ನಾಪೋಕ್ಲು, ಸೆ. ೬: ಸಮೀಪದ ಬಲ್ಲಮಾವಟಿ ಗ್ರಾಮದ ಅಪ್ಪಚೆಟ್ಟೋಳಂಡ ಹರ್ಷಿತ್ ಅಯ್ಯಪ್ಪ ಸೆಪ್ಟೆಂಬರ್ ೩ ರಿಂದ ೧೫ರವರೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿರುವ ಸೀನಿಯರ್ ಇಂಟರ್ ಡಿಪಾರ್ಟ್ಮೆಂಟ್ ನ್ಯಾಷನಲ್ ಚಾಂಪಿಯನ್ ಶಿಪ್ ನ ಅಂಪೈರ್ ಆಗಿ ಆಯ್ಕೆ ಆಗಿದ್ದಾರೆ. ಇವರು ಮಡಿಕೇರಿ ತಾಲೂಕಿನ ಬಲ್ಲಮಾವಟಿ ಗ್ರಾಮದ ಅಪ್ಪಚೆಟ್ಟೋಳಂಡ ಬೋಪಯ್ಯ ಮತ್ತು ಬೋಜಮ್ಮ ದಂಪತಿಗಳ ಪುತ್ರ.