ಕಕ್ಕುAದಕಾಡು ಶ್ರೀ ಲಕ್ಷಿö್ಮÃ ವೆಂಕಟೇಶ್ವರ ದೇವಸ್ಥಾನ
ನಾಪೋಕ್ಲು: ಸಮೀಪದ ಕಕ್ಕುಂದಕಾಡು ಶ್ರೀ ಲಕ್ಷಿö್ಮÃ ವೆಂಕಟೇಶ್ವರ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಶ್ರಾವಣ ಶನಿವಾರ ಭಕ್ತಾದಿಗಳ ಸಂಗಮದೊAದಿಗೆ ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತು.
ಶ್ರಾವಣ ಶನಿವಾರ ಪ್ರಯುಕ್ತ ದೇವಾಲಯದಲ್ಲಿ ಶನಿವಾರ ಬೆಳಿಗ್ಗೆ ಏಳು ಗಂಟೆಗೆ ಅಭಿಷೇಕ, ೧೧ ಗಂಟೆಯಿAದ ೧೨ ಗಂಟೆವರೆಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ೧೨.೩೦ಕ್ಕೆ ವೆಂಕಟೇಶ್ವರನಿಗೆ ವಿಶೇಷ ಮಹಾಪೂಜೆ, ಮಹಾಮಂಗಳಾರತಿಯ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಿದ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ದೇವಾಲಯದ ಮುಖ್ಯ ಅರ್ಚಕ ಸುಧೀರ ಅವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಟ್ಟರು.
ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಉಪಾಧ್ಯಕ್ಷ ಟಿ.ಕೆ. ಸೂರ್ಯ ಕುಮಾರ್, ಕಾರ್ಯದರ್ಶಿ ಸುಜಿ ಕುಮಾರ್, ಖಜಾಂಚಿ ಎಂ.ಪಿ. ಗೋಪಾಲ, ಗೌರವಾಧ್ಯಕ್ಷ ಟಿ.ಎನ್. ರಮೇಶ್, ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬಾ. ಹಿರಿಯರಾದ ಟಿ.ವಿ. ಶ್ರೀನಿವಾಸ್, ಆನಂದ ಸ್ವಾಮಿ ಟಿ.ಎ., ನಿರ್ದೇಶಕರುಗಳಾದ ರಾಧಾಕೃಷ್ಣ ರೈ, ಸೀನ, ಶ್ಯಾಮ್ ಮಂದಪ್ಪ, ತಂಗಾ ಇತರ ನಿರ್ದೇಶಕರು ಸೇರಿದಂತೆ ಭಕ್ತಾದಿಗಳು ಹಾಜರಿದ್ದರು.
ಮಗ್ಗುಲ ಶನೈಶ್ಚರ ದೇವಾಲಯ ವೀರಾಜಪೇಟೆ: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದಲ್ಲಿರುವ ಶ್ರೀ ಶನೈಶ್ಚರ ಮತ್ತು ನವಗ್ರಹ ದೇವಾಲಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರಾವಣ ಮಾಸದ ನಾಲ್ಕು ಶ್ರಾವಣ ಶನಿವಾರ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು.
ನವಗ್ರಹ ಪೂಜೆ, ಶನಿಶಾಂತಿ ಪೂಜೆ, ಶನಿಜಪ ಸೇರಿದಂತೆ ವಿಶೇಷ ಪೂಜೆಗಳು ನಡೆದು ಮಹಾಪೂಜೆ ಬಳಿಕ ಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ನಡೆಯಿತು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ಶ್ರೀ ಶನೈಶ್ಚರನ ಕೃಪೆಗೆ ಪಾತ್ರರಾದರು.
ಮಲೆತಿರಿಕೆ ಶ್ರೀ ಶನೈಶ್ಚರ ದೇವಸ್ಥಾನ ವೀರಾಜಪೇಟೆ: ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿರುವ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ಶ್ರಾವಣ ಮಹೋತ್ಸವದ ಅಂಗವಾಗಿ ನಾಲ್ಕನೇ ಶನಿವಾರ ಬೆಳಿಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆಗಳು ನಡೆದು ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಂತರ ಸಂಜೆ ವಾದ್ಯಗೋಷ್ಠಿಯೊಂದಿಗೆ ದೇವರ ಉತ್ಸವ ಮೂರ್ತಿಯು ಪಟ್ಟಣದ ಮುಖ್ಯ ಬೀದಿಗಳಲ್ಲಿ ಶ್ರದ್ಧಾಭಕ್ತಿಯಿಂದ ಮೆರವಣಿಗೆಯಲ್ಲಿ ಸಾಗಿತು. ನಾಲ್ಕು ಶನಿವಾರಗಳು ಮಹಾಪೂಜೆ ಪ್ರಸಾದ ವಿನಿಯೋಗದ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಿಂದಲು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪೆರಾಜೆ ಶಾಸ್ತಾವು ದೇವಸ್ಥಾನ ಪೆರಾಜೆ: ಇಲ್ಲಿಯ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಶಾಸ್ತಾವು ದೇವಸ್ಥಾನ ಹಾಗೂ ಯಕ್ಷಪ್ರಿಯರ ಸಂಘ ಪೆರಾಜೆ ಇವರ ಆಶ್ರಯದಲ್ಲಿ "ಜಾಂಬವತಿ ಕಲ್ಯಾಣ" ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು. ಕಾರ್ಯಕ್ರಮವನ್ನು ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸ ಜಿತೇಂದ್ರ ನಿಡ್ಯಮಲೆ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರ್, ಜತೆ ಕಾರ್ಯದರ್ಶಿ ಚಿನ್ನಪ್ಪ ಅಡ್ಕ, ಹಿರಿಯ ಯಕ್ಷಗಾನ ಕಲಾವಿದರಾದ ಪದ್ಮಯ್ಯ ಮಾಸ್ತರ್ ಕುಂದಲ್ಪಾಡಿ, ಕೆ.ಡಿ. ಕುಶಾಲಪ್ಪ ಕುಂಬಳಚೇರಿ, ಶ್ರೀ ಶಾಸ್ತಾವು ಯಕ್ಷಪ್ರಿಯರ ಬಳಗ ಪೆರಾಜೆ ಇದರ ಅಧ್ಯಕ್ಷ ಯೋಗೀಶ್ ಕುಂಬಳಚೇರಿ, ಕಾರ್ಯದರ್ಶಿ ಅಶೋಕ್ ಪೀಚೆಮನೆ ಸೇರಿದಂತೆ ಸಂಘದ ಸದಸ್ಯರುಗಳು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರುಗಳು, ದೇವಸ್ಥಾನದ ದೇವತಕ್ಕ, ತಕ್ಕಮುಖ್ಯಸ್ಥರುಗಳು, ಮಾಜಿ ಮೊಕ್ತೇಸರುಗಳು, ಭಕ್ತಾದಿಗಳು ಉಪಸ್ಥಿತರಿದ್ದರು.