಪ್ಪ, ಸೆ. ೫:ತಾ. ೮ ರಂದು ಕೈಕೇರಿ ಸವಿತಾ ಸಮಾಜ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಮಟ್ಟದ ಕೊಡವ ಭಾಷಿಕ ಸವಿತಾ ಸಮಾಜದ ಸದಸ್ಯರಿಗೆ ಕೈಲ್‌ಪೊಳ್ದ್ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಕೊಡವ ಭಾಷಿಕ ಸವಿತಾ ಸಮಾಜದ ಅಧ್ಯಕ್ಷ ತಾಪನೇರ ಸಾಬು ತಿಳಿಸಿದ್ದಾರೆ.

ಕೊಡವ ಆಚಾರ-ವಿಚಾರ, ಪದ್ದತಿ, ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ನಮ್ಮ ಜನಾಂಗಕ್ಕೆ ಒಳಪಡುವ ಹಬ್ಬ ಆಚರಣೆಗೆ ಒತ್ತು ನೀಡಲಾಗಿದೆ. ಜಿಲ್ಲಾ ಮಟ್ಟದ ಕೊಡವ ಭಾಷಿಕ ಸವಿತಾ ಸಮಾಜದ ಸದಸ್ಯರು ಒಂದೆಡೆ ಸೇರಲು ಅವಕಾಶ ನೀಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏರ್‌ಗನ್ ಶೂಟಿಂಗ್ ಸ್ಪರ್ಧೆ, ಕೊಡವ ವಾಲಗತ್ತಾಟ್ ವಿಶೇಷವಾಗಿದೆ. ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಉಮ್ಮತ್ತಾಟ್, ಮಕ್ಕಳಿಗೆ ಕ್ರೀಡೆ, ಮಹಿಳೆಯರಿಗೆ ಬಾಂಬ್ ಇನ್ ದ ಸಿಟಿ, ಮ್ಯೂಸಿಕಲ್ ಚೇರ್ ಇಂತಹ ಕ್ರೀಡೆ ನಡೆಸಲಾಗುತ್ತದೆ ಸುಮಾರು ೨೦೦ ಸದಸ್ಯರು ಸೇರುವ ನಿರೀಕ್ಷೆ ಇದೆ ಎಂದರು.

ಗೋಷ್ಠಿಯಲ್ಲಿ ಖಜಾಂಚಿ ಚೆನ್ನೀರ ಪ್ರವೀಣ್ ಹರೀಶ್, ಆಡಳಿತ ಮಂಡಳಿ ನಿರ್ದೇಶಕರಾದ ಪೂಣಚೀರ ಮನೋಜ್, ವೇದಪಂಡ ಸುಮಿತ್ರ, ಚೋಂದುವAಡ ಬೇಬಿ ಇದ್ದರು.