ಪೊನ್ನಂಪೇಟೆ, ಸೆ. ೬: ಮೈಸೂರಿನ ಕೊಡವ ಸಮಾಜ ಸಭಾಂಗಣದಲ್ಲಿ ಆಲ್ ಇಂಡಿಯಾ ಶಿಟೋರಿಯೋ ಕರಾಟೆ ಯೂನಿಯನ್ ಅಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಅವರು ಆಯೋಜಿಸಿದ್ದ, ನ್ಯಾಷನಲ್ ಶಿಟೋರಿಯೋ ಆಲ್ ಇಂಡಿಯಾ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕೊಡಗಿನ ವಿದ್ಯಾರ್ಥಿಗಳು ಹಲವು ಪದಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಪೊನ್ನಮ್ಮ ಎ.ಎಸ್. ಕುಮಿತೆ ವಿಭಾಗದಲ್ಲಿ ಚಿನ್ನ ಪಡೆದುಕೊಂಡಿದ್ದಾರೆ. ಇಳಾ ತಂಗಮ್ಮ ಕುಮಿತೆಯಲ್ಲಿ ಬೆಳ್ಳಿ ಮತ್ತು ಕತಾ ವಿಭಾಗದಲ್ಲಿ ಕಂಚು, ಶ್ರದ್ಧಾ ಕತಾ ಮತ್ತು ಕುಮಿತೆಯಲ್ಲಿ ಕಂಚು, ತ್ರಿಷಾ ಕುಮಿತೆಯಲ್ಲಿ ಬೆಳ್ಳಿ, ಕಥಾದಲ್ಲಿ ಕಂಚು, ತಾನಿಕ ನೀಲಮ್ಮ ಕುಮಿತೆಯಲ್ಲಿ ಕಂಚು, ತಿಮ್ಮಯ್ಯ ಹಾಗೂ ಸಮರ್ಥ್ ಕತಾದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.ವಿದ್ಯಾರ್ಥಿಗಳಿಗೆ ಗೋಣಿಕೊಪ್ಪಲಿನ ಮುಖ್ಯ ಕರಾಟೆ ತರಬೇತುದಾರ ರಾಷ್ಟಿçÃಯ ಕರಾಟೆ ಪಟು ಜಮ್ಮಡ ಜೋಯಪ್ಪ, ತರಬೇತುದಾರರಾದ ಸುಮನ್, ಕಾರ್ತಿಕ್ ತರಬೇತಿ ನೀಡಿದ್ದಾರೆ. ಅರುಣ್ ಮಾಚಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕರಾಟೆ ಪಂದ್ಯಾವಳಿಯ ಉದ್ಘಾಟನೆಯನ್ನು ಸಂಸದ ಯದುವೀರ್ ಒಡೆಯರ್ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಹಾಗೂ ಒಲಂಪಿಯನ್, ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್ ಸ್ಥಾಪಕರಾದ ಅಶ್ವಿನಿ ಕರುಂಬಯ್ಯ, ಟೆಕ್ನಿಕಲ್ ಅಡ್ವೆöÊಸರ್‌ಗಳಾದ ಸೆನ್ಸಾಯಿ ಟಿ.ಎಸ್. ವಾಂಗ್, ಸೆನ್ಸಾಯ್ ಜಾರ್ಜ್ ಟಾನ್ ಉಪಸ್ಥಿತರಿದ್ದರು. ಕರಾಟೆ ಪಂದ್ಯಾವಳಿಯಲ್ಲಿ ರಾಷ್ಟçದ ವಿವಿಧ ರಾಜ್ಯಗಳಿಂದ ಒಂದು ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.