ಮಡಿಕೇರಿ, ಸೆ. ೧೦: ಬೆಂಗಳೂರಿನಲ್ಲಿ ವಿಧಾನ ಸೌಧದಲ್ಲಿ ರಾಜಾಶ್ರಯ ಪಡೆದಿರುವ ಬೃಹತ್ ಟಿಂಬರ್ ಉದ್ಯಮಿಗಳು ಇಡೀ ಕೊಡಗನ್ನು ನಿಯಂತ್ರಿಸುತ್ತಿದ್ದಾರೆ. ಇವರಿಗೆ ಯಾವ ಕಾನೂನು ಅನ್ವಯವಾಗುವುದಿಲ್ಲ. ಆದರೆ ಕೊಡವರು ತಮ್ಮ ಗೃಹ ಉಪಯೋಗಕ್ಕೆ ತಾವು ನೆಟ್ಟ ಸಿಲ್ವರ್ ಮರ ಕಡಿದÀರೆ ಸರಕಾರ ಉಪದ್ರÀ ನೀಡುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಅವರು ವಿಷಾಧ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ನಡೆಯುತ್ತಿರುವ ಬೃಹತ್ ಭೂ-ಪರಿವರ್ತನೆ ವಿರುದ್ಧ ಚೇರಂಬಾಣೆಯಲ್ಲಿ ಸಂಘಟನೆ ವತಿಯಿಂದ ಆಯೋಜಿತ ಜಾಗೃತಿ ಅರಿವು-ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ದೊಡ್ಡ ದೊಡ್ಡ ರೆಸಾರ್ಟ್ಗಳಿಗೆ ಪರ್ವತವನ್ನು ಬಗೆದು ವಯನಾಡಿನ ಸ್ಥಿತಿಯ ಭೂ ಕುಸಿತಕ್ಕೆ ಆಹ್ವಾನಿಸುವ ಜಲನಾಳಗಳನ್ನು ಕೊಂದು ಮರಗಿಡಗಳನ್ನು ಲೂಟಿ ಮಾಡಲು ಸರಕಾರ ಅನುವು ಮಾಡಿಕೊಡುತ್ತಿದೆ. ಆದರೆ ಪರಿಸರ ಸ್ನೇಹಿಯಾಗಿ ಸ್ಥಳೀಯ ಕೊಡವ ಸಂಸ್ಕೃತಿಯನ್ನು ಬಿಂಬಿಸುತ್ತ ಸ್ಥಳೀಯ ಅಡುಗೆಯನ್ನು ಅತಿಥಿಗಳಿಗೆ ಪರಿಚಯಿಸುವ ಮೂಲಕ ಹೋಂಸ್ಟೇ ನಡೆಸುತ್ತಿರುವ ಸ್ಥಳೀಯರನ್ನು ಅವಮಾನಿಸಲಾಗುತ್ತಿದೆ. ಇತ್ತೀಚೆಗೆ ಅರಣ್ಯ ಮಂತ್ರಿಗಳು ಹೊರಡಿಸಿದ ಸುತ್ತೋಲೆಯಲ್ಲಿ ರೇಸಾರ್ಟ್ ಬಗ್ಗೆ ಆಗಲಿ ಹಾಗೂ ದೊಡ್ಡ ದೊಡ್ಡ ಕಂಪೆನಿಗಳ ನಿರಂತರ ಮರಹನನದ ಬಗ್ಗೆ ಆಗಲಿ ಕೊಡಗಿನ ಜಲಪ್ರಳಯ, ಭೂ ಪ್ರಳಯಕ್ಕೆ ಕಾರಣವೆನ್ನುವ ಪ್ರಸ್ತಾಪವಿಲ್ಲ. ಬದಲಿಗೆ ಅದನ್ನು ಸಂಪೂರ್ಣ ಮುಚ್ಚಿಹಾಕಿ ಸ್ಥಳೀಯ ಹೋಂಸ್ಟೇ ಹಾಗೂ ಸಣ್ಣ ರೈತರ ಅಭ್ಯುದಯ ಕಾರ್ಯವನ್ನು ಹೊಣೆಮಾಡಿ ಕಡಿವಾಣ ಹಾಕುವ ಮೂಲಕ ಬೃಹತ್ ಸಂಸ್ಥೆಗಳ ಅಕ್ರಮವನ್ನು ಸಕ್ರಮಗೊಳಿಸಲು ಸರ್ಕಾರ ಮುಂದಾಗಿದೆ ಎಂದು ನಾಚಪ್ಪ ಅವರು ಆರೋಪಿಸಿದರು.

ಆದಿಮಸಂಜಾತ ಕೊಡವ ಬುಡಕಟ್ಟು ಜನರು ಇಲ್ಲಿಯವರೆಗೆ ಹಸಿರಿನ ಕೊಡವ ಭೂಮಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಇಂದು ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಭೂಪರಿವರ್ತನೆ ಮಾಫಿಯಾಗಳು ಹಾಗೂ ಕಪುö್ಪಹಣದ ಬಂಡವಾಳಶಾಹಿಗಳು ಕೊಡವಲ್ಯಾಂಡ್ ಅನ್ನು ನಾಶ ಮಾಡುತ್ತಿದ್ದಾರೆ ಮತ್ತು ಕೊಡವರನ್ನು ಬಲಿಪಶು ಮಾಡುತ್ತಿದ್ದಾರೆ. ಈ ಎಲ್ಲಾ ಮಾಫಿಯಾಗಳಿಗೆ ಆಡಳಿತ ವ್ಯವಸ್ಥೆಯ ಕೃಪಾ ಕಟಾಕ್ಷವಿದೆ. ಕೊಡವರಿಗೆ ಮಾತೃಭೂಮಿಯಲ್ಲಿ ನೆಲೆ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ ಕೊಡವ ವಿರೋಧಿಗಳ ಬೆಂಬಲವಿದೆ ಎಂದು ಆರೋಪಿಸಿದರು.

ಕೊಡವಲ್ಯಾಂಡ್ ಅನ್ನು ಉಳಿಸಿಕೊಳ್ಳುವುದಕ್ಕಾಗಿ ಸಿ.ಎನ್.ಸಿ ಸಂಘಟನೆ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್‌ಶಿಪ್‌ಗಳ ನಿರ್ಮಾಣ, ಬೃಹತ್ ಭೂಪರಿವರ್ತನೆ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಆದರೆ ಅಧಿಕಾರದಲ್ಲಿರುವವರು ಹೋರಾಟದ ದಿಕ್ಕು ತಪ್ಪಿಸಿ ಜನರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಿದ್ದು, ಹೋಂಸ್ಟೇ ಮತ್ತು ಗೋದಾಮುಗಳ ನಿರ್ಮಾಣಕ್ಕೆ ಅನುಮತಿ ನೀಡದೆ ಸತಾಯಿಸಲು ಆರಂಭಿಸಿದ್ದಾರೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮಾತೃಭೂಮಿ ಕೊಡವಲ್ಯಾಂಡ್‌ಗೆ ಸಂಚಕಾರವಾಗಬಲ್ಲ ಬೃಹತ್ ಭೂಪರಿವರ್ತನೆಗೆ ಮಾತ್ರ ಗುಪ್ತವಾಗಿ ಅನುಮತಿ ನೀಡುತ್ತಿದ್ದಾರೆ.

ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು ``ಕೊಡವ ಲ್ಯಾಂಡ್'' ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್.ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ತಾ.೧೬ ರಂದು ಹುದಿಕೇರಿಯಲ್ಲಿ ಜನಜಾಗೃತಿ

ಸಿ.ಎನ್.ಸಿ ವತಿಯಿಂದ ತಾ.೧೬ ರಂದು ಹುದಿಕೇರಿಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ಮಾಹಿತಿ ನೀಡಿದರು. ಚೇರಂಬಾಣೆಯಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿಯಲ್ಲಿ ಕಲ್ಮಾಡಂಡ ದಮಯಂತಿ, ಕಲ್ಮಾಡಂಡ ರೀಟ, ಮಂದಪAಡ ರಮ್ಯಾ, ಕಲ್ಮಾಡಂಡ ಕವಿತಾ, ಕೇಕಡ ಗಂಗೆ ಅಪ್ಪಣ್ಣ, ಪಟ್ಟಮಾಡ ಸೀತಮ್ಮ, ತೇಲಪಂಡ ಶೈಲ, ಅಳಮಂಡ ಜೈ, ಅಜ್ಜಿನಂಡ ಪಾಪಣ್ಣ, ಪಟ್ಟಮಾಡ ಕುಶ, ಮಂದಪAಡ ಮನೋಜ್, ಚೀಯಬೆರ ಸೋಮಣ್ಣ, ಬೊಳ್ಳಾರ್ಪಂಡ ಪೂವಯ್ಯ, ಕಾಂಡAಡ ಅಪ್ಪಸಾಮಿ, ಬೊಳ್ಳಾರ್ಪಂಡ ಸಾಬು, ಬಾಚರಣಿಯಂಡ ಹ್ಯಾರಿ, ಶಿಪ್, ಬೃಹತ್ ಪಟ್ಟಮಾಡ ಮುತ್ತಣ್ಣ, ಮಂದಪAಡ ಸೂರಜ್, ಕೇಕಡ ತಮ್ಮಯ್ಯ, ಪಟ್ಟಮಾಡ ಅಶೋಕ್, ಮಣೋಟಿರ ಚಂದನ್, ಕೇಕಡ ತಮ್ಮಯ್ಯ, ಮೊಟ್ಟೆಯಂಡ ಪಾರ್ಥ, ನಾಪಂಡ ಗಣೇಶ್, ಕೊಕ್ಕಂಡ ಚಂಗಪ್ಪ, ಬಿಜ್ಜಂಡ ಬೋಪಯ್ಯ, ಕುಂಚೆಟ್ಟಿರ ಗೋಪಾಲ್, ಅಜ್ಜಿನಂಡ ಚೀಯಣ್ಣ, ಬಡ್ಡಿರ ಗಣಪತಿ, ಕೇಕಡ ಸಂಜು, ಬಾಚರಣಿಯಂಡ ಬಸಪ್ಪ, ಅಜ್ಜಿನಂಡ ಕುಟ್ಟಪ್ಪ, ಕೊಟ್ಟುಕತ್ತಿರ ಟಾಟ, ಕೇಕಡ ಸುಬ್ಬಯ್ಯ, ಕೇಕಡ ಕುಟ್ಟಪ್ಪ, ಕೇಕಡ ಪಳಂಗಪ್ಪ, ಬಡ್ಡಿರ ಕೀರ್ತಿ, ಪಟ್ಟಮಾಡ ಪ್ರಕಾಶ್, ಕಲ್ಮಾಡಂಡ ಮೊಣ್ಣಪ್ಪ, ಪಟ್ಟಮಾಡ ಸುರೇಶ್, ಅಯ್ಯಂಡ ಗಣೇಶ್, ಚಡಿಯಂಡ ಲವ, ಐಯಂಡ ಅನು, ಕೊಟ್ಟುಕತ್ತಿರ ಬಾಬಿ, ಕೇಕಡ ವಿಠಲ್, ಪೊನ್ನಚೆಟ್ಟಿರ ಹರೀಶ್, ಬೊಪ್ಪಡ್ತಂಡ ಡಾಲಿ ಹರಿ, ಪರುವಂಡ ಪ್ರದೀಪ್, ಕುಟ್ಟೇಟಿರ ಪ್ರಭು, ಕೇಕಡ ಬೋಪಣ್ಣ, ಕೇಕಡ ಕುಟ್ಟಪ್ಪ, ಕೇಕಡ ಉತ್ತಪ್ಪ, ತೇಲಪಂಡ ರಾಜಾ, ಕೇಕಡ ಕಾಳಪ್ಪ, ಮಂದಪAಡ ಗಣಪತಿ, ಕುಟ್ಟೇಟಿರ ಕುಂಞÂಪ್ಪ, ಕುಂಚೆಟ್ಟಿರ ಪೆಮ್ಮಯ್ಯ, ಕುಂಚೆಟ್ಟಿರ ಸೋಮಣ್ಣ, ಬಡ್ಡೀರ ಸಂಪತ್, ಐಯಂಡ ಹರೀಶ್, ಕಲ್ಮಾಡಂಡ ಕಾಳಪ್ಪ, ಕುಂಚೆಟ್ಟಿರ ರಮೇಶ್, ಇಂದAಡ ವಾಸು, ತೇಲಪಂಡ ಕಿರಣ್, ಕಬ್ಬಚ್ಚಿರ ಶೇರಿ, ಪೊನ್ನಚೆಟ್ಟೀರ ಪೊನ್ನಪ್ಪ, ಕೇಕಡ ಸುಬ್ರಮಣಿ, ಕೇಕಡ ಮೊಣ್ಣಪ್ಪ, ಬಾಚರಣಿಯಂಡ ಕಾರ್ಯಪ್ಪ, ಕೇಕಡ ಮಂದಣ್ಣ, ಪುಟ್ಟಿಚಂಡ ದೇವಯ್ಯ, ಪಟ್ಟಮಾಡ ಸತೀಶ್, ಪಟ್ಟಮಾಡ ಸುಂದರ್, ಪಟ್ಟಮಾಡ ವಿಜಯ್, ಚೀಯಬೇರ ರಾಬಿನ್, ಕುಂಚೆಟ್ಟಿರ ಪೂವಯ್ಯ, ತೇಲಪಂಡ ಗಣೇಶ್, ಕಲ್ಮಾಡಂಡ ಅಶೋಕ್, ಮಂದಪAಡ ವೇಣು, ಬೊಳ್ಳಾರ್ಪಂಡ ರಾಜಪ್ಪ, ಮೊಟ್ಟೆಯಂಡ ತಮ್ಮಯ್ಯ, ಕೇಕಡ ಕಿರಣ್, ಮಣೋಟಿರ ಚಿಣ್ಣಪ್ಪ, ಕಲ್ಮಾಡಂಡ ಗಣೇಶ್, ಪಟ್ಟಮಾಡ ಪ್ರಧಾನ್, ಪಟ್ಟಮಾಡ ಹೇಮ್, ತೇಲಪಂಡ ಮಂದಣ್ಣ, ಇದಂಡ ದೇವಯ್ಯ, ಕುಂಚೆಟ್ಟೀರ ಕಾರ್ಯಪ್ಪ, ಪೊಡನೋಳಂಡ ಸೋಮಣ್ಣ, ಮಂದಪAಡ ನಾಣಯ್ಯ, ಇದಂಡ ಕುಮಾರ್, ಕೇಕಡ ಬೋಪಣ್ಣ, ನಾಪಂಡ ಪ್ರತಾಪ್, ನಾಟೋಳಂಡ ಜೈರಾಜ್, ಮುಕ್ಕಾಟಿರ ವಿಠಲ್, ಚೀಯಬೇರ ರೋಶನ್, ಅಳಮಂಡ ನೆಹರು, ಕಲ್ಮಾಡಂಡ ವಾಸು, ಐಯಂಡ ಅಯ್ಯಪ್ಪ, ಬಡ್ಡೀರ ಪಳಂಗಪ್ಪ, ಅಜ್ಜಿನಂಡ ವಿಶು, ಅಜ್ಜಿನಂಡ ಸುರೇಶ್, ಅಜ್ಜಿನಂಡ ರಘು, ಅಜ್ಜಿನಂಡ ಜಗದೀಶ್, ಬೊಪ್ಪಡ್ತಂಡ ಪೂಣಚ್ಚ, ಮೊಟ್ಟೆಯಂಡ ಮೊಣ್ಣಪ್ಪ, ಕಬ್ಬಚ್ಚೀರ ಉತ್ತಯ್ಯ, ಕಾಂಡAಡ ಭೀಮಯ್ಯ, ಬಡ್ಡೀರ ನಂದಾ, ಪಟ್ಟಮಾಡ ಬೊಳ್ಳಿಯಪ್ಪ, ಮೇರಿಯಂಡ ಮೋಹನ್, ಮಂದಪAಡ ರಂಜಿ, ಬಿಜ್ಜಂಡ ಸೋಮಯ್ಯ, ಬಾಚರಣಿಯಂಡ ಲವ, ಬೋಪಡ್ತಂಡ ಸುಬ್ಬಯ್ಯ, ಚೀಯಬೇರ ಪಾಪಣ್ಣ, ಮೊಟ್ಟೆಯಂಡ ಶಂಬು, ಪೊನ್ನಚೆಟ್ಟೀರ ಮಿತ್ರ, ಪಳಂಗೇಟಿರ ರಾಮು, ಚಡಿಯಂಡ ಡಾಲಿ, ಮಂದಪAಡ ಅರಸು, ಅಜ್ಜಿನಂಡ ಸಾಬು ಸೇರಿದಂತೆ ಮತ್ತಿತರರು ಪಾಲ್ಗೊಂಡು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡರು.