ಟ್ರಾö್ಯಕ್ ಸೂಟ್ ವಿತರಣೆ

ಸುಂಟಿಕೊಪ್ಪ, ಸೆ. ೧೦: ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿಯಿAದ ಕಾನ್‌ಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮ ಪಂಚಾಯಿತಿ ವತಿಯಿಂದ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಟ್ರಾö್ಯಕ್ ಸೂಟ್ ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಕೊಳಂಬೆ ಸುಭಾಶ್, ಹಿಂದೆ ಸರಕಾರಿ ಶಾಲೆಗಳಲ್ಲಿ ಸೂಕ್ತ ಸೌಲಭ್ಯ ಇರಲಿಲ್ಲ. ಇಂದು ಎಲ್ಲಾ ಸೌಲಭ್ಯ ದೊರೆಯುತ್ತಿದ್ದು, ಸಹಕಾರಿ ಶಾಲೆಗಳಲ್ಲಿ ಮಕ್ಕಳನ್ನು ಪೋಷಕರು ದಾಖಲಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಈ ಸಂದರ್ಭ ಸರಕಾರದಿಂದ ನೀಡುವ ಶೂ ಅನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೂಳಪ್ಪ ವಿತರಿಸಿದರು. ಈ ಸಂದರ್ಭ ಮುಖ್ಯ ಶಿಕ್ಷಕ ಮೂರ್ತಿ ಶಾಲೆಗೆ ಬೇಕಾದ ಸೌಲಭ್ಯಗಳ ಬೇಡಿಕೆಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನಾಥ್, ಶಿಕ್ಷಕಿಯರಾದ ಜಿ.ಕೆ. ಪಾರ್ವತಿ, ಸುಜಾತ, ಸುಮಿತ್ರ, ಇತರರು ಹಾಜರಿದ್ದರು.