ನಾಪೋಕ್ಲು, ಸೆ. ೫: ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ೨೦೨೪- ೨೫ರ ಸಾಲಿನ ವಾರ್ಡ್ ಸಭೆ ಸೆಪ್ಟೆಂಬರ್ ೧೦ ಮತ್ತು ೧೧ರಂದು ನಡೆಯಲಿದೆ ದೊಡ್ಡ ಪುಲಿಕೋಟು ಗ್ರಾಮದ ವಾರ್ಡ್ ಸಭೆ ತಾ. ೧೦ರಂದು ಬೆಳಿಗ್ಗೆ ೧೧ ಗಂಟೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ಎಂ.ಕೆ. ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬಲ್ಲಮಾವಟಿ ವಾರ್ಡ್ ಸಭೆಯು ಅದೇ ದಿನ ಮಧ್ಯಾಹ್ನ ೨:೩೦ಕ್ಕೆ ಬಲ್ಲಮಾವಟಿ ಪಂಚಾಯಿತಿ ಸಭಾಂಗಣದಲ್ಲಿ ಚೋಕಿರ ಭೀಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪೇರೂರು ವಾರ್ಡ್ ಸಭೆಯು ತಾ. ೧೧ ರಂದು ಬೆಳಿಗ್ಗೆ ೧೧ ಗಂಟೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಎಂ.ಎA. ರವೀಂದ್ರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನೆಲಜಿ ಗ್ರಾಮದ ವಾರ್ಡ್ ಸಭೆಯು ಅದೇ ದಿನ ಮಧ್ಯಾಹ್ನ ೨:೩೦ಕ್ಕೆ ಧವಸ ಭಂಡಾರ ಕಟ್ಟಡದಲ್ಲಿ ಸದಸ್ಯೆ ದೀನ ಮಾಯಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿದೆ.