ಸೋಮವಾರಪೇಟೆ, ಸೆ. ೬: ಧಾರ್ಮಿಕ ಐತಿಹ್ಯ ಹೊಂದಿರುವ ದೊಡ್ಡಮಳ್ತೆ ಗ್ರಾಮದ ಶ್ರೀ ಹೊನ್ನಮ್ಮನ ದೇವಾಲಯದ ಮುಂಭಾಗವಿರುವ ಹೊನ್ನಮ್ಮನ ಕೆರೆಗೆ ತಾಲೂಕು ಜಾನಪದ ಪರಿಷತ್ ಹಾಗೂ ಕನ್ನಡ ಸಿರಿ ಸ್ನೇಹ ಬಳಗದಿಂದ ಬಾಗಿನ ಅರ್ಪಿಸಲಾಯಿತು.

ಜಾನಪದ ಇತಿಹಾಸದಲ್ಲಿ ಸ್ಥಾನ ಪಡೆದಿರುವ ಹೊನ್ನಮ್ಮನ ಕೆರೆಗೆ ತಾಲೂಕು ಜಾನಪದ ಪರಿಷತ್‌ನಿಂದ ಪ್ರತಿ ವರ್ಷವೂ ಬಾಗಿನ ಅರ್ಪಿಸುತ್ತಿದ್ದು, ಈ ಬಾರಿಯೂ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಬಿಡಲಾಯಿತು.

ಪರಿಷತ್‌ನ ತಾಲೂಕು ಅಧ್ಯಕ್ಷ ಕೆ.ಎ. ಪ್ರಕಾಶ್, ಕಾರ್ಯದರ್ಶಿ ಎಂ.ಎ. ರುಬೀನಾ, ಪದಾಧಿಕಾರಿಗಳಾದ ಅರುಣ ಕುಸುಬೂರು, ಸುಶೀಲ ಹಾನಗಲ್, ಜಲಾ ಕಾಳಪ್ಪ, ಸುಮತಿ, ವಸಂತಿ, ಶರ್ಮಿಳ ರಮೇಶ್, ರೇಣುಕ ವೆಂಕಟೇಶ್, ರಾಗಿಣಿ, ಹೇಮಂತ್ ಪಾರೇರ, ಲಕ್ಷಿö್ಮÃಕಾಂತ್, ದುಷ್ಯಂತ್ ಕುಮಾರ್, ಟೋಮಿ ಥಾಮಸ್ ಸೇರಿದಂತೆ ಇತರರು ಇದ್ದರು.

ಕನ್ನಡ ಸಿರಿ ಸ್ನೇಹ ಬಳಗದಿಂದ: ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ಜಾನಪದ, ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕನ್ನಡ ಸಿರಿ ಸ್ನೇಹ ಬಳಗದಿಂದ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಲಾಯಿತು. ಕ್ಷೇತ್ರದಲ್ಲಿ ಬಳಗದ ಪದಾಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಮಾಜೀ ಎಂ.ಎಲ್.ಸಿ. ಮೇದಪ್ಪ ಎಸ್.ಜಿ., ಪದಾಧಿಕಾರಿಗಳಾದ ನ.ಲ. ವಿಜಯ, ಹೆಚ್.ಜೆ. ಜವರಪ್ಪ, ಪಾಂಡುರAಗ, ಡಿ.ಪಿ. ಲೋಕೇಶ್, ಸುಲೈಮಾನ್, ದೇವಾಲಯ ಸಮಿತಿ ಅಧ್ಯಕ್ಷ ಉದಯ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕನ್ನಡ ಸಿರಿ ಸ್ನೇಹ ಬಳಗದಿಂದ ಜಾನಪದ ಪರಿಷತ್ ಹಾಗೂ ಬಳಗದ ಸದಸ್ಯರುಗಳಿಗೆ ಬಾಗಿನ, ಬಳೆ ನೀಡಲಾಯಿತು.