ಮಡಿಕೇರಿ, ಸೆ. ೫ : ರಾಜ್ಯವು ಕರ್ನಾಟಕವೆಂದು ನಾಮಕರಣ ಗೊಂಡು ಐದು ದಶಕಗಳು ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡ ಸುವರ್ಣ ಸಂಭ್ರಮ ರಥ ಯಾತ್ರೆಯು ಕೊಡಗು ಜಿಲ್ಲೆಯ ಪೊನ್ನಂಪೇಟೆಗೆ ತಾ. ೭ ರಂದು ಆಗಮಿಸಲಿದೆ.
ಅÀಂದು ಬೆಳಿಗ್ಗೆ ೯ ಗಂಟೆಗೆ ಪೊನ್ನಂಪೇಟೆ ತಾಲೂಕಿನ ಆನೆಚೌಕೂರ್ ಗೇಟಿನ ಬಳಿ ಕರ್ನಾಟಕ ಸಂಭ್ರಮ-೫೦ ರ ಪ್ರಯುಕ್ತ ಜ್ಯೋತಿ ರಥಯಾತ್ರೆಯನ್ನು ಬರಮಾಡಿಕೊಳ್ಳಲಾಗುತ್ತದೆ.
ತಾ. ೮ ರಂದು ಪೊನ್ನಂಪೇಟೆ ಯಿಂದ ಹೊರಟು ವೀರಾಜಪೇಟೆ, ತಾ. ೯ ರಂದು ವಿರಾಜಪೇಟೆಯಿಂದ ಮಡಿಕೇರಿಗೆ ಆಗಮಿಸಲಿದೆ. ತಾ. ೧೦ ರಂದು ಮಡಿಕೇರಿಯಿಂದ ಸೋಮವಾರಪೇಟೆ ಮತ್ತು ತಾ. ೧೧ ರಂದು ಸೋಮವಾರಪೇಟೆಯಿಂದ ಕುಶಾಲನಗರಕ್ಕೆ ತೆರಳಲಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.