ಮಡಿಕೇರಿ, ಸೆ. ೬: ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾದ ಪ್ರಕರಣ ಸಂಬAಧ ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು ಸಾವಿನ ನೈಜ ಕಾರಣ ಪತ್ತೆಹಚ್ಚುವಂತೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮದೆನಾಡು ಬಳಿಯ ಬೆಟ್ಟತ್ತೂರು ಗ್ರಾಮದ ನಿವಾಸಿ ದೇವಿಪ್ರಸಾದ್ (೨೭) ಎಂಬಾತನ ಸಾವಿನ ಪ್ರಕರಣ ಸಂಬAಧ ಅನುಮಾನ ವ್ಯಕ್ತಪಡಿಸಿ ಅವರ ತಂದೆ ಕೆ.ಬಿ. ಕರುಂಬಯ್ಯ ಠಾಣೆಯಲ್ಲಿ ದೂರು ನೀಡಿದ್ದು, ಇದರನ್ವಯ ಪ್ರಕರಣ ದಾಖಲಾಗಿದೆ.
ಪ್ರಕರಣ ಹಿನ್ನೆಲೆ
ತಾ. ೩ ರಂದು ಬೆಳಿಗ್ಗೆ ದೇವಿಪ್ರಸಾದ್ ಎಂದಿನAತೆ ತನ್ನ ಆಟೋದಲ್ಲಿ ಮನೆಯಿಂದ ಕೆಲಸಕ್ಕೆ ತೆರಳಿದ್ದಾನೆ. ಈ ವೇಳೆ ಮಡಿಕೇರಿಗೆ ಹೋಗುವುದಾಗಿ ಮನೆಯವರಿಗೆ ತಿಳಿಸಿದ್ದಾನೆ. ಸಂಜೆ ಸುಮಾರು ೪ ಗಂಟೆ ಸುಮಾರಿಗೆ ತಂದೆ ಕರುಂಬಯ್ಯ ಕರೆ ಮಾಡಿ ಮನೆಗೆ ಸಾಮಗ್ರಿ ತರಲು ಹೇಳಿದ್ದು, ಚೇರಂಬಾಣೆಯಿAದ ತರುವುದಾಗಿಯೂ ಹೇಳಿದ್ದಾನೆ. ರಾತ್ರಿ ೮ ಗಂಟೆಯಾದರೂ ದೇವಿ ಪ್ರಸಾದ್ ಮನೆಗೆ ಬಂದಿರಲಿಲ್ಲ.
ದೇವಿಪ್ರಸಾದ್ ಸಹೋದರ ಕೌಶಿಕ್ ರಾತ್ರಿ ೮.೧೫ ಸುಮಾರಿಗೆ ಕೆಲಸ ಮುಗಿಸಿ ಆಟೋದಲ್ಲಿ ಮನೆಗೆ ಹಿಂದಿರುಗಿ ಮನೆಯ ಪಕ್ಕದಲ್ಲಿನ ಶೆಡ್‌ನಲ್ಲಿ ಆಟೋ ನಿಲುಗಡೆ ಮಾಡುವ ವೇಳೆ ಸಹೋದರ ದೇವಿ ಪ್ರಸಾದ್ ಆಟೋ ಕಂಡು ಬಂದಿದೆ.
ಈ ವೇಳೆ ಶೆಡ್‌ನಲ್ಲಿ ನೋಡಿದಾಗ ಶೆಡ್‌ನ ಮೇಲ್ಭಾಗದ ಬಡಿಗೆಗೆ ಆಟೋ ಕೇಬಲ್‌ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮನೆಯವರು ದೇವಿಪ್ರಸಾದ್ ಜೀವವಿರಬಹುದು ಎಂದು ಭಾವಿಸಿ ಕೆಳಗಿಳಿಸಿದ್ದಾರೆ. ಆದರೆ, ಆತ ಕೊನೆಯುಸಿರೆಳೆದಿದ್ದ. ನಂತರ ಪೊಲೀಸರು ಸ್ಥಳ ಪರಿಶೀಲಿಸಿ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದರು.
ಸಾವಿನ ಬಗ್ಗೆ ಅನುಮಾನ
ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು ಈ ಕುರಿತು ತನಿಖೆ ನಡೆಸುವಂತೆ ಮೂವರ ಹೆಸರು ಉಲ್ಲೇಖಿಸಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೇವಿಪ್ರಸಾದ್ ಸಾವಿಗೂ ಮುನ್ನ ದುರೀಣ, ನಾಗೇಶ್ ಹಾಗೂ ಹರಿಪ್ರಸಾದ್‌ರೊಂದಿಗೆ ಸಂಜೆ ವೇಳೆಯಲ್ಲಿ ಜಗಳವಾಗಿದ್ದು, ಇದೇ ವಿಷಯದಲ್ಲಿ ಮನನೊಂದು ದೇವಿಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಆರೋಪಿಸಿರುವ ಮೃತ ಯುವಕನ ತಂದೆ ಬೆಳ್ಯಪ್ಪ, ಸೂಕ್ತ ತನಿಖೆಗೆ ದೂರಿನ ಮೂಲಕ ಆಗ್ರಹಿಸಿದ್ದಾರೆ. ದೂರಿನಡಿ ಮೂವರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ತನಿಖೆ ಪ್ರಗತಿಯಲ್ಲಿದೆ.