ಮಡಿಕೇರಿ, ಸೆ. ೬: ೯೪-ಸಿ ಅಡಿ ನಿವೇಶನದ ಹಕ್ಕುಪತ್ರ ದೊರೆತ್ತಿದ್ದರೂ ಏಕನಿವೇಶನ ನಕ್ಷೆ ವಿನ್ಯಾಸ ಅನುಮೋದನೆ ದೊರಕದೆ ಮಡಿಕೇರಿ ನಗರಸಭೆಯಲ್ಲಿ ಖಾತೆ ತೆರೆಯಲು ಸಾಧ್ಯವಾಗದ ೩೦ ಕ್ಕೂ ಹೆಚ್ಚು ಪ್ರಕರಣಗಳಿದ್ದು, ವರ್ಷಾನು ಗಟ್ಟಲೆಯಿಂದ ನಿವೇಶನದ ಫಲಾನುಭವಿಗಳು ಪರದಾಡುತ್ತಿದ್ದು ಶೀಘ್ರವಾಗಿ ಈ ಸಮಸ್ಯೆ ಬಗೆಹರಿಸುವಂತೆ ನಗರಸಭಾ ಸದಸ್ಯರು ಜಿಲ್ಲಾಧಿಕಾರಿ ಹಾಗೂ ನಗರಸಭಾ ಆಡಳಿತಾಧಿಕಾರಿ ವೆಂಕಟ್ ರಾಜಾ ಅವರಲ್ಲಿ ಮನವಿ ಮಾಡಿದರು.

ನಗರಸಭಾ ಕೌನ್ಸಿಲ್ ಸಭಾಂಗಣದಲ್ಲಿ ಪ್ರಥಮ ಬಾರಿಗೆ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಈ ಸಮಸ್ಯೆ ಬಗ್ಗೆ ನಗರಸಭಾ ಸದಸ್ಯರುಗಳಾದ ಅಮೀನ್ ಮೊಹ್ಸೀನ್, ಉಮೇಶ್ ಸುಬ್ರಮಣಿ, ಮಹೇಶ್ ಜೈನಿ, ಮನ್ಸೂರ್ ಅಲಿ ಅವರುಗಳು ಜಿಲ್ಲಾಧಿಕಾರಿಗೆ ವಿವರಿಸಿದರು. ಹಿರಿಯರು ತಮ್ಮ ಇಬ್ಬರು ಮಕ್ಕಳಿಗೆ ನಿವೇಶನವನ್ನು ವಿಭಜಿಸಿ ನೀಡಿದಾಗ ಈ ವಿಭಜಿತ ನಿವೇಶನದಲ್ಲಿ ಫಲಾನುಭವಿಗಳು ತಮ್ಮ ಹೆಸರಿನಲ್ಲಿ ಖಾತೆ ತೆರೆಯುವಂತೆ ನಗರಸಭೆಗೆ ಅರ್ಜಿ ಸಲ್ಲಿಸಿದರೆ ಯಾವುದೇ ಸ್ಪಂದನ ಸಿಗುತ್ತಿಲ್ಲ. ಪೌರಾಯುಕ್ತರಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯೂ ದೊರಕುವುದಿಲ್ಲ. ತಕ್ಷಣವೇ ಈ ಸಂಬAಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ನಗರಸಭಾ ಸದಸ್ಯರು ಒತ್ತಾಯಿಸಿದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ ಅವರು ಇದಕ್ಕೆ ಪ್ರತಿಕ್ರಿಯಿಸಿ, ಏಕನಿವೇಶನ ವಿಭಜನಾ ನಕ್ಷೆ ವಿನ್ಯಾಸ ಅನುಮೋದನೆ ಸಂಬAಧ ನಗರಸಭೆಯಿಂದ ಮುಡಾಗೆ ಅರ್ಜಿಗಳು ವಿಲೇವಾರಿಯಾಗುತ್ತವೆ. ಮುಡಾ ವ್ಯಾಪಿಯಲ್ಲಿದ್ದರೆ ಅನುಮೋದನೆ ನೀಡಲಾಗುತ್ತದೆ. ಮುಡಾ ವ್ಯಾಪ್ತಿಗೆ ಬಾರದಿದ್ದರೆ, ನಗರಸಭೆ ಹಂತದಲ್ಲಿಯೇ ಅನುಮೋದನೆ ನೀಡಿ ನಿವೇಶನದ ಫಲಾನುಭವಿಗಳ ಹೆಸರಿನಲ್ಲಿ ಖಾತೆ ತೆರೆಯಬಹುದಾಗಿದೆ ಎಂದು ಸ್ಪಷ್ಟನೆ ನೀಡಿದರು.

ಈ ವಿಷಯದ ಬಗ್ಗೆ ಪರಿಶೀಲಿಸಿ ಯಾರಿಗೂ ತೊಂದರೆಯಾಗದAತೆ ಹಾಗೂ ಕಾನೂನು ಉಲ್ಲಂಘನೆ ಯಾಗದಂತೆ ಆದಷ್ಟು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ಭರವಸೆ ಇತ್ತರು.

ಸ್ಮಾರಕಗಳಿಗೆ ಸುಣ್ಣ-ಬಣ್ಣ, ದಶಮಂಟಪ ಸಾಗುವ ರಸ್ತೆಗಳ ದುರಸ್ತಿಗೆ ರೂ.೧೮.೪೫ ಲಕ್ಷ ಕ್ರಿಯಾಯೋಜನೆ

ಮಡಿಕೇರಿಯ ಐತಿಹಾಸಿಕ ದಸರಾ ಉತ್ಸವ ಸಂದರ್ಭ ನಗರದಲ್ಲಿ ದಶಮಂಟಪಗಳ ವೈಭವಯಾತ್ರೆ ನಡೆಯಲಿದ್ದು, ಮಂಟಪಗಳು ಸಾಗುವ ಮಾರ್ಗಗಳಲ್ಲಿ ಕೈಗೊಳ್ಳಬೇಕಾದ ರಸ್ತೆ ಅಭಿವೃದ್ಧಿ ಕಾಮಗಾರಿಗೆ, ಗುಂಡಿ ಮುಚ್ಚುವ ಕೆಲಸಕ್ಕೆ ಹಾಗೂ ನಗರದಲ್ಲಿನ ವಿವಿಧ ಸ್ಮಾರಕಗಳಿಗೆ ಸುಣ್ಣ-ಬಣ್ಣ ಬಳಿಯುವ ಕಾಮಗಾರಿಗೆ ರೂ.೧೮.೪೫ ಲಕ್ಷ ಕ್ರಿಯಾಯೋಜನೆ ತಯಾರಿಸ ಲಾಗಿದೆ ಎಂದು ನಗರಸಭಾ ಪೌರಾಯುಕ್ತ ವಿಜಯ್ ಅವರು ಮಾಹಿತಿ ನೀಡಿದರು. ಬನ್ನಿಮಂಟಪ, ಯುದ್ಧ ಸ್ಮಾರಕ, ರಂಗಮAದಿರ, ಗಾಂಧಿ ಮಂಟಪ, ನಗರಸಭೆ ಮುಂಭಾಗ ಕಮಾನು ಇತ್ಯಾದಿ ಕಡೆ ಸುಣ್ಣ-ಬಣ್ಣ ಬಳಿಯುವ ಕಾಮಗಾರಿಗೆ ರೂ.೩.೫ ಲಕ್ಷ, ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ದಸರಾ ಕಾರ್ಯಕ್ರಮದ ಅಂಗವಾಗಿ ರಸ್ತೆಗಳನ್ನು ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚುವ ಕಾಮಗಾರಿಗೆ ರೂ.೪.೯೫ ಲಕ್ಷ ಹಾಗೂ ದಶ ಮಂಟಪಗಳು ಸಾಗುವ ರಸ್ತೆಯಲ್ಲಿ ಗುಂಡಿ ಮುಚ್ಚುವ ಕಾಮಗಾರಿಗೆ ರೂ.೧೦ ಲಕ್ಷ ವೆಚ್ಚದ ಕ್ರಿಯಾಯೋಜನೆ ತಯಾರಿ¸ Àಲಾಗಿದೆ ಎಂದು ಅವರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಗರಸಭಾ ಸದಸ್ಯ ಮನ್ಸೂರ್ ಅಲಿ ಅವರು, ನಗರೋತ್ಥಾನದಡಿಯಲ್ಲಿ ದುರಸ್ತಿ ಗೊಂಡ ರಸ್ತೆಗಳನ್ನು ಹೊರತುಪಡಿಸಿ ಇತರೆಡೆ ದುರಸ್ತಿ ಕಾರ್ಯ ನಡೆಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ

(ಮೊದಲ ಪುಟದಿಂದ) ಅವರು ಕೂಡ ಇದಕ್ಕೆ ಪೂರಕವಾಗಿ ಮಾತನಾಡಿದರು. ನಗರೋತ್ಥಾನದಡಿಯಲ್ಲಿ ಕೈಗೊಂಡ ಕೆಲ ಕಾಮಗಾರಿಗಳು ಕಳಪೆಯಾಗಿವೆೆ. ಇಂತಹ ರಸ್ತೆಗಳನ್ನು, ಪ್ರಮುಖವಾಗಿ ಮಂಟಪ, ಕರಗಗಳು ಸಾಗುವ ಮಾರ್ಗದ ರಸ್ತೆಗಳನ್ನು ಸರಿಪಡಿಸುವುದು ಅಗತ್ಯವಿದೆ ಎಂದು ಈ ಸಂದರ್ಭ ಸದಸ್ಯರಾದ ಕೆ.ಎಸ್. ರಮೇಶ್, ಉಮೇಶ್ ಸುಬ್ರಮಣಿ ಅಭಿಪ್ರಾಯಿಸಿದರು. ಕೋದಂಡರಾಮ ದೇವಾಲಯದಿಂದ ರಾಣಿಪೇಟೆಗೆ ಸಾಗುವ ರಸ್ತೆ ಹದಗೆಟ್ಟಿದ್ದು ಇದನ್ನು ಕೂಡ ದಸರಾ ಕಾಮಗಾರಿಗೆ ಸೇರಿಸಿ ತ್ವರಿತವಾಗಿ ದುರಸ್ತಿ ಮಾಡುವಂತಾಗಬೇಕೆAದು ಸದಸ್ಯೆ ಸವಿತಾ ರಾಕೇಶ್ ಹೇಳಿದರು. ಅಗ್ನಿಶಾಮಕ ಠಾಣೆಗೆ ತೆರಳುವ ರಸ್ತೆಯ ದುರಸ್ತಿ ಕೂಡ ಆಗಬೇಕೆಂದು ಸದಸ್ಯರು ಅಭಿಪ್ರಾಯಿಸಿದರು.

ನಾಮನಿರ್ದೇಶಿತ ಸದಸ್ಯರಿಗೂ ಅನುದಾನ ನೀಡುವಂತೆ ಮನವಿ

ಪ್ರತಿ ವಾರ್ಡ್ ಸದಸ್ಯರುಗಳಿಗೆ ತಮ್ಮ-ತಮ್ಮ ವಾರ್ಡ್ಗಳ ಅಭಿವೃದ್ಧಿಗೆ ರೂ.೫ ಲಕ್ಷ ನೀಡಲಾಗಿದೆ. ನಾಮನಿರ್ದೇಶಿತ ೫ ಸದಸ್ಯರುಗಳಿಗೂ ಅನುದಾನ ನೀಡುವಂತೆ ನಾಮನಿರ್ದೇಶಿತ ಸದಸ್ಯ ಮುದ್ದುರಾಜು ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಇದಕ್ಕೆ ನಗಸಭಾ ಸದಸ್ಯ ಕೆ.ಎಸ್ ರಮೇಶ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ರಾಜೇಶ್ ಯಲ್ಲಪ್ಪ ಅವರು ನಾಮನಿರ್ದೇಶಿತ ಸದಸ್ಯರ ಪರ ಮಾತನಾಡಿದರು. ಈ ವಿಷಯ ಸಂಬAಧ ಕೆಲಕಾಲ ಸಭೆಯಲ್ಲಿ ಗದ್ದಲ ಉಂಟಾಯಿತು. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ, ನಾಮನಿರ್ದೇಶಿತ ಸದಸ್ಯರಿಗೆ ಅನುದಾನ ನೀಡಬಾರದೆಂಬ ಕಾನೂನು ಇಲ್ಲ. ನಗರದ ಯಾವುದೇ (ಮೊದಲ ಪುಟದಿಂದ) ಅವರು ಕೂಡ ಇದಕ್ಕೆ ಪೂರಕವಾಗಿ ಮಾತನಾಡಿದರು. ನಗರೋತ್ಥಾನದಡಿಯಲ್ಲಿ ಕೈಗೊಂಡ ಕೆಲ ಕಾಮಗಾರಿಗಳು ಕಳಪೆಯಾಗಿವೆÉ. ಇಂತಹ ರಸ್ತೆಗಳನ್ನು, ಪ್ರಮುಖವಾಗಿ ಮಂಟಪ, ಕರಗಗಳು ಸಾಗುವ ಮಾರ್ಗದ ರಸ್ತೆಗಳನ್ನು ಸರಿಪಡಿಸುವುದು ಅಗತ್ಯವಿದೆ ಎಂದು ಈ ಸಂದರ್ಭ ಸದಸ್ಯರಾದ ಕೆ.ಎಸ್. ರಮೇಶ್, ಉಮೇಶ್ ಸುಬ್ರಮಣಿ ಅಭಿಪ್ರಾಯಿಸಿದರು. ಕೋದಂಡರಾಮ ದೇವಾಲಯದಿಂದ ರಾಣಿಪೇಟೆಗೆ ಸಾಗುವ ರಸ್ತೆ ಹದಗೆಟ್ಟಿದ್ದು ಇದನ್ನು ಕೂಡ ದಸರಾ ಕಾಮಗಾರಿಗೆ ಸೇರಿಸಿ ತ್ವರಿತವಾಗಿ ದುರಸ್ತಿ ಮಾಡುವಂತಾಗಬೇಕೆAದು ಸದಸ್ಯೆ ಸವಿತಾ ರಾಕೇಶ್ ಹೇಳಿದರು. ಅಗ್ನಿಶಾಮಕ ಠಾಣೆಗೆ ತೆರಳುವ ರಸ್ತೆಯ ದುರಸ್ತಿ ಕೂಡ ಆಗಬೇಕೆಂದು ಸದಸ್ಯರು ಅಭಿಪ್ರಾಯಿಸಿದರು.

ನಾಮನಿರ್ದೇಶಿತ ಸದಸ್ಯರಿಗೂ ಅನುದಾನ ನೀಡುವಂತೆ ಮನವಿ

ಪ್ರತಿ ವಾರ್ಡ್ ಸದಸ್ಯರುಗಳಿಗೆ ತಮ್ಮ-ತಮ್ಮ ವಾರ್ಡ್ಗಳ ಅಭಿವೃದ್ಧಿಗೆ ರೂ.೫ ಲಕ್ಷ ನೀಡಲಾಗಿದೆ. ನಾಮನಿರ್ದೇಶಿತ ೫ ಸದಸ್ಯರುಗಳಿಗೂ ಅನುದಾನ ನೀಡುವಂತೆ ನಾಮನಿರ್ದೇಶಿತ ಸದಸ್ಯ ಮುದ್ದುರಾಜು ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಇದಕ್ಕೆ ನಗಸಭಾ ಸದಸ್ಯ ಕೆ.ಎಸ್ ರಮೇಶ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ರಾಜೇಶ್ ಯಲ್ಲಪ್ಪ ಅವರು ನಾಮನಿರ್ದೇಶಿತ ಸದಸ್ಯರ ಪರ ಮಾತನಾಡಿದರು. ಈ ವಿಷಯ ಸಂಬAಧ ಕೆಲಕಾಲ ಸಭೆಯಲ್ಲಿ ಗದ್ದಲ ಉಂಟಾಯಿತು. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ, ನಾಮನಿರ್ದೇಶಿತ ಸದಸ್ಯರಿಗೆ ಅನುದಾನ ನೀಡಬಾರದೆಂಬ ಕಾನೂನು ಇಲ್ಲ. ನಗರದ ಯಾವುದೇ ಕಾವೇರಿ ಕಲಾಕ್ಷೇತ್ರದಲ್ಲಿ ಎರಡು ಲೆವೆಲ್ ಪಾರ್ಕಿಂಗ್

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್ ಸೌಲಭ್ಯವುಳ್ಳ ಕಟ್ಟಡ ನಿರ್ಮಿಸಿದರೆ ಸುಮಾರು ೨೦೦ಕ್ಕೂ ಅಧಿಕ ವಾಹನಗಳ ನಿಲುಗಡೆಗೆ ಅವಕಾಶ ದೊರಕುತ್ತದೆ. ರಾಜಾಸೀಟಿಗೆ ತೆರಳುವ ಪ್ರವಾಸಿಗರು ಕೂಡ ಇಲ್ಲೇ ವಾಹನ ನಿಲ್ಲಿಸಿ ನಡೆದುಕೊಂಡು ರಾಜಾಸೀಟಿಗೆ ತೆರಳಬಹುದಾಗಿದೆ. ಈ ದಾರಿಯಲ್ಲಿ ಪಾದಚಾರಿಗಳಿಗೆ ಪೂರಕವಾದ ಇಂಟರ್‌ಲಾಕ್‌ಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ಸಲಹೆ ಇತ್ತರು.

ಪುಟಾಣಿ ರೈಲು ನಿರ್ವಹಣೆ ನಗರಸಭೆಗೆ ನೀಡಿ - ಅನಿತಾ

ನಗರದ ರಾಜಾಸೀಟಿನಲ್ಲಿರುವ ಕೆಟ್ಟುನಿಂತಿರುವ ಪುಟಾಣಿ ರೈಲಿನ ಉಸ್ತುವಾರಿಯನ್ನು ತೋಟಗಾರಿಕೆ ಇಲಾಖೆಯಿಂದ ನಗರಸಭೆಗೆ ನೀಡಿದರೆ ಅದನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ನಗರಸಭಾ ಮಾಜಿ ಅಧಕ್ಷ್ಷೆ ಅನಿತಾ ಪೂವಯ್ಯ, ಸದಸ್ಯ ಉಮೇಶ್ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಇದರ ಅಭಿವೃದ್ಧಿಗೆ ರೂ.೧ ಕೋಟಿ ಆದರೂ ವೆಚ್ಚ ಬೀಳಲಿದೆ. ಇಷ್ಟು ಹಣ ನಗರಸಭೆಯಲ್ಲಿದ್ದರೆ, ಕಾನೂನು ರೀತಿಯಲ್ಲಿ ತೋಟಗಾರಿಕಾ ಇಲಾಖೆಯಿಂದ ನಗರಸಭೆಗೆ ಯಾವ ರೀತಿ ಇದನ್ನು ವರ್ಗಾಯಿಸಬಹುದೆಂದು ಚಿಂತಿಸಲಾಗುವುದೆAದರು.

ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಸಿ.ಸಿ ಕ್ಯಾಮರಾಗಳನ್ನು ಅಳವಡಿಸಿ ತಪ್ಪಿತಸ್ಥರಿಗೆ ದಂಡ ವಿಧಿಸುವಂತಾಗಬೇಕೆAದು ಅಮೀನ್ ಮೊಹ್ಸಿನ್ ಒತ್ತಾಯಿಸಿದರು. ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವAತೆ ನಗರಸಭಾ ಸದಸ್ಯ ಅರುಣ್ ಶೆಟ್ಟಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಸಭೆಯಲ್ಲಿ ನಗರಸಭಾ ಸದಸ್ಯರು. ಪೌರಾಯುಕ್ತ ವಿಜಯ್, ನಾಮನಿರ್ದೇಶಿತ ಸದಸ್ಯರು ಹಾಗೂ ನಗರಸಭಾ ಅಧಿಕಾರಿಗಳು ಹಾಜರಿದ್ದರು.