ಸೋಮವಾರಪೇಟೆ, ಸೆ. ೫: ಮಾದಾಪುರದ ಚರ್ಚ್ ಮುಂಭಾಗ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರೋರ್ವರು ಚಾಲಿಸುತ್ತಿದ್ದ ಕಾರಿಗೆ ಹಿಂಬದಿಯಿAದ ಪಿಕಪ್ ವಾಹನ ಡಿಕ್ಕಿಯಾದ ಘಟನೆಗೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆ ಯತ್ನ, ನಿಂದನೆ ಸೇರಿದಂತೆ ಇನ್ನಿತರ ಕಲಂಗಳಡಿ ಎರಡು ಮೊಕದ್ದಮೆಗಳು ದಾಖಲಾಗಿದ್ದು, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರಿಂದ ಪ್ರತಿಭಟನೆಯೂ ನಡೆದಿದೆ.
ಮಾದಾಪುರದ ಜಂಬೂರು ಬಾಣೆ ನಿವಾಸಿ, ಹಿಂದೂ ಜಾಗರಣಾ ವೇದಿಕೆಯಲ್ಲಿ ತೊಡಗಿಸಿಕೊಂಡಿರುವ ಸುನಿಲ್ ಅವರು ನಿನ್ನೆರಾತ್ರಿ ತಮ್ಮ ಕಾರಿನಲ್ಲಿ ಮನೆಗೆ ತೆರಳುವ ಸಂದರ್ಭ, ಮಾದಾಪುರ ಚರ್ಚ್ ಮುಂಭಾಗ ಜಂಬೂರು ಬಾಣೆಯ ನಿವಾಸಿ ಕೆ.ವಿ. ಮಧು ಚಾಲಿಸುತ್ತಿದ್ದ ಪಿಕಪ್ ವಾಹನ ಹಿಂಬದಿಯಿAದ ಡಿಕ್ಕಿಪಡಿಸಿದೆ. ಈ ಸಂದರ್ಭ ಸುನಿಲ್ ಅವರು ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಮತ್ತೆ ಪಿಕಪ್ ವಾಹನವನ್ನು ಹಿಂಬದಿಗೆ ಚಲಾಯಿಸಿ ಮತ್ತೊಮ್ಮೆ ಕಾರಿಗೆ ಡಿಕ್ಕಿ ಪಡಿಸಲಾಗಿದ್ದು, ಕೂದಲೆಳೆ ಅಂತರದಿAದ ಸುನಿಲ್ ಪಾರಾಗಿದ್ದಾರೆ.
ಈ ಘಟನೆಯ ಬಗ್ಗೆ ತಾ. ೪ರ ರಾತ್ರಿ ೯ ಗಂಟೆಗೆ ಸುನಿಲ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದು, ತಾನು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನಾಗಿದ್ದು,
(ಮೊದಲ ಪುಟದಿಂದ) ಲವ್ ಜಿಹಾದ್ನ್ನು ಪ್ರಬಲವಾಗಿ ವಿರೋಧಿಸುತ್ತಾ ಬಂದಿದ್ದೇನೆ. ಈ ಕಾರಣದಿಂದ ಜಂಬೂರು ಬಾಣೆಯ ಮಧು ತನ್ನ ಮೇಲೆ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದು, ತನ್ನನ್ನು ಕೊಲೆ ಮಾಡುವುದಾಗಿ ಕೆಲವರಲ್ಲಿ ಹೇಳಿದ್ದಾನೆ. ನಿನ್ನೆ ರಾತ್ರಿ ನನ್ನ ಕಾರಿಗೆ ಹಿಂಬದಿಯಿAದ ಅತೀ ವೇಗವಾಗಿ ಬಂದು ಕೊಲೆ ಮಾಡುವ ಉದ್ದೇಶದಿಂದ ಡಿಕ್ಕಿಪಡಿಸಿದ್ದು, ಈ ಸಂದರ್ಭ ತಾನು ಕಾರಿನಿಂದ ಕೆಳಗಿಳಿಯುವಾಗ ಮತ್ತೆ ಪಿಕಪ್ ವಾಹನವನ್ನು ಹಿಂಬದಿಗೆ ಚಲಾಯಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಆಧಾರದ ಮೇರೆ ಪೊಲೀಸರು ಮಧು ಎಂಬವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಇದೇ ಘಟನೆಗೆ ಸಂಬAಧಿಸಿದAತೆ ಮಧು ಪತ್ನಿ ಜಾಸ್ಮಿ ಪೊಲೀಸರಿಗೆ ದೂರು ನೀಡಿದ್ದು, ತನ್ನ ಪತಿಯ ವಿರುದ್ಧ ಅವಮಾನಕಾರಿ ಯಾಗಿ ಸಂದೇಶಗಳನ್ನು ಸುನಿಲ್ ಅವರು ಕಳುಹಿಸಿದ್ದರು. ನಿನ್ನೆ ರಾತ್ರಿ ಸುನಿಲ್ ಅವರ ಕಾರನ್ನು ಓವರ್ ಟೇಕ್ ಮಾಡುವ ಸಂದರ್ಭ ಪಿಕಪ್ ಡಿಕ್ಕಿಯಾಗಿದ್ದು, ಕಾರು ಹಾಗೂ ಸುನಿಲ್ ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೂ ಪತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಬೆಳಿಗ್ಗೆ ೪ ಗಂಟೆ ಸಮಯದಲ್ಲಿ ಸುನಿಲ್ ತನ್ನ ಸ್ನೇಹಿತರೊಂದಿಗೆ ಮನೆಗೆ ಬಂದು ಪಿಕಪ್ಗೆ ಕಲ್ಲು ಹೊಡೆದಿದ್ದಾರೆ. ಕೇಳಲು ಹೋದ ಸಂದರ್ಭ ಅನುಚಿತವಾಗಿ ವರ್ತಿಸಿದ್ದಾರೆ. ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನ ಹಿನ್ನೆಲೆ ಪೊಲೀಸರು ಮಾದಾಪುರದ ಸುನಿಲ್, ಮಣಿಕಂಠ, ವಿನು, ದಿಲೀಪ್, ಹರೀಶ್ ಸೂರಜ್ ಅವರುಗಳನ್ನು ವಶಕ್ಕೆ ಪಡೆದು, ಕಾನೂನು ಕ್ರಮ ಕೈಗೊಂಡಿದ್ದಾರೆ.
ಜಾಗರಣಾ ವೇದಿಕೆ ಪ್ರತಿಭಟನೆ: ಹಿಂದೂ ಸಮಾಜದ ಜಾಗೃತಿಗಾಗಿ ಕೆಲಸ ಮಾಡುತ್ತಿರುವ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಪ್ರಮುಖರ ಮೇಲೆ ಕೊಲೆಯತ್ನ ನಡೆದಿದ್ದು, ಆರೋಪಿಯನ್ನು ಬಂಧಿಸಿದ್ದರೂ ಸಹ, ಆರೋಪಿಯ ಪತ್ನಿ ನೀಡಿದ ಸುಳ್ಳು ದೂರಿನ ಹಿನ್ನೆಲೆ ವೇದಿಕೆಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ರಾತ್ರಿ ೯ ಗಂಟೆ ಸುಮಾರಿಗೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಸುಳ್ಳು ಮೊಕದ್ದಮೆಗಳ ಮೂಲಕ ಹಿಂದೂ ಸಮಾಜದ ಪರವಿರುವ ಹೋರಾಟಗಾರರನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿ ಪೊಲೀಸರ ಕ್ರಮದ ವಿರುದ್ಧ ಧಿಕ್ಕಾರ ಕೂಗಿದರು. ಕೊಲೆ ಮಾಡಲು ಯತ್ನಿಸಿದ ಆರೋಪಿಯ ಪತ್ನಿ ನೀಡಿರುವ ಸುಳ್ಳು ದೂರಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ತಕ್ಷಣ ಬಂಧಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಪೊಲೀಸರು ಹಾಗೂ ಜಾಗರಣಾ ವೇದಿಕೆಯ ಕಾರ್ಯಕರ್ತರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಬಂದಿಸಲ್ಪಟ್ಟಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಾದೇವ ಹೇಳಿದರು.
ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಮಾನಸಿಕವಾಗಿ ಕುಗ್ಗಿಸುವ ಇಂತಹ ಕೆಲಸಗಳಿಂದ ಹೋರಾಟಗಳು ನಿಲ್ಲುವುದಿಲ್ಲ. ಕಾರ್ಯಕರ್ತರ ಪರವಾಗಿ ಹಿಂದೂ ಸಮಾಜ ನಿಲ್ಲಲಿದೆ. ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಹೋರಾಟಗಳು ನಡೆಯಲಿವೆ ಎಂದು ಮುಖಂಡರುಗಳು ಹೇಳಿದರು.
ಸುಳ್ಳು ಮೊಕದ್ದಮೆ ಹಿನ್ನೆಲೆ ಜಾಗರಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸಿದ್ದೀರಿ. ಕಾನೂನು ಪ್ರಕಾರ ರಾತ್ರಿ ವೇಳೆ ಠಾಣೆಯಲ್ಲಿ ಇರಿಸಿಕೊಳ್ಳುವಂತಿಲ್ಲ. ತಕ್ಷಣ ನ್ಯಾಯಾಧೀಶರ ಎದುರು ಹಾಜರುಪಡಿಸಿ ಎಂದು ಒತ್ತಾಯಿಸಿದ ಕಾರ್ಯಕರ್ತರು ಮುಂದೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಮುಖಂಡರಾದ ಉಲ್ಲಾಸ್ ತಿಮ್ಮಯ್ಯ, ದರ್ಶನ್ ಜೋಯಪ್ಪ, ಬೋಜೇಗೌಡ, ಮಹೇಶ್ ತಿಮ್ಮಯ್ಯ, ಸುಭಾಷ್ ತಿಮ್ಮಯ್ಯ, ಉಮೇಶ್, ಮನೋಹರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.