ಭಾರತ ಸರ್ಕಾರದ ಪರಿಸರ ಜೀವಿಶಾಸ್ತç ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ನಿರ್ದೇಶನದ ಮೇರೆಗೆ ಸೆಪ್ಟೆಂಬರ್ ೧೧ ರಂದು ರಾಷ್ಟಿçÃಯ ಅರಣ್ಯ ಹುತಾತ್ಮರ ದಿನ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ, ದೇಶದ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಾಡಿದ ತ್ಯಾಗ ಮತ್ತು ಬಲಿದಾನಗಳ ಸ್ಮರಣೆಗಾಗಿ ರಾಷ್ಟಿçÃಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ.

೧೭೩೦ರ ಸೆಪ್ಟೆಂಬರ್ ೧೧ರಂದು ಜೋಧಪುರ್‌ನ ಮಹಾರಾಜ ಅಭಯಸಿಂಗ್ ಹೊಸ ಅರಮನೆ ನಿರ್ಮಾಣಕ್ಕೆ ಕೆಜಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ಕಡಿಯಲು ವಿರೋಧಿಸಿದ ಬಿಷ್ಣೋಯಿ ಸಮುದಾಯದ ೩೬೩ ಪುರುಷ, ಮಹಿಳೆ ಮತ್ತು ಮಕ್ಕಳನ್ನು ಸೈನಿಕರಿಂದ ಹತ್ಯೆಗೆಯ್ಯಲಾಯಿತು. ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರ್ಕಾರ ಈ ದಿನವನ್ನು ರಾಷ್ಟಿçÃಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿದೆ.

ಇಂತಹ ಆದರ್ಶ ವ್ಯಕ್ತಿಗಳಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದ ದಿ. ಪಿ. ಶ್ರೀನಿವಾಸ್ ಅವರು ಒಬ್ಬರು. ಕಾಡಿಗಾಗಿ ಜನನ, ಕಾಡಿಗಾಗಿ ಜೀವನ, ಕಾಡಿಗಾಗಿ ಮರಣ ಎಂಬುದನ್ನೇ ತತ್ವಗಳನ್ನಾಗಿ ಇಟ್ಟುಕೊಂಡಿದ್ದ ದಿ. ಪಿ. ಶ್ರೀನಿವಾಸ್ ದಂತಚೋರ, ಶ್ರೀಗಂಧ ಕಳ್ಳ ಸಾಗಾಣಿಕೆದಾರ ವೀರಪ್ಪನ್‌ನ ನಯವಂಚನೆ ಚಕ್ರವ್ಯೂಹದಲ್ಲಿ ಸಿಲುಕಿ ೧೯೯೧ರ ನವೆಂಬರ್ ೧೦ರಂದು ವಿಧಿವಶರಾದರು. ದಿವಂಗತ ಪಿ.ಶ್ರೀನಿವಾಸ್ ಅವರ ಕಾರ್ಯದಕ್ಷತೆಯನ್ನು ಮೆಚ್ಚಿ ಭಾರತ ಸರ್ಕಾರವು ಇವರಿಗೆ "ಕೀರ್ತಿಚಕ್ರ" ಶೌರ್ಯ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಿದೆ.

ಇದೇ ರೀತಿ ತಮ್ಮ ಜೀವದ ಹಂಗನ್ನು ತೊರೆದು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಇಲ್ಲಿಯವರೆಗೆ ೬೧ ಅರಣ್ಯ ಅಧಿಕಾರಿ/ಸಿಬ್ಬಂದಿಗಳು ಹುತಾತ್ಮರಾಗಿರುತ್ತಾರೆ.

ಕಳೆದ ಒಂದು ವರ್ಷದಲ್ಲಿ ಅರಣ್ಯ ಮತ್ತು ವನ್ಯಜೀವಿ ರಕ್ಷಣೆಯಲ್ಲಿ ತೊಡಗಿರುವಾಗ ೪ ಸಿಬ್ಬಂದಿಗಳು ತಮ್ಮ ಪ್ರಾಣ ತ್ಯಾಗ ಮಾಡಿರುತ್ತಾರೆ.

ಕಳೆದ ವರ್ಷವಷ್ಟೇ ಮಡಿಕೇರಿ ವಿಭಾಗದ ಹೊರಗುತ್ತಿಗೆ ನೌಕರರಾದ ಗಿರೀಶ್ ಎಂ.ವೈ. ಸಿಬ್ಬಂದಿಗಳ ಜೊತೆ ಕಾಡಾನೆಯನ್ನು ಕಾಡಿಗೆ ಹಿಮ್ಮೆಟ್ಟಿಸಲು ಹೋದಾಗ ಕಾಡಾನೆಯು ದಿಕ್ಕನ್ನು ಬದಲಿಸಿ ಸಿಬ್ಬಂದಿಯವರಿದ್ದ ಕಡೆಗೆ ದಾಳಿ ಮಾಡಲು ಮುಂದಾಗುತ್ತಿದ್ದAತೆ ಸಿಬ್ಬಂದಿಯವರೆಲ್ಲರೂ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಓಡಿದ್ದು, ಇವರು ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿರುತ್ತಾರೆ.

ಅರಣ್ಯ ಇಲಾಖೆಯಲ್ಲಿ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರಣ್ಯ ರಕ್ಷಕ, ಅರಣ್ಯ ವೀಕ್ಷಕ/ಕಾವಲುಗಾರ, ಉಪ ವಲಯ ಅರಣ್ಯಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿಗಳಿಗೆ ಮಾತ್ರ ಅನ್ವಯವಾಗುವಂತೆ ಕರ್ತವ್ಯದಲ್ಲಿರುವಾಗ ಮರಣ ಹೊಂದಿದರೆ ನೀಡಲಾಗುತ್ತಿದ್ದ ಪರಿಹಾರವನ್ನು ಘನ ಸರ್ಕಾರ ರೂ.೨೦ ಲಕ್ಷಗಳಿಂದ ರೂ. ೩೦ ಲಕ್ಷಗಳಿಗೆ ಪರಿಷ್ಕರಿಸಿರುತ್ತದೆ.

ಈ ಹುತಾತ್ಮರ ದಿನಾಚರಣೆಯನ್ನು ರಾಜ್ಯದ ಕೇಂದ್ರ ಸ್ಥಾನದಲ್ಲಿಯೇ ಅಲ್ಲದೇ ಎಲ್ಲಾ ಅರಣ್ಯ ವಿಭಾಗಗಳ ಕೇಂದ್ರ ಸ್ಥಾನಗಳಲ್ಲಿಯೂ ಆಚರಿಸಲಾಗುತ್ತದೆ. ಮಾಹಿತಿ: ಅರಣ್ಯ ಇಲಾಖೆ