ಚೆಯ್ಯಂಡಾಣೆ, ಸೆ. ೬ : ಕೊಂಡAಗೇರಿಯ ಎಲಿಯಂಗಾಡು ಸರಕಾರಿ ಪ್ರಾಥಮಿಕ ಶಾಲೆಗೆ ಕೊಂಡAಗೇರಿ ಮುಸ್ಲಿಂ ಜಮಾಅತ್ ಯುಎಇ ಸಮಿತಿಯ ವತಿಯಿಂದ ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು.

ಶಾಲಾ ಆಡಳಿತ ಮಂಡಳಿ ವತಿಯಿಂದ ಕೊಂಡAಗೇರಿ ಮುಸ್ಲಿಂ ಜಮಾಅತ್ ಯುಎಇ ಸಮಿತಿ ಕಾರ್ಯದರ್ಶಿ ಮುಜೀಬ್ ಮಾಸ್ಟರ್, ಮಾಜಿ ಅಧ್ಯಕ್ಷರಾದ ಮುಹಮ್ಮದ್ ಹಾಜಿ, ಸಮಿತಿ ಸದಸ್ಯರುಗಳಾದ ಮಸೂದ್, ಹನೀಫ, ಅಝೀಝ್ ಸಖಾಫಿ ಹಾಗೂ ಉಮ್ಮರ್ ದಾರಿಮಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಎಸ್‌ಡಿಎಂಸಿ ಅಧ್ಯಕ್ಷ ಅಬ್ಬಾಸ್ ಪಿ.ಎ., ಹಾಲುಗುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯೂಸುಫ್ ಹಾಜಿ, ಶಾಲಾ ಮುಖ್ಯ ಶಿಕ್ಷಕಿ ಅಶ್ವಿನಿ, ಶಿಕ್ಷಕ ವೃಂದದವರು ಹಾಗೂ ಊರಿನ ಪ್ರಮುಖರು, ಮತಿತ್ತರರು ಉಪಸ್ಥಿತರಿದ್ದರು.