ನಾನು ಬಹಳ ವರ್ಷಗಳಿಂದ ಮಡಿಕೇರಿ ಮತ್ತು ಭಾಗಮಂಡಲಕ್ಕೆ ಸಂಪರ್ಕ ಕಲ್ಪಿಸುವವÀನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ವರ್ಷವಿಡಿ ಸಾವಿರಾರು ಭಕ್ತರು ಕಾವೇರಿ ಮಾತೆಯ ದರ್ಶನ ಪಡೆಯಲು ನನ್ನ ಮುಖಾಂತರವೇ ತೆರಳಬೇಕಾಗಿರುವುದು ನನಗೊಂದು ಹೆಮ್ಮೆಯ ವಿಷಯವೇ ಸರಿ.
ನನ್ನನ್ನು ನಿರ್ಮಿಸಿ ಎಷ್ಟು ವರ್ಷಗಳಾದವೋ ನನಗೂ ಗೊತ್ತಿಲ್ಲ, ಈ ಹಿಂದಿನ ದಿನಗಳಲ್ಲಿ ನನ್ನ ಆರೈಕೆ ಉತ್ತಮವಾಗಿತ್ತು. ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಕಾರ್ಮಿಕರು ನನ್ನ ಮೇಲೆ ಕಾಳಜಿ ಇಟ್ಟಿದ್ದರು, ಮಳೆಗಾಲ ಬರುವ ಮೊದಲೇ ಚರಂಡಿಗಳನ್ನು ಸ್ಚಚ್ಛಗೊಳಿಸಿ ಮಳೆ ನೀರು ಹರಿದು ಹೋಗಲು ಅನುವು ಮಾಡಿಕೊಡುತ್ತಿದ್ದರು. ನನ್ನ ಮೇಲಿನ ತಗ್ಗು ಗುಂಡಿಗಳನ್ನು ಸರಿಪಡಿಸಿ ಹೊಸ ಡಾಂಬರೀಕರಣದೊAದಿಗೆ ನನ್ನನ್ನು ಶೃಂಗರಿಸುತ್ತಿದ್ದರು.
ತುಲಾ ಸಂಕ್ರಮಣದ ಜಾತ್ರೆ ಬಂತೆAದರೆ ಮಡಿಕೇರಿಯಿಂದ ಭಾಗಮಂಡಲ, ತಲಕಾವೇರಿಯವರೆಗೆ ನನ್ನ ಎಡ-ಬಲದಲ್ಲಿ ಸುಣ್ಣ-ಬಣ್ಣ ಬಳಿದು ಮಿನುಗಿಸುತ್ತಿದ್ದರು.
ಆದರೆ.......ಈಗ ಹಳೇ ಕಾಲದ ವೈಭವ ನೆನಪಾಗಿಯೇ ಉಳಿದಿದೆ ಮಡಿಕೇರಿಯಿಂದ ಭಾಗಮಂಡಲದವರೆಗೆ ಬರುವ ಯಾತ್ರಿಕರನ್ನು, ಭಕ್ತರನ್ನು ನೆನೆದರೆ ಅಯ್ಯೋ ಅನಿಸುತ್ತದೆ. ರಸ್ತೆಯುದ್ದಕ್ಕೂ ಹಿಂದೆAದು ಕಾಣದ ಪ್ರಪಾತಗಳೂ ಅದರಲ್ಲಿ ಹಲವು ವಿಧದ ವಾಹನಗಳು ಅದರೊಳಗೆ ಕುಳಿತಿರುವವರ ಶರೀರ ಎಡಕ್ಕೆ-ಬಲಕ್ಕೆ ವಾಲಿ ಮುಗ್ಗರಿಸುವುದು ಸರ್ವೇ ಸಾಮಾನ್ಯವಾಗಿದೆ. ಕೊಡಗಿನ ಜನರಿಗೆ ಮದುವೆ ಸಮಾರಂಭಗಳಲ್ಲಿ ವಾದ್ಯದೊಂದಿಗೆ ಕುಣಿದು ಅಭ್ಯಾಸವಿರುವುದರಿಂದ ಹಾಗೂ ನಿತ್ಯ ಪ್ರಯಾಣಿಸುವುದರಿಂದ ಇದೆಲ್ಲಾ ಸರ್ವೆ ಸಾಮಾನ್ಯವಾದಂತಿದೆ.
ಆದರೂ ನನ್ನ ಈ ಪರಿಸ್ಥಿತಿಯನ್ನು ನೋಡಿ ಸುಧಾರಿಸುವವರು ಯಾರೂ ಇಲ್ಲವೇ...? ಈ ಮಧ್ಯ ನಿನಗೆ ಬಡ್ತಿ ನೀಡಿ ನಿನ್ನನ್ನು ಹೆದ್ದಾರಿ ಮಾಡುತ್ತೇವೆ ಎಂದು ಅದೆಷ್ಟೋ ವರ್ಷಗಳಿಂದ ನನ್ನನ್ನು ಮಂಕು ಮಾಡುತ್ತಿರುವುದು ನನಗೂ ಸಹ ಭ್ರಮೆ ಅನಿಸುತ್ತಿದೆ. ಭಾಗಮಂಡಲ, ತಲಕಾವೇರಿಯ ಪವಿತ್ರ ಕ್ಷೇತ್ರಕ್ಕೆ ವರ್ಷವಿಡಿ ಬೇರೆ ಬೇರೆ ರಾಜ್ಯಗಳಿಂದ ಸಾವಿರಾರು ವಾಹನಗಳು ಮತ್ತು ಭಕ್ತರು ಬರುತ್ತಿದ್ದರೂ ನನ್ನನ್ನು ಈ ಹೀನಾಯ ಸ್ಥಿತಿಯಲ್ಲಿ ಬಿಟ್ಟಿದ್ದೀರಲ್ಲವೇ.. ರಸ್ತೆ ಒಂದು ಮೂಲಭೂತ ಸಮಸ್ಯೆ, ಇದನ್ನೇ ಸರಿಪಡಿಸಲಾಗುವುದಿಲ್ಲವೇ? ತುಲಾ ಸಂಕ್ರಮಣದ ತೀರ್ಥೊದ್ಭವದ ಸಮಯದಲ್ಲಿ ಅನೇಕ ಗಣ್ಯರು ತೀರ್ಥೊದ್ಭವವನ್ನು ಕಣ್ತುಂಬಿಕೊಳ್ಳಲು ಪ್ರಥಮ ಪಂಕ್ತಿಯಲ್ಲಿ ಇರುತ್ತಾರೆ. ಆದರೂ ಅವರಿಗೆ ನನ್ನ ಮೇಲೆ ಕರುಣೆ ಇಲ್ಲವೇ? ಕಾವೇರಿ ಮಾತೆಯ ಈ ಪ್ರಸಿದ್ಧ ಪ್ರದೇಶಕ್ಕೆ ಸಂಪರ್ಕಕಲ್ಪಿಸುವ ನನ್ನ ವ್ಯಥೆಯನ್ನು ಯಾರೊಂದಿಗೆ ಹೇಳಲಿ.? ಇನ್ನಾದರೂ ನನ್ನ ಮೇಲೆ ಕರುಣೆಯಿಟ್ಟು ನನ್ನನ್ನು ರಕ್ಷಿಸಿ, ನನ್ನನ್ನು ರಕ್ಷಿಸಿ, ನನ್ನನ್ನು ರಕ್ಷಿಸಿ...!
ಇಂತಿ ತಮ್ಮ
ಮಡಿಕೇರಿ-ಭಾಗಮಂಡಲ-ತಲಕಾವೇರಿ ರಸ್ತೆ