ಮಡಿಕೇರಿ, ಸೆ. ೧೦: ಪಂಜಾಬ್‌ನ ಜಲಂಧರ್‌ನಲ್ಲಿ ಹಾಕಿ ಇಂಡಿಯಾ ವತಿಯಿಂದ ತಾ.೯ರಿಂದ ಆರಂಭಗೊAಡಿರುವ ಜೂನಿಯರ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿರುವ ಹಾಕಿ ಕರ್ನಾಟಕ ತಂಡದಲ್ಲಿ ಜಿಲ್ಲೆಯ ೬ ಆಟಗಾರರು ಪಾಲ್ಗೊಂಡಿದ್ದಾರೆ. ಅಲ್ಲದೆ ರಾಜ್ಯ ತಂಡದ ಕೋಚ್ ಆಗಿಯೂ ಜಿಲ್ಲೆಯವರಾದ ತರಬೇತುದಾರರು ಭಾಗವಹಿಸಿದ್ದಾರೆ.

ತಂಡದ ಆಟಗಾರರಾಗಿ ತರುಣ್ ಗಣಪತಿ ಕೆ.ಕೆ, ಆರ್ಯನ್ ಉತ್ತಪ್ಪ ಎಂ.ಟಿ, ಧ್ರುವ ಬಿ.ಎಸ್, ಧನುಷ್ ಕಾವೇರಪ್ಪ ಎಂ.ಎ, ಮೋಕ್ಷಿತ್ ಸಾಲ್ಯನ್ ಬಿ.ಯು ಹಾಗೂ ಗೌರವ್ ಗಣಪತಿ ಕೆ.ಆರ್. ಭಾಗವಹಿಸಿದ್ದಾರೆ.

ತಂಡದ ಕೋಚ್ ಆಗಿ ಮೇಚಂಡ ತನು ನಂಜಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಪಂದ್ಯಾವಳಿ ತಾ.೧೯ರ ತನಕ ಜರುಗಲಿದೆ. ಆರ್ಯನ್ ಉತ್ತಪ್ಪ ತಂಡದ ಉಪನಾಯಕರಾಗಿದ್ದಾರೆ. ೧೮ ಮಂದಿ ಆಟಗಾರರ ಪೈಕಿ ಜಿಲ್ಲೆಯ ೬ ಮಂದಿ ತಂಡದಲ್ಲಿರುವುದು ವಿಶೇಷವಾಗಿದೆ.