ವೀರಾಜಪೇಟೆ, ಸೆ. ೫: ದೇಶ ಕಂಡ ಅಪ್ರತಿಮ ಹಾಕಿ ಆಟಗಾರ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನ ರಾಷ್ಟಿçÃಯ ಕ್ರೀಡಾ ದಿನಾಚರಣೆಯನ್ನು ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಂತರರಾಷ್ಟಿçÃಯ ರಗ್ಬಿ ಆಟಗಾರ, ಕ್ರೀಡಾ ಸಂಘಟಕರೂ ಆದ ಮಾದಂಡ ಪಿ. ತಿಮ್ಮಯ್ಯ ಮಾತನಾಡಿ, ಮೇಜರ್ ಧ್ಯಾನ್‌ಚಂದ್ ಅವರು ದೇಶಕಂಡ ಶ್ರೇಷ್ಟ ಹಾಕಿ ಪಟು ಮಾತ್ರವಲ್ಲ, ಅಪ್ರತಿಮ ದೇಶಪ್ರೇಮಿಯೂ ಆಗಿದ್ದರು. ಕ್ರೀಡಾ ಕ್ಷೇತ್ರ ಇವತ್ತಿನ ಆಧುನಿಕ ಸಾಧನೆ ಸಲಕರಣೆಗಳನ್ನು ಹೊಂದಿಲ್ಲದ ದಿನಗಳಲ್ಲಿಯೂ ಅವರು ಸತತ ಮೂರು ಬಾರಿ ಒಲಂಪಿಕ್‌ನಲ್ಲಿ ಹಾಕಿ ಚಿನ್ನದ ಪದಕವನ್ನು ದೇಶಕ್ಕೆ ತಂದುಕೊಟ್ಟು ಕೀರ್ತಿಗೆ ಭಾಜನರಾದರು ಎಂದು ಸ್ಮರಿಸಿದರು.
ಪತ್ರಕರ್ತರಾದ ಪಿ.ಕೆ. ಅಬ್ದುಲ್ ರೆಹೆಮಾನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ದಯಾನಂದ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕಿ ರಾಖಿ ಪೂವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ನಿತೀಶ್ ಹಾಗೂ ರಂಜಿತ್ ವೇದಿಕೆಯಲ್ಲಿದ್ದರು. ಕೀರ್ತನಾ ಪ್ರಾರ್ಥಿಸಿ, ಐ.ಕ್ಯೂ.ಎ.ಸಿ. ಸಂಯೋಜಕ ಡಾ|| ಬಸವರಾಜ್ ವಂದಿಸಿದರು. ನಿಶಾನ್ ಜೋಸೆಫ್ ನಿರೂಪಣೆಗೈದರು.