*ಗೋಣಿಕೊಪ್ಪ, ಸೆ. ೫: ಶ್ರೀ ಕಾವೇರಿ ದಸರಾ ಸಮಿತಿ ಆಚರಿಸಿಕೊಂಡು ಬರುತ್ತಿರುವ ದಸರಾ ಉತ್ಸವದಲ್ಲಿ ೨೦೨೩ನೇ ಸಾಲಿನ ೪೫ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವದ ಚಟುವಟಿಕೆಗಳಿಗೆ ೫೯ ಲಕ್ಷದ ೯೯ ಸಾವಿರದ ೯೯೯ ರೂಪಾಯಿ ವೆಚ್ಚವಾಗಿರುವುದಾಗಿ ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾಹಿತಿ ನೀಡಿದ್ದಾರೆ.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಹಳೆಯ ಕಟ್ಟಡ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಲೆಕ್ಕಪತ್ರ ಮಂಡಿಸಿ ಸರ್ಕಾರ ನೀಡಿದ ೬೦ ಲಕ್ಷ ಹಣವನ್ನು ದಸರಾ ಆಚರಣೆಯ ವಿವಿಧ ಕಾರ್ಯಕ್ರಮಗಳಿಗೆ ವೆಚ್ಚ ಮಾಡಿರುವುದಾಗಿ ತಿಳಿಸಿದ್ದಾರೆ.

ಮುಖ್ಯ ವೇದಿಕೆ ಹಾಗೂ ಧ್ವನಿವರ್ಧಕ ಬಳಕೆಗೆ ೧೯ ಲಕ್ಷದ ೮೭ ಸಾವಿರದ ೬೧೦ ರೂಪಾಯಿ, ಮಹಿಳಾ, ಮಕ್ಕಳ, ಯುವ ದಸರಾ ಕಾರ್ಯಕ್ರಮಗಳಿಗೆ ೧,೪೨,೭೩೦ ಬ್ಯಾನರ್ ಹಾಗೂ ಪ್ರಿಂಟಿAಗ್‌ಗೆ ೪೪ ಸಾವಿರ, ದಶಮಂಟಪ ಸಮಿತಿಗಳಿಗೆ ಸಹಾಯಧನ ೧ ಲಕ್ಷ ೭೫ ಸಾವಿರ, ಸೌತ್ ಕೂರ್ಗ್ ಫಾರ್ಮರ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಆಟೋಕ್ರಾಸ್ ವೆಚ್ಚ ೧ ಲಕ್ಷ ೭೫ ಸಾವಿರ ಮತ್ತು ಹತ್ತು ದಿನಗಳು ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ವೆಚ್ಚ ೧೬,೪೬,೦೦೦, ಕವಿಗೋಷ್ಠಿಗೆ ೪೫ ಸಾವಿರ, ದಸರಾ ಪ್ರಚಾರಕ್ಕೆ ಬಳಕೆಯಾದ ಧ್ವನಿವರ್ಧಕ ವೆಚ್ಚ ೨೨,೫೦೦, ದಸರಾ ಗಾಳಿಪಟ ಸ್ಪರ್ಧೆ, ಹದಿನೈದು ಸಾವಿರ, ಊಟೋಪಚಾರಗಳ ಖರ್ಚು ೧,೦೭,೧೬೦, ಸ್ವಚ್ಛತಾ ಖರ್ಚು ೧೫ ಸಾವಿರ ಮತ್ತು ಇತರೆ ವೆಚ್ಚಗಳು ೪೯೯೦೫ ರೂಪಾಯಿಗಳಂತೆ ಒಟ್ಟು ೫೯ ಲಕ್ಷದ ೯೯,೯೯೯ ರೂಪಾಯಿಗಳನ್ನು ವೆಚ್ಚ ಮಾಡಿರುವುದಾಗಿ ಲೆಕ್ಕಪತ್ರಗಳನ್ನು ಮಹಾಸಭೆಯ ಮುಂದಿಟ್ಟರು.

ಇದೇ ಸಂದರ್ಭ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಡಿ.ಜೆ ಅಳವಡಿಸಿದ ಕಾರಣ ಮೂರು ಉಪಸಮಿತಿಗಳ ಮೇಲೆ ದೂರು ದಾಖಲಾಗಿದೆ. ಇದಕ್ಕೆ ಸಂಬAಧಿಸಿದAತೆ ಕೋರ್ಟ್ ಮೆಟ್ಟಿಲೇರುವ ಪ್ರಮೇಯ ಎದುರಾಗಿದ್ದು ಸಮಿತಿಗಳಿಗೆ ಸಂಕಷ್ಟ ಉಂಟಾಗಿದೆ. ಈ ಬಗ್ಗೆ ಕಾವೇರಿ ದಸರಾ ಸಮಿತಿ ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಬೇಕೆಂದು ದಶಮಂಟಪಗಳ ಸಮಿತಿ ಸದಸ್ಯರುಗಳು ಒತ್ತಾಯಿಸಿದರು.

ಕುಲ್ಲಚಂಡ ಪ್ರಮೋದ್ ಗಣಪತಿ, ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯ ಕಳೆದ ಸಾಲಿನ ವರದಿ ಮತ್ತು ೪೫ನೇ ದಸರಾ ಜನೋತ್ಸವದ ಕಾರ್ಯಕ್ರಮಗಳ ವರದಿಯನ್ನು ಸಮಿತಿಯ ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ ವಾಚಿಸಿದರು. ಕೋಶಾಧಿಕಾರಿ ಚೆಪ್ಪುಡೀರ ದ್ಯಾನ್ ಸುಬ್ಬಯ್ಯ, ಉಪಾಧ್ಯಕ್ಷರುಗಳಾದ ಶಿವಾಜಿ, ಮಂಜುಳಾ, ಗೌರವ ಸಲಹೆಗಾರ ಬಿ.ಎನ್ ಪ್ರಕಾಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಪಾರುವಂಗಡ ದಿಲನ್ ಚಂಗಪ್ಪ, ದಶÀಮಂಟಪ ಸಮಿತಿ ಅಧ್ಯಕ್ಷ ಅರಸು ಅಪ್ಪಣ್ಣ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.