ಕೂಡಿಗೆ, ಸೆ. ೬ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು, ಚಿಕ್ಕತ್ತೂರು ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದಲೂ ಸಮೀಪದ ಅತ್ತೂರು ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದಿರುವ ಕಾಡಾನೆಗಳು ಸಮೀಪದ ಜಮೀನಿನಲ್ಲಿ ಬೆಳೆಯಲಾಗಿದ್ದ ಮೆಕ್ಕೆಜೋಳ, ಮತ್ತು ಸಿಹಿ ಗೆಣಸು ಬೆಳೆಗಳನ್ನು ತಿಂದು ತುಳಿದು ನಷ್ಟಪಡಿಸಿವೆ.

ದೊಡ್ಡತ್ತೂರು, ಚಿಕ್ಕತ್ತೂರು ಗ್ರಾಮದ ಕುಮಾರ್, ಗಣೇಶ್, ರೀಜೂ, ಸಂತೋಷ್ ಸೇರಿದಂತೆ ಅನೇಕ ರೈತರ ಜಮೀನಿಗೆ ದಾಳಿ ಮಾಡಿ ಬೆಳೆ ಹಾನಿ ಮಾಡಿದೆ. ಸ್ಧಳಕ್ಕೆ ಅತ್ತೂರು ಉಪವಲಯ ಅರಣ್ಯಾಧಿಕಾರಿ ಉಮೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.