ಕಣಿವೆ, ಸೆ. ೧೦: ವಿದ್ಯುತ್ ಅವಘಡದಿಂದಾಗಿ ಗೃಹೋಪಯೋಗಿ ಎಲೆಕ್ಟಿçಕಲ್ ಪರಿಕರಗಳು ಹಾನಿಯಾಗಿವೆ ಎಂದು ಆರೋಪಿಸಿ ಪರಿಕರಗಳೊಂದಿಗೆ ಕುಶಾಲನಗರದ ಚೆಸ್ಕಾಂ ಮುಂದೆ ಸಾಂಕೇತಿಕ ಧರಣಿ ನಡೆಸಿದ ಪ್ರಸಂಗ ಎದುರಾಯಿತು.

ಗೊಂದಿಬಸವನಹಳ್ಳಿ ಗ್ರಾಮದ ಕೃಷಿಕರಾದ ನಿಂಗೇಗೌಡ ತಮ್ಮ ಮನೆಯಲ್ಲಿನ ಟಿವಿ, ಮಿಕ್ಸಿ, ಫ್ರಿಜ್, ಮೊದಲಾದ ಪರಿಕರಗಳು ಚೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷö್ಯದಿಂದಾಗಿ ವಿದ್ಯುತ್ ಅವಘಡ ಸಂಭವಿಸಿ ಹಾಳಾಗಿದ್ದು ನಷ್ಟ ಉಂಟಾಗಿದೆ. ಹಾಳಾಗಿರುವ ಪರಿಕರಗಳನ್ನು ಸರಿಪಡಿಸಲು ಚೆಸ್ಕಾಂ ಅಧಿಕಾರಿಗಳು ಪರಿಹಾರ ಕೊಡಬೇಕೆಂದು ನಿಂಗೇಗೌಡ ಆಗ್ರಹಿಸಿದರು.

ಕುಶಾಲನಗರ ಚೆಸ್ಕಾಂನಿAದ ಗೊಂದಿ ಬಸವನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ತಂತಿಗಳು ಹಾದು ಹೋಗಿರುವ ಮಾರ್ಗದಲ್ಲಿ ಬೆಳೆದು ನಿಂತಿರುವ ಮರಗಿಡಗಳ ರೆಂಬೆಗಳು ವಿದ್ಯುತ್ ತಂತಿಗಳಿಗೆ ತಾಗಿ ಅಕ್ಕಪಕ್ಕದ ಮನೆಗಳಲ್ಲಿ ಆಗಿಂದಾಗ್ಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸುತ್ತಲೇ ಇದೆ. ಇದು ಗ್ರಾಮದ ಇನ್ನೂ ಅನೇಕ ಮಂದಿಗೆ ನಷ್ಟ ಉಂಟುಮಾಡಿದೆ. ವಿದ್ಯುತ್ ತಂತಿಗಳ ಮಾರ್ಗದಲ್ಲಿ ಬೆಳೆದಿರುವ ಗಿಡ ಮರಗಳನ್ನು ತೆರವುಗೊಳಿಸಿ ಎಂದು ಎಷ್ಟು ಹೇಳಿದರೂ ಚೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ನಿವಾಸಿ ನಿಂಗೇಗೌಡ ಆರೋಪಿಸಿದರು. ತಕ್ಷಣಕ್ಕೆ ವಿದ್ಯುತ್ ತಂತಿಗಳ ಮಾರ್ಗದಲ್ಲಿ ಬೆಳೆದಿರುವ ರೆಂಬೆಗಳನ್ನು ತೆರವುಗೊಳಿಸಲಾಗುವುದು. ಹಾಳಾಗಿರುವ ಗೃಹೋಪಯೋಗಿ ವಿದ್ಯುತ್ ಪರಿಕರಗಳಿಗೆ ಪರಿಹಾರ ಕಷ್ಟಸಾಧ್ಯ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಚೆಸ್ಕಾ ಸಹಾಯಕ ಅಭಿಯಂತರರು ತಿಳಿಸಿದರು. ಕೊನೆಗೆ ಅಭಿಯಂತರರ ಕೋರಿಕೆ ಮೇರೆಗೆ ನಿವಾಸಿ ನಿಂಗೇಗೌಡ ಪರಿಕರಗಳೊಂದಿಗೆ ಮರಳಿದರು.

ವರದಿ : ಕೆ.ಎಸ್.ಮೂರ್ತಿ