ಮಡಿಕೇರಿ, ಸೆ. ೬: ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯಿಂದ ಶ್ರೀಸ್ವರ್ಣ ಗೌರಿಯನ್ನು ಆರಾಧನೆ ನಡೆಯಿತು. ದೇವಾಲಯ ಸೇರಿದಂತೆ ಮನೆಗಳಲ್ಲಿ ಮಹಿಳೆಯರು ಗೌರಿಗೆ ವಿಶೇಷ ಪೂಜೆ ಸಲ್ಲಿಸಿದರು. ಗೌರಿ ಗಣೇಶ ಹಬ್ಬದ ನಿಮಿತ್ತ ಶುಕ್ರವಾರ ಬೆಳಿಗ್ಗೆ ಬಾವಿಗಳಲ್ಲಿನ ಗಂಗಾ ಜಲವನ್ನು ಪೂಜಿಸಿ ಕಳಶಗಳನ್ನು ಪ್ರತಿಷ್ಠಾಪಿಸಿ ಹೊಸ ಸೀರೆಗಳನ್ನು ತೊಡಿಸಿ ಗೌರಮ್ಮನ ರೂಪದಲ್ಲಿ ಪೂಜಿಸಿದರು. ಇನ್ನೂ ಕೆಲವರು ಬಾಗಿನವನ್ನು ಸಿದ್ದಪಡಿಸಿ ಮನೆಯ ಬಾಗಿಲಲ್ಲಿಟ್ಟು ಮಾನಸ ಪೂಜೆ ಸಲ್ಲಿಸಿ ಸಾಕ್ಷಾತ್ ಗೌರಮ್ಮನಿಗೆ ಅರ್ಪಿಸಿದರು. ಇನ್ನೂ ಕೆಲವರು ಮನೆಯಂಗಳದಲ್ಲಿ ಗೋವುಗಳನ್ನು ಪೂಜಿಸಿ ಅವುಗಳಿಗೂ ಬಾಗಿನ ಕೊಡುತ್ತಿದ್ದುದು ಕಂಡು ಬಂತು. ಇನ್ನೂ ಕೆಲವರು, ಗೌರಮ್ಮನ ಹಬ್ಬದ ಅಂಗವಾಗಿ ಹೆಣ್ಣು ಮಕ್ಕಳಿಗೆ ತವರಿನ ಬಾಗಿನವನ್ನು ಕೊಟ್ಟು ಸಂಪ್ರದಾಯ ಮೆರೆದರು.

ಗೌರಿ ದೇವಿ ಪಲ್ಲಕ್ಕಿ ಮೆರವಣಿಗೆ

ವೀರಾಜಪೇಟೆ : ಪಟ್ಟಣದ ಜೈನಿರ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಾಲಯದ ಗೌರಿ ದೇವಿಯ ನಗರ ಪ್ರದಕ್ಷಿಣೆ ಮುಂಜಾನೆ ದೇವಿಯ ಉತ್ಸವ ಮೂರ್ತಿಯನ್ನು ದೇವರ ಜಳಕದ ಬಳಿಕ ವಿವಿಧ ಕನಕಾಭರಣ ಗಳಿಂದ ಮತ್ತು ಬಗೆಬಗೆಯ ಹೂವಿನಿಂದ ಶೃಂಗರಿಸಿ ದೇವಿಗೆ ಪ್ರಿಯವಾದ ಕುಂಕುಮ, ಅರಶಿಣ, ಗಂಧ, ವಿವಿಧ ರಂಗಿನ ಬಳೆಗಳು, ಹೂವು, ಮಡಿವಸ್ತç, ಗೌರಿಗೆ ಶ್ರೇಷ್ಟವಾದ ಕರಿಮಣಿ, ಬಿಚ್ಚೋಲೆ ಗಳನ್ನು ಬಾಗಿನದಲ್ಲಿ ಇರಿಸಿ ಈಡುಗಾಯಿ ಒಡೆದು ಪೂಜೆ ಸಮರ್ಪಣೆಗೊಂಡವು. ನಂತರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಪ್ರಥಮ ಪೂಜೆ ನಡೆಯಿತು. ಬಳಿಕ ಪಲ್ಲಕ್ಕಿಯಲ್ಲಿ ಪ್ರದಕ್ಷಿಣೆ ಸಾಗಿತು. ಮುತೈದೆಯರು, ಹೆಣ್ಣು ಮಕ್ಕಳು ಶ್ರದ್ಧೆಯಿಂದ ಗೌರಮ್ಮ ದೇವಿಗೆ ಪೂಜೆಯನ್ನು ಸಲ್ಲಿಸಿ ಭಕ್ತಿ ಮೆರೆದರು.

(ಮೊದಲ ಪುಟದಿಂದ) ಮುಂಜಾನೆಯಿAದ ಹೊರಟ ಪಲ್ಲಕ್ಕಿ ಯಾತ್ರೆಯು ನಗರದ ಎಲ್ಲೆಡೆ ಸಂಚಾರ ಮಾಡಿ ಭಕ್ತರಿಂದ ಪೂಜೆ ಸ್ವೀಕರಿಸಿ ದೇವಾಲಯಕ್ಕೆ ಬಂದು ತಲುಪಿತು. ದೇವಾಲಯಲ್ಲಿ ವಿದ್ಯುತ್ ಅಲಂಕೃತ ಪೀಠದಲ್ಲಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಲಾಗಿ ಭಕ್ತರ ಸಮ್ಮುಖದಲ್ಲಿ ಶ್ರೀ ಗೌರಮ್ಮ ತಾಯಿಗೆ ವiಹಾಪೂಜೆ ನೆರವೇರಿಸಲಾಯಿತು. ಭಕ್ತರಿಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಪ್ರಸಾದ ವಿನಿಯೋಗ ನಡೆಯಿತು. ತಾ. ೭ ರಂದು (ಇಂದು) ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ.

ಗೋಣಿಕೊಪ್ಪದಲ್ಲಿ ಸ್ವರ್ಣಗೌರಿ ಪ್ರತಿಷ್ಠಾಪನೆ

ಗೋಣಿಕೊಪ್ಪಲು : ಉಮಾಮಹೇಶ್ವರಿ ದೇವಾಲಯದ ಸಮಿತಿಯ ವತಿಯಿಂದ ಸ್ವರ್ಣಗೌರಿಯನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ಗೋಣಿಕೊಪ್ಪ ನಗರದ ಪಾಲಿಬೆಟ್ಟ ರಸ್ತೆಯಲ್ಲಿರುವ ಪಾರ್ವತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಹೂವಿನ ಮಂಟಪದಲ್ಲಿ ಸ್ವರ್ಣಗೌರಿ ಪ್ರತಿಷ್ಠಾಪಿಸಿ ನಗರದಲ್ಲಿ ಮೆರವಣಿಗೆ ಮೂಲಕ ಉಮಾಮಹೇಶ್ವರಿ ದೇವಾಲಯಕ್ಕೆ ಕರೆತರಲಾಯಿತು.

ಸಾಂಪ್ರದಾಯಿಕ ವಾಲಗದೊಂದಿಗೆ ಮೆರವಣಿಗೆಯೂ ಪಟ್ಟಣದಲ್ಲಿ ಸಾಗಿ ಬರುತ್ತಿದ್ದಂತೆಯೇ ನಗರದ ವರ್ತಕರು, ಭಕ್ತರು ಸ್ವರ್ಣಗೌರಿಗೆ ಪೂಜೆ ಸಲ್ಲಿಸಿದರು.

ದೇವಾಲಯ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯದಲ್ಲಿ ಸ್ವರ್ಣಗೌರಿಗೆ ವಿವಿಧ ಪೂಜಾ ಕಾರ್ಯಗಳು ನಡೆದವು.